ಸಾರಾಂಶ
ಭಾರತವು ಚಂದ್ರಯಾನ-3 ಯಶಸ್ವಿಯಿಂದಾಗಿ ಇಡೀ ವಿಶ್ವವನ್ನು ಬೆರಗುಗೊಳಿಸಿದೆ ಎಂದು ಜ್ಞಾನದೀಪ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ, ಪದ್ಮಭೂಷಣ ಡಾ.ಬಿ.ಎನ್.ಸುರೇಶ್ ಹೇಳಿದರು. ಪಟ್ಟಣ ಸಮೀಪದ ಜಾವಳ್ಳಿಯ ಶ್ರೀ ಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ಶ್ರೀ ಸಚ್ಚಿದಾನಂದ ಸಭಾ ಭವನದಲ್ಲಿ ವಿಶ್ವ ವಿಜ್ಞಾನ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವ ವಿಜ್ಞಾನ ದಿನಾಚರಣೆ ಅಂಗವಾಗಿ ನಡೆದ ಸಂವಾದದಲ್ಲಿ ಡಾ.ಬಿ.ಎನ್.ಸುರೇಶ್
ಕನ್ನಡಪ್ರಭ ವಾರ್ತೆ ಹೊಳೆಹೊನ್ನೂರು ಭಾರತವು ಚಂದ್ರಯಾನ-3 ಯಶಸ್ವಿಯಿಂದಾಗಿ ಇಡೀ ವಿಶ್ವವನ್ನು ಬೆರಗುಗೊಳಿಸಿದೆ ಎಂದು ಜ್ಞಾನದೀಪ ವಿದ್ಯಾ ಸಂಸ್ಥೆಯ ಗೌರವಾಧ್ಯಕ್ಷ, ಪದ್ಮಭೂಷಣ ಡಾ.ಬಿ.ಎನ್.ಸುರೇಶ್ ಹೇಳಿದರು.ಪಟ್ಟಣ ಸಮೀಪದ ಜಾವಳ್ಳಿಯ ಶ್ರೀ ಅರಬಿಂದೋ ಸ್ವತಂತ್ರ ಪದವಿ ಪೂರ್ವ ಕಾಲೇಜು ವತಿಯಿಂದ ಶ್ರೀ ಸಚ್ಚಿದಾನಂದ ಸಭಾ ಭವನದಲ್ಲಿ ವಿಶ್ವ ವಿಜ್ಞಾನ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಜ್ಞಾನದಲ್ಲಿ ಭಾರತವು ಉತ್ತಮ ಸಾಧನೆ ಮಾಡುತ್ತಿದೆ. ಉನ್ನತ ಸಾಧನೆ ಮಾಡಲು ಭಾರತದಲ್ಲಿ ವಿಫುಲ ಅವಕಾಶ ಇದೆ. ಪರಮಾಣು ಅಣ್ವಸ್ತ್ರ, ಕೋವಿಡ್ ಲಸಿಕೆ, ಚಂದ್ರಯಾನ-3 ಸೇರಿದಂತೆ ವಿಶ್ವಕ್ಕೆ ಅನೇಕ ಕೊಡುಗೆ ನೀಡಿದೆ. ಇನ್ನಷ್ಟು ಆವಿಷ್ಕಾರಗಳು ನಡೆಯುತ್ತಿದ್ದು ಯಶಸ್ವಿ ಆಗಲಿದೆ. ಇದು ದೇಶದ ಯುವ ಜನತೆಗೆ ಸ್ಫೂರ್ತಿದಾಯಕವಾಗಿದೆ. ಈ ಬಗ್ಗೆ ಯುವ ಜನತೆ ಅವಕಾಶವನ್ನು ಸದುಪಯೋಗ ಮಾಡಿಕೊಂಡು ದೃಢ ನಿರ್ಧಾರದಿಂದ ಶ್ರೇಷ್ಠ ಸಾಧನೆ ಮಾಡಿ ಶಾಲೆ, ದೇಶ ಹಾಗೂ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. 2047ಕ್ಕೆ ಭಾರತವು ಮುಂದುವರಿದ ರಾಷ್ಟ್ರಗಳಲ್ಲಿ ಅಗ್ರಸ್ಥಾನದಲ್ಲಿ ಪ್ರಜ್ವಲಿಸಲಿದೆ ಎಂದರು.ಕಾಲೇಜು ಪ್ರಾಂಶುಪಾಲ ಡಾ.ಕೆ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದಲ್ಲಿ ಆಸಕ್ತಿ ಇದೆ. ಇದನ್ನು ಮನಗಂಡು ವಿಜ್ಞಾನದಲ್ಲಿ ಸಾಧನೆ ಮಾಡಿರುವ ವ್ಯಕ್ತಿಯಿಂದ ವಿದ್ಯಾಥಿಗಳಿಗೆ ಮಾರ್ಗದರ್ಶನ ನೀಡಿದಲ್ಲಿ ಹೆಚ್ಚು ಕುತೂಹಲದಿಂದ ಆವಿಷ್ಕಾರದಲ್ಲಿ ಆಸಕ್ತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಯಿತು ಎಂದರು.
ಈ ಸಂದರ್ಭ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಜ್ಞಾನದೀಪ ವಿದ್ಯಾ ಸಂಸ್ಥೆಯ ಅಧ್ಯಕ್ಷ ತಲವಾನೆ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ಎಲ್.ನೀಲಕಂಠ ಮೂರ್ತಿ, ಖಜಾಂಚಿ ಡಾ.ಕೆ.ಆರ್.ಶ್ರೀಧರ್ ಹಾಜರಿದ್ದರು.ಭಾರತಿ ಸಂಗಡಿಗರು ಪ್ರಾರ್ಥಿಸಿ, ಉಪಪ್ರಾಂಶುಪಾಲ ಡಾ.ಜೋಸೆಫ್ ಸ್ವಾಗತಿಸಿದರು. ಎಂ.ಇ.ಆಶಾ ನಿರೂಪಿಸಿ, ಎಂ.ಎನ್.ಪ್ರತಿಭಾ ವಂದಿಸಿದರು.------------------