ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟೀನ್ ವರದಾನ

| Published : Aug 15 2025, 01:02 AM IST

ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟೀನ್ ವರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಬಡ ಬಗ್ಗರಿಗೆ ಕ್ಯಾಂಟೀನ್‌ ಉಪಯುಕ್ತವಾಗಿದೆ. ಕಡಿಮೆ ದರದಲ್ಲಿ ವಿವಿಧ ಬಗೆಯ ಉಪಹಾರ ಮತ್ತು ಊಟ ಸಾರ್ವಜನಿಕರಿಗೆ ಲಭ್ಯವಿರಲಿದೆ.

ಕನ್ನಡಪ್ರಭ ವಾರ್ತೆ ಮೂಡಲಗಿ

ಅಸಂಘಟಿತ ಕಾರ್ಮಿಕರು, ಬಡ ಜನರಿಗೆ ಇಂದಿರಾ ಕ್ಯಾಂಟೀನ್ ವರದಾನವಾಗಿದೆ. ಕಡಿಮೆ ದರದಲ್ಲಿ ಉಪಹಾರ ಮತ್ತು ಊಟದ ಸೌಲಭ್ಯಗಳನ್ನು ಹೊಂದಿರುವ ಕ್ಯಾಂಟೀನ್‌ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಗುರುವಾರ ತೆರೆಯಲಾದ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಅವರು ಮಾತನಾಡಿದರು. ಬಡ ಬಗ್ಗರಿಗೆ ಕ್ಯಾಂಟೀನ್‌ ಉಪಯುಕ್ತವಾಗಿದೆ. ಕಡಿಮೆ ದರದಲ್ಲಿ ವಿವಿಧ ಬಗೆಯ ಉಪಹಾರ ಮತ್ತು ಊಟ ಸಾರ್ವಜನಿಕರಿಗೆ ಲಭ್ಯವಿರಲಿದೆ. ಕಡು ಬಡವರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಇಂದಿರಾ ಕ್ಯಾಂಟೀನ್ ಪ್ರಯೋಜನ ಪಡೆದುಕೊಳ್ಳಬೇಕು. ಕೇವಲ ₹೫ ನೀಡಿದರೆ ಉಪಹಾರ ಮತ್ತು ₹೧೦ ನೀಡಿದರೆ ಗುಣಮಟ್ಟದ ಆಹಾರ ದೊರೆಯಲಿದೆ. ಮೂಡಲಗಿ ತಾಲೂಕು ಕೇಂದ್ರವಾಗಿರುವುದರಿಂದ ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿಯವರನ್ನು ಪುರಸಭೆಯಿಂದ ಸತ್ಕರಿಸಲಾಯಿತು. ಶಾಸಕರು ಇಂದಿರಾ ಕ್ಯಾಂಟೀನ್‌ನಲ್ಲಿ ತಯಾರಿಸಿದ ತಿಂಡಿ ತಿನಿಸುಗಳನ್ನು ಪರಿಶೀಲಿಸಿದರು. ಸಾರ್ವಜನಿಕರಿಗೆ ಚೋ- ಚೋ ಬಾತ್ ಬಡಿಸುವ ಮೂಲಕ ಕ್ಯಾಂಟೀನ್ ಆರಂಭಕ್ಕೆ ಚಾಲನೆ ನೀಡಿದರು.

ಪುರಸಭೆ ಅಧ್ಯೆಕ್ಷೆ ಖುರ್ಷಾದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುಭಾಸ ಢವಳೇಶ್ವರ, ಪುರಸಭೆ ಮಾಜಿ ಅಧ್ಯಕ್ಷರಾದ ರವಿ ಸಣ್ಣಕ್ಕಿ, ರಾಮಣ್ಣಾ ಹಂದಿಗುಂದ, ಹಣಮಂತ ಗುಡ್ಲಮನಿ, ಸದಸ್ಯರಾದ ಜಯಾನಂದ ಪಾಟೀಲ, ಶಿವು ಚಂಡಕಿ, ಈರಪ್ಪ ಮುನ್ಯಾಳ, ಆದಮ ತಾಂಬೋಳಿ, ಸುಭಾಸ ಸಣ್ಣಕ್ಕಿ, ಬಸು ಝಂಡೇಕುರಬರ, ಹುಸೇನಸಾಬ ಶೇಖ,

ಕಾಶಪ್ಪ ಝಂಡೇಕುರಬರ, ಅಬ್ದುಲಗಫಾರ ಡಾಂಗೆ, ಪ್ರಕಾಶ ಮುಗಳಖೋಡ, ಆನಂದ ಟಪಾಲ, ರವಿ ಮೂಡಲಗಿ, ವಿರುಪಾಕ್ಷ ಮುಗಳಖೋಡ, ಲಕ್ಕಪ್ಪ ಶಾಬನ್ನವರ, ಯಮನಪ್ಪ ಬಸಳಗುಂದಿ, ಮುಖ್ಯಾಧಿಕಾರಿ ತುಕಾರಾಂ ಮಾದರ ಸೇರಿ ಅನೇಕರಿದ್ದರು.