ಭಾರತೀಯ ಶಿಕ್ಷಣ ಪರಂಪರೆ ವಿಶ್ವದಲ್ಲೇ ಪ್ರಾಚೀನ: ಡಾ.ಯೋಗಣ್ಣ

| Published : Sep 19 2025, 01:00 AM IST

ಸಾರಾಂಶ

ಭಾರತ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ರಾಮಾಯಣದಂತಹ ಬೃಹತ್ ಕಾವ್ಯವನ್ನು ರಚನೆ ಮಾಡಿದಂತಹ ಆದಿಗುರು ವಾಲ್ಮೀಕಿ ಬಹುದೊಡ್ಡ ಶಿಕ್ಷಕ. ನಂತರ ದ್ರೋಣಾಚಾರ್ಯ, ಶ್ರೀ ಕೃಷ್ಣ ಎಲ್ಲರೂ ಇತರರಿಗೆ ಬೋದಿಸುವ ಮೂಲಕ ಮಹಾ ಗುರುಗಳಾದರು.

ಕನ್ನಡಪ್ರಭ ವಾರ್ತೆ ಮೈಸೂರು

ಭಾರತೀಯ ಶಿಕ್ಷಣ ಪರಂಪರೆಯು ವಿಶ್ವದಲ್ಲೇ ಪ್ರಾಚೀನವಾದದ್ದು ಎಂದು ಸುಯೋಗ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ತಿಳಿಸಿದರು.

ನಗರದ ಸುಯೋಗ್ ನರ್ಸಿಂಗ್ ಕಾಲೇಜ್ ಹಾಗೂ ಸುಯೋಗ್ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸಮೂಹ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಸೇವೆ, ಶಿಕ್ಷಣ ಎಂಬುದು ಪವಿತ್ರ ಸೇವಾ ಕ್ಷೇತ್ರ. ಇದರಿಂದ ಸಾಕಷ್ಟು ಜನಗಳಿಗೆ ನೆರವಾಗಬಹುದು. ಈ ವೃತ್ತಿಯಲ್ಲಿ ಇರುವವರು ಪುಣ್ಯವಂತರು ಎಂದರು.

ಮನುಷ್ಯ ಹಣ, ಆಸ್ತಿ, ಅಂತಸ್ತು, ಅಧಿಕಾರ ಹೀಗೆ ಯಾವುದೇ ಸುಖ ಅನುಭವಿಸಿರಲಿ, ಆದರೆ, ಪರರರಿಗೆ ಮಾಡುವ ಸೇವೆಯ ಸುಖ ಇವೆಲ್ಲಕ್ಕಿಂತಲೂ ಮಿಗಿಲು. ತನ್ನ ವೃತ್ತಿಯನ್ನು ಪ್ರೀತಿಸುವವರು ಸೇವೆಯನ್ನೂ ಪ್ರಾಮಾಣಿಕವಾಗಿ ಮಾಡಬಲ್ಲರು ಎಂದರು.

ಭಾರತ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ರಾಮಾಯಣದಂತಹ ಬೃಹತ್ ಕಾವ್ಯವನ್ನು ರಚನೆ ಮಾಡಿದಂತಹ ಆದಿಗುರು ವಾಲ್ಮೀಕಿ ಬಹುದೊಡ್ಡ ಶಿಕ್ಷಕ. ನಂತರ ದ್ರೋಣಾಚಾರ್ಯ, ಶ್ರೀ ಕೃಷ್ಣ ಎಲ್ಲರೂ ಇತರರಿಗೆ ಬೋದಿಸುವ ಮೂಲಕ ಮಹಾ ಗುರುಗಳಾದರು ಎಂದರು.

ಜ್ಞಾನಾರ್ಜನೆ ಎಂಬುದು ಹಾಗೂ ಕಲಿಕೆ ಶಿಕ್ಷಕರಲ್ಲಿ ನಿರಂತರವಾಗಿರಬೇಕು. ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಪಸರಿಸುವ ಮೂಲಕ ಅವರು ಉತ್ತಮ ಶಿಕ್ಷಕರು ಎನಿಸಿಕೊಳ್ಳಬೇಕು. ಇದರ ಜೊತೆಗೆ ವಿದ್ಯಾರ್ಥಿಗಳನ್ನು ಮಕ್ಕಳಂತೆ ನೋಡಿಕೊಳ್ಳಬೇಕು. ಅವರೇ ನಿಜವಾದ ಗುರು ಎಂದರು.

ಇದೇ ವೇಳೆ ವಿದ್ಯಾ ವಿಕಾಸ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ವಿನೋಲಿಯ ರಾಜ್, ಮೌರ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಕೆ.ಎಸ್. ಶುಭಾ, ಸಿಗ್ಮಾ ನರ್ಸಿಂಗ್ ಕಾಲೇಜಿನ ಪ್ರೊ. ಮಂಜುನಾಥ್ ಹಾಗೂ ಸುಯೋಗ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಟಿ. ನಾಗಮಣಿ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟಿ ಸುಧಾ ಯೋಗಣ್ಣ, ಉಪಾಧ್ಯಕ್ಷೆ ಸೀಮಾ ಯೋಗಣ್ಣ, ಡಾ. ಸುಯೋಗ್ ಯೋಗಣ್ಣ ಮೊದಲಾದವರು ಇದ್ದರು.

ಎಸ್‌ಡಿಎಂ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣೆ

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಎಂಎಂಕೆ ಮತ್ತು ಎಸ್.ಡಿಎಂ ಮಹಿಳಾ ಕಾಲೇಜಿನಲ್ಲಿ ಎನ್ಎಸ್ಎಸ್ ಘಟಕ, ಕ್ಲಿಯರಮೆಡಿ ಮಲ್ಟಿಸ್ವೆಷಾಲಿಟಿ ಆಸ್ಪತ್ರೆಯ ಸಹಕಾರದೊಂದಿಗೆ ಕಾಲೇಜಿನ ಅಧ್ಯಾಪಕರು, ಅಧ್ಯಾಪಕೇತರರು, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.

ಪೋಷಕರು ಮತ್ತು ಶಿಕ್ಷಕರ ಸಭೆಯ ಪ್ರಯುಕ್ತ ವಿದ್ಯಾರ್ಥಿಗಳ ಪೋಷಕರಿಗೆ ಕ್ಲಿಯರಮೆಡಿ ಮಲ್ಟಿಸ್ವೆಷಾಲಿಟಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಕಾಲೇಜಿಗೆ ಭೇಟಿ ನೀಡಿ, ಬಿಪಿ, ಶುಗರ್, ವಿವಿಧ ರಕ್ತ ಪರೀಕ್ಷೆಯ ಜೊತೆಗೆ ಆರೋಗ್ಯ ತಪಾಸಣೆ ನಡೆಸಿದರು. ನೂರಾರು ಪೋಷಕರು, ವಿದ್ಯಾರ್ಥಿಗಳು, ಅಧ್ಯಾಪಕರು, ಅಧ್ಯಾಪಕೇತರರು ಇದರ ಸದುಪಯೋಗವನ್ನು ಪಡೆದುಕೊಂಡರು.

ಕಾಲೇಜಿನ ಪ್ರಾಂಶುಪಾಲೆ ಪ್ರೊ.ಎನ್.ಭಾರತಿ, ಐಕ್ಯುಎಸಿ ಸಂಚಾಲಕಿ ಕೆ.ಎಸ್. ಸುಕೃತಾ, ಎನ್ಎಸ್ಎಸ್ ಘಟಕದ ಸಂಚಾಲಕಿ ಅನಿತಾ ಪಿ.ಜಯರಾಮ್, ಸದಸ್ಯರಾದ ಡಾ.ಕೆ.ಎನ್. ಅರುಣ್ ಕುಮಾರ್, ಸೈಯದ್ ಸಾದತ್, ಎಂ. ಪ್ರತಿಮಾ, ವಾಣಿ, ಶ್ವೇತಾ ಮೊದಲಾದವರು ಇದ್ದರು.