ಭಾರತೀಯ ಸಂಸ್ಕೃತಿ ಪುರಾತನ ಸಂಸ್ಕೃತಿ: ನಂಜಾವಧೂತ ಸ್ವಾಮೀಜಿ

| Published : Jan 13 2024, 01:32 AM IST

ಸಾರಾಂಶ

ಸಾಮೂಹಿಕ ಅಷ್ಟಲಕ್ಷ್ಮೀ ಪೂಜಾಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊರಟಗೆರೆ

ಭಾರತೀಯ ಸಂಸ್ಕೃತಿ ವಿಶ್ವದಲ್ಲೇ ಪುರಾತನ ಮತ್ತು ಸಂಪ್ರದಾಯಿಕ ಸಂಸ್ಕೃತಿಯಾಗಿದ್ದು, ನಮ್ಮದೇಶದಲ್ಲಿ ಇರುವ ಶಕ್ತಿಯತ ಪರಿಸರ ಬೇರೆಡೆಯಿಲ್ಲ ಎಂದು ಸ್ಪಟಿಕಪುರಿ ಮಹಾಸಂಸ್ಥಾನದ ಪೀಠಾದ್ಯಕ್ಷ ನಂಜಾವಧೂತ ಸ್ವಾಮೀಜಿ ತಿಳಿಸಿದರು.

ತಾಲೂಕಿನ ತುಂಬಾಡಿ ಗ್ರಾಮದ ಶ್ರೀ ಆಂಜಿನೇಯ ಸ್ವಾಮಿ ಸಮುದಾಯ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ವತಿಯಿಂದ ನಡೆದ ಗೊರವನಹಳ್ಳಿ ಮಹಾಲಕ್ಷ್ಮೀ ಉತ್ಸವಮೂರ್ತಿಯೊಂದಿಗೆ ಸಾಮೂಹಿಕ ಅಷ್ಟಲಕ್ಷ್ಮೀ ಪೂಜಾಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿವ್ಯಸಾನಿದ್ಯ ವಹಿಸಿ ಮಾತನಾಡಿ, ನಮ್ಮ ಸಂಸ್ಕೃತಿಯ ಧಾರ್ಮಿಕ ಆಚರಣೆಯಲ್ಲಿ ಒಂದೊಂದು ಪೂಜೆಗೂ ಅರ್ಥಗಳಿವೆ. ಇಂದು ತಾಯಂದಿರು ಅಷ್ಟಲಕ್ಷ್ಮೀ ಪೂಜಾಕಾರ್ಯವನ್ನು ಒಟ್ಟಾಗಿ ಮಾಡುತ್ತಿದ್ದಾರೆ. ಲಕ್ಷ್ಮೀ ಎಂದರೆ ಹಣವಷ್ಟೆ ಅಲ್ಲ, ಧ್ಯಾನ, ಧೈರ್ಯ, ಸುಖ, ಶಾಂತಿ, ನೆಮ್ಮಂದಿ ಸೇರಿದಂತೆ ಅಷ್ಟ ಲಕ್ಷ್ಮೀಯರು ಇರುತ್ತಾರೆ ಅವು ಸಹ ಸಿದ್ಧಿಯಾಗಬೇಕು ಎಂದರು.

ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತವೆ. ಅವುಗಳನ್ನು ಧೈರ್ಯದಿಂದ ಸಮಯೋಚಿತವಾಗಿ ತಾಳ್ಮೆಯಿಂದ ಪರಿಹರಿಸಿಕೊಳ್ಳಬೇಕು. ಇದರೊಂದಿಗೆ ಇತರರ ಕಷ್ಟಗಳಿಗೂ ಸ್ಪಂದಿಸಿದರೆ ಉತ್ತಮ ಸಮಾಜ ರೂಪಗೊಳ್ಳುತ್ತೆದೆ. ಭಾರತೀಯ ನೆಲ ವಾತಾವರಣ ಎಷ್ಟು ಶಕ್ತಿಯುತವೆಂದರೆ ಕರೋನಾ ಸಂಕಷ್ಟದಲ್ಲಿ ಮುಂದುವರೆದ ದೇಶಗಳು ಅಪಾರ ಪ್ರಾಣ ಹನಿ ಅನುಭವಿಸಿ ನಲುಗಿದರೆ, ಭಾರತ ಮಾತ್ರಇತರ ದೇಶಗಳಿಂತ ಉತ್ತಮವಾಗಿ ಸಂಕಷ್ಟ ಎದುರಿಸಿತ್ತು. ಇದು ನಮ್ಮ ನೆಲದ ಪರಿಸರದ ಮಹತ್ವ ಎಂದರು.

ಇಂದು ಸ್ವಾಮಿ ವಿವೇಕನಂದರ ಜಯಂತಿಯಾಗಿದ್ದು ಭಾರತೀಯ ಸಂಸ್ಕೃತಿ ಪರಂಪರೆಯ ಶಕ್ತಿ ಮಹತ್ವವನ್ನು ಮೊದಲು ಇಡೀ ವಿಶ್ವ ನೋಡುವಂತೆ ಮಾಡಿದ ಮಹಾತ್ಮರು ವಿವೇಕನಂದರಾಗಿದ್ದಾರೆ. ಅವರ ತತ್ವಗಳು ವಿಶ್ವಕ್ಕೆ ಮಾದರಿ, ಯುವಕರಲ್ಲಿ ಸ್ಪೂರ್ತಿ ಮೂಡಿಸುತ್ತದೆ, ಜೀವದಲ್ಲಿ ಅವರು ಪಟ್ಟ ಕಷ್ಟಗಳು ಹಲವಾರು ಆದರೆ ಅದನ್ನು ಅವರು ಮೆಟ್ಟಿನಿಂತರು. ಅತಿಕಡಿಮೆ ಜೀವನದಪಯಣದಲ್ಲಿ ಮಹಾನ್ ಸಾಧನೆ ಮಾಡಿದ ಸಂತರು ಸ್ವಾಮಿ ವಿವೇಕನಂದರು ಎಂದರು.

ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ಸಾಮೂಹಿಕ ಅಷ್ಟಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಧರ್ಮಸ್ಥಳ ಸಂಸ್ಥೆಯ ಅಧಿಕಾರಿಗಳಾದ ಬಾಲಕೃಷ್ಣ, ಉಮಾಪತಿ ಮುಖಂಡರಾದ ನಟರಾಜು, ಲಕ್ಷ್ಮೀಶ್, ವಿ.ಕೆ. ವೀರಕ್ಯಾತರಾಯ ವೆಂಕಟೇಶ್, ಪ್ರಸನ್ನಕುಮಾರ್, ಹೇಮಂತ್, ಕೃಷ್ಣಚಾರ್ ಸೇರಿದಂತೆ ಇತರರು ಹಾಜರಿದರು.