ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಉದ್ಯಮಿಗಳಿಗೆ ಒಂದೇ ಕಡೆ ಎಲ್ಲಾ ವ್ಯವಸ್ಥೆ ಕಲ್ಪಿಸಲಿರುವ ಸ್ಟಾರ್ಟಪ್ ಪಾರ್ಕ್ ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಐಕ್ಯು ವೆಂಚರ್ಸ್ ಅಧ್ಯಕ್ಷ ಹಾಗೂ ಸ್ಟಾರ್ಟಪ್ ಪಾರ್ಕ್ ಸಂಸ್ಥಾಪಕ ಶಫಿ ಶೌಕತ್ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮ ಸ್ಥಾಪನೆಗೆ ಪೂರಕವಾದ ವ್ಯವಸ್ಥೆಗಳು ಈ ಪಾರ್ಕ್‌ನಲ್ಲಿ ಒಂದೇ ಸೂರಿನಡಿ ಲಭ್ಯವಾಗಲಿವೆ. 2030 ರ ವೇಳೆಗೆ ಕರ್ನಾಟಕವನ್ನು ವಿಶ್ವದ ಸಂಸ್ಥಾಪಕ ಸ್ನೇಹಿ ರಾಜ್ಯವನ್ನಾಗಿ ಮಾಡುವ ಗುರಿ ಇದೆ. 10 ಸಾವಿರಕ್ಕೂ ಅಧಿಕ ಸ್ಟಾರ್ಟಪ್‌ಗಳನ್ನು ಪೋಷಿಸಿ, 1 ಲಕ್ಷ ಉದ್ಯೋಗ ಸೃಷ್ಟಿಸಲಿದೆ. ನಾವೀನ್ಯತೆ ಹಾಗೂ ತಂತ್ರಜ್ಞಾನ ವಲಯಗಳಲ್ಲಿ 50 ಸಾವಿರ ಕೋಟಿ ರು. ಹೂಡಿಕೆ ಆಕರ್ಷಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಕೋರಮಂಗಲದ ಹೊಸೂರು ರಸ್ತೆಯಲ್ಲಿರುವ ಈ ಪಾರ್ಕ್‌ನಲ್ಲಿ ಅತ್ಯಾಧುನಿಕ ಮೂಲಸೌಕರ್ಯಗಳಿವೆ. ಪೋಷಣೆ, ವೇಗವರ್ಧನೆ, ಮಾರ್ಗದರ್ಶನ, ಹಣಕಾಸು, ಬ್ರ್ಯಾಂಡಿಂಗ್ ಮತ್ತು ಜಾಗತಿಕ ಸಂಪರ್ಕವನ್ನು ಒಂದೇ ಸೂರಿನಡಿ ನೀಡಲಾಗುವುದು. ನ.7 ಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾರ್ಕ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.ಸ್ಟಾರ್ಟಪ್‌ಗಳಿಗೆ ಧ್ವನಿ ನೀಡಲು ಟಿವಿದೇಶದ ಉದ್ಯಮಿಗಳಿಗಾಗಿ ಮೀಸಲಾದ ಮಾಧ್ಯಮ ವೇದಿಕೆಯಾದ ‘ಸ್ಟಾರ್ಟಪ್ ಟಿವಿ’ಯು, ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ವಾಹಿನಿಯು ಸ್ಟಾರ್ಟಪ್ ಯಶಸ್ಸಿನ ಕಥೆಗಳು, ನಾವೀನ್ಯತೆಗಳು ಮತ್ತು ಹೂಡಿಕೆದಾರರ ಒಳನೋಟಗಳನ್ನು ಬಿತ್ತರಿಸಲಿದೆ. ಪ್ರೇಕ್ಷಕರು, ಪಾಲುದಾರರು ಮತ್ತು ಪ್ರಪಂಚದಾದ್ಯಂತ ಇರುವ ಹೂಡಿಕೆದಾರರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು.
ಕ್ಯಾಪ್ಷನ್....ಸ್ಟಾರ್ಟಪ್ ಪಾರ್ಕ್‌ನ ರೋಬೋಟ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ಸಿಬ್ಬಂದಿ.
;Resize=(128,128))