ಹಿರಿಯರು ತ್ಯಾಗದಿಂದ ಗಳಿಸಿದ ಸ್ವಾತಂತ್ರ್ಯವನ್ನು ಮತ್ತೊಬ್ಬರ ಸ್ವಾತಂತ್ರ‍್ಯವನ್ನು ಕಸಿಯುವುದಕ್ಕೆ ಬಳಸದೆ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಿರಿ ಎಂದು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಕರೆ ನೀಡಿದರು.

ಪುತ್ತೂರು: ಹಿರಿಯರು ತ್ಯಾಗದಿಂದ ಗಳಿಸಿದ ಸ್ವಾತಂತ್ರ್ಯವನ್ನು ಮತ್ತೊಬ್ಬರ ಸ್ವಾತಂತ್ರ‍್ಯವನ್ನು ಕಸಿಯುವುದಕ್ಕೆ ಬಳಸದೆ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಿರಿ ಎಂದು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಕರೆ ನೀಡಿದರು.

ಶನಿವಾರ ಪುತ್ತೂರಿನ ನೂತನ ನ್ಯಾಯಾಲಯ ಸಂಕೀರ್ಣದಲ್ಲಿರುವ ವಕೀಲರ ಭವನದಲ್ಲಿ ನಡೆದ ೮೦ನೇ ಸ್ವಾತಂತ್ರ‍್ಯೋತ್ಸವದ ಸಭಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಆರ್. ರಮ್ಯಾ ಅವರು ಸಂವಿಧಾನದ ಆಶಯಗಳನ್ನು ತಿಳಿಸಿದರು. ೭ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಮಂಗಲ ಚಕಲಬ್ಬಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್, ಹಿರಿಯ ನ್ಯಾಯವಾದಿಗಳಾದ ರಾಮ್ ಮೋಹನ್ ರಾವ್ ಮತ್ತು ಜಗನ್ನಿವಾಸ್ ರಾವ್ ಮಾತನಾಡಿದರು.

ಹಿರಿಯ ವಕೀಲ ಎಂ.ಜಿ. ಗೋಪಾಲಕೃಷ್ಣ ಭಟ್, ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಜಿ. ಜಗನ್ನಾಥ ರೈ, ವಕೀಲರ ಸಂಘದ ಕಾರ್ಯದರ್ಶಿ ಸ್ವಾತಿ ಜಗನ್ನಾಥ ರೈ, ಜೊತೆ ಕಾರ್ಯದರ್ಶಿ ಉದಯಚಂದ್ರ ಕೆ. ಕೋಶಾಧಿಕಾರಿ ಭಾರತಿ ಎ. ಉಪಸ್ಥಿತರಿದ್ದರು.ಸಮಾರಂಭದಲ್ಲಿ ನಿವೃತ್ತ ಸೈನಿಕ ಹರೀಶ್ ಕುಮಾರ್ (ಪ್ರಸ್ತುತ ಪೊಲೀಸ್ ಕರ್ತವ್ಯ) ಮತ್ತು ಸೆಲ್ವಂ ( ಪ್ರಸ್ತುತ ನ್ಯಾಯಾಲಯದ ಸಿಬ್ಬಂದಿ) ಅವರನ್ನುಸನ್ಮಾನಿಸಲಾಯಿತು.

ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ. ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷ ಮಹಾಬಲ ಶೆಟ್ಟಿ ಕೂಮ್ಮಂಡ ವಂದಿಸಿದರು. ವಕೀಲ ನೂರುದ್ದೀನ್ ಸಾಲ್ಮರ ನಿರೂಪಿಸಿದರು.