''''ಗರೀಭಿ ಹಠಾವೋ'''' ದಿಂದ ಬಡವರಿಗೆ ಬದುಕು ಒದಗಿಸಿದ ಇಂದಿರಾಗಾಂಧಿ

| Published : Nov 20 2024, 12:31 AM IST

ಸಾರಾಂಶ

Indira Gandhi provided livelihood to the poor through 'Garibhi Hathao'

-ಮಾಜಿ ಪ್ರಧಾನಿ ಇಂದಿರಾಗಾಂಧಿ ೧೦೭ನೇ ಜನ್ಮದಿನೋತ್ಸವದಲ್ಲಿ ಟಿ.ತಿಪ್ಪೇಸ್ವಾಮಿ

-----

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಗರೀಭಿ ಹಠಾವೋ ಮೂಲಕ ದೇಶದ ಲಕ್ಷಾಂತರ ಕಡುಬಡವರಿಗೆ ಬದುಕು ಒದಗಿಸಿಕೊಟ್ಟ ಕೀರ್ತಿ ಇಂದಿರಾಗಾಂಧಿಯವರದ್ದು. ದೇಶದಲ್ಲಿ ತಾಂಡವಾಡುತ್ತಿದ್ದ ಬಡತನವನ್ನು ನಿಯಂತ್ರಿಸಲು ೨೦ ಅಂಶಗಳ ಕಾರ್ಯಕ್ರಮ ಜಾರಿ ಮೂಲಕ ದೇಶದ ಅಭಿವೃದ್ಧಿಗೆ ನಾಂದಿಯಾಡಿದ ಇಂದಿರಾಗಾಂಧಿ ಎಲ್ಲರಿಗೂ ಮಾದರಿ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ತಿಳಿಸಿದರು.

ಅವರು, ಶಾಸಕರ ಭವನದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ೧೦೭ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಮಹಿಳಾ ಸಮುದಾಯ ಸಂಘಟನೆಯೂ ಸೇರಿದಂತೆ ಹಲವಾರು ವಿಚಾರಗಳಲ್ಲಿ ಇಂದಿರಾಗಾಂಧಿಯವರ ತತ್ವಸಿದ್ದಾಂತಗಳನ್ನು ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ದೇಶದ ಇತಿಹಾಸದಲ್ಲಿ ಸುಧೀರ್ಘಕಾಲ ಮಹಿಳಾ ಪ್ರಧಾನಿಯಾಗಿ ಆಡಳಿತ ನಡೆಸಿದ ಕೀರ್ತಿ ಇಂದಿರಾಗಾಂಧಿಯವರದ್ದು ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಕವಿತಾ, ಕೆ.ವೀರಭದ್ರಪ್ಪ, ಮುಖಂಡರಾದ ಜಿ.ಟಿ.ಶಶಿಧರ, ಟಿ.ಆರ್.ಕಿರಣ್‌ಶಂಕರ್, ನಾಮಿನಿ ಸದಸ್ಯರಾದ ಅನ್ವರ್‌ಮಾಸ್ಟರ್, ಬಡಗಿಪಾಪಣ್ಣ, ಆರ್.ವೀರಭದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಗೀತಾಬಾಯಿ, ಕೆಡಿಪಿ ಸದಸ್ಯ ರಮೇಶ್, ಎಸ್.ಎಚ್.ಸೈಯದ್, ತಿಪ್ಪೇಸ್ವಾಮಿ, ಶಿವಸ್ವಾಮಿ, ರುದ್ರಮುನಿ, ಸೈಪುಲ್ಲಾ ಉಪಸ್ಥಿತರಿದ್ದರು. -----

ಪೋಟೋ: ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಮಾಜಿಪ್ರಧಾನಿ ದಿವಂಗತ ಇಂದಿರಾಗಾAಧಿಯವರ ೧೦೭ನೇ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸಿದರು.

೧೯ಸಿಎಲ್‌ಕೆ೨

----------------------