‘ಭಾರತೀಯ ನ್ಯಾಯ ಸಂಹಿತೆ’ ವೈದ್ಯಕೀಯ ಕಾನೂನು ಕಾರ್ಯಗಾರ

| Published : Aug 25 2024, 01:47 AM IST

‘ಭಾರತೀಯ ನ್ಯಾಯ ಸಂಹಿತೆ’ ವೈದ್ಯಕೀಯ ಕಾನೂನು ಕಾರ್ಯಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯವಾದಿಗಳಾದ ಕೆ. ಪೃಥ್ವಿರಾಜ್ ರೈ ಮತ್ತು ವಿವೇಕಾನಂದ ಪಣಿಯಾಲ ಉಪನ್ಯಾಸ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ವೈದ್ಯಕೀಯಶಾಸ್ತ್ರ ತಜ್ಞರ ಸಂಘದ ಮಂಗಳೂರು ಶಾಖೆ ಆಶ್ರಯದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಅನ್ವಯಿಸುವ ನೂತನ “ಭಾರತೀಯ ನ್ಯಾಯ ಸಂಹಿತೆ” ಕುರಿತು ವೈದ್ಯಕೀಯ ಕಾನೂನು ಕಾರ್ಯಾಗಾರ ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ, ಸಂಘದ ಅಧ್ಯಕ್ಷೆ ಡಾ. ವತ್ಸಲಾ ಕಾಮತ್ ಅಧ್ಯಕ್ಷತೆಯಲ್ಲಿ ಜರಗಿತು.

ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಅಶೋಕನ್ ಕೆ.ಸಿ. ಕಾರ್ಯಾಗಾರ ಉದ್ಘಾಟಿಸಿ, ಚಿಕಿತ್ಸಾಲಯದಲ್ಲಿ ಸೂಕ್ತ ರಕ್ಷಣೆ ಮತ್ತು ಭದ್ರತೆ ಒದಗಿಸುವ ನೂತನ ಕಾನೂನು ಮತ್ತು ಕಾಯ್ದೆ ಜಾರಿಗೆ ಬರಲಿದೆ. ಈ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭ ಅವರು, ಡಾ. ಅರುಣ ಯಡಿಯಾಲ್ ಸಂಪಾದಕ್ವದ ಸಂಸ್ಥೆಯ ಪ್ರಥಮ ಗೃಹ ವಾರ್ತಾ ಪತ್ರಿಕೆ “ಎಮಿಕಸ್” ಮತ್ತು ಡಾ. ರಘುವೀರ್ ಸಂಪಾದಕ್ವದ ಸಂಸ್ಥೆಯ ಸದಸ್ಯರ ನೂತನ ಕೈಪಿಡಿಯನ್ನು ಅನಾವರಣಗೊಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ನ್ಯಾಯವಾದಿಗಳಾದ ಕೆ. ಪೃಥ್ವಿರಾಜ್ ರೈ ಮತ್ತು ವಿವೇಕಾನಂದ ಪಣಿಯಾಲ ಉಪನ್ಯಾಸ ನೀಡಿದರು. ಸಂಸ್ಥೆಯ ಅಧ್ಯಕ್ಷೆ ಡಾ. ವತ್ಸಲಾ ಕಾಮತ್ ಸ್ವಾಗತಿಸಿದರು. ಪೊಲೀಸ್ ಉಪನಿರೀಕ್ಷಕ ವಿನಾಯಕ್ ತೋರಗಲ್, ಭಾರತೀಯ ವೈದ್ಯಕೀಯ ಸಂಘ ಪ್ರತಿಷ್ಠಾನದ ಅಧ್ಯಕ್ಷ ಡಾ. ದಿವಾಕರ ರಾವ್, ಡಾ. ಸತೀಶ್ ಭಟ್, ಡಾ. ಪ್ರಕಾಶ್ ಹರಿಶ್ಚಂದ್ರ ಇದ್ದರು. ಕಾರ್ಯದರ್ಶಿ ಡಾ. ಜಯಪ್ರಕಾಶ್ ಕೆ.ಪಿ. ಸಂಸ್ಥೆಯ ವರದಿ ಮಂಡಿಸಿ ವಂದಿಸಿದರು. ಡಾ. ಚೈತ್ರಾ, ಡಾ. ಅನಿತಾ ಕಾರ್ಯಕ್ರಮ ನಿರೂಪಿಸಿದರು.