ಜಗದಾಳ ಗ್ರಾಪಂ ಅಧ್ಯಕ್ಷರಾಗಿ ಇಂದಿರಾ ಆಯ್ಕೆ

| Published : Dec 11 2024, 12:46 AM IST

ಸಾರಾಂಶ

ಜಗದಾಳ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಇಂದಿರಾ ಮಲ್ಲಪ್ಪ ಹಾದಿಮನಿ, ಉಪಾಧ್ಯಕ್ಷ ಸ್ಥಾನಕ್ಕೆ ಸರೋಜಿನಿ ಈರಪ್ಪ ಹರಪನಳ್ಳಿನ ಅವಿರೋಧ ಆಯ್ಕೆಯಾದರು.

ರಬಕವಿ-ಬನಹಟ್ಟಿ: ತಾಲೂಕಿನ ಜಗದಾಳ ಗ್ರಾಮ ಪಂಚಾಯಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಇಂದಿರಾ ಮಲ್ಲಪ್ಪ ಹಾದಿಮನಿ, ಉಪಾಧ್ಯಕ್ಷ ಸ್ಥಾನಕ್ಕೆ ಸರೋಜಿನಿ ಈರಪ್ಪ ಹರಪನಳ್ಳಿನ ಅವಿರೋಧ ಆಯ್ಕೆಯಾದರು.

೨೦ ಸದಸ್ಯರನ್ನೊಳಗೊಂಡ ಗ್ರಾಪಂಗೆ ೧೨ ಕಾಂಗ್ರೆಸ್ ಬೆಂಬಲಿತ ಸದಸ್ಯರು ಮಾತ್ರ ಹಾಜರಿದ್ದರು. ಪರಿಶಿಷ್ಠ ಜಾತಿ ಮಹಿಳಾ ಮೀಸಲಾತಿಯಿದ್ದ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಾಮಾನ್ಯ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಳೆದ ೧೫ ತಿಂಗಳ ಅವಧಿಗೆ ಒಡಂಬಡಿಕೆ ಪ್ರಕಾರ ಶಕುಂತಲಾ ಮಾರುತಿ ಸೋನಾವಣೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾರುತಿ ಸೊರಗಾಂವಿ ರಾಜೀನಾಮೆ ನೀಡಿದ್ದರು.

ಈ ಸಂದರ್ಭ ಸುರೇಶ ಅಸ್ಕಿ, ಗುರಲಿಂಗಪ್ಪ ಚಿಂಚಲಿ, ಗುರುಪಾದ ಅಸ್ಕಿ, ಮಾರುತಿ ಸೊರಗಾಂವಿ, ಯಲ್ಲಪ್ಪ ದೊಡಮನಿ, ವಿಠ್ಠಲ ಕಲಮಡಿ, ಕಮಲವ್ವ ಜನವಾಡ, ಶಕುಂತಲಾ ಸೋನಾವನೆ, ಶಶಿಕಲಾ ಚಂದ್ರಶೇಖರ ಕುರಿ, ಲಕ್ಷ್ಮೀ ಕಾಡದೇವರ, ಅಡಿವೆಪ್ಪ ಪಾಟೀಲ, ತಿಪ್ಪಣ್ಣ ಕುಳಲಿ, ಪಂಡಿತ ಬೋಸಲೆ, ಈಶ್ವರ ಬಂಗಿ, ಮಲ್ಲಪ್ಪ ಅಸ್ಕಿ, ಶಿವಲಿಂಗ ಕಾನಟ್ಟಿ, ಬಸಪ್ಪ ಮುತ್ತೂರ, ರಾಮು ಕಚ್ಚು, ಸದಾಶಿವ ದಡ್ಡಿಮನಿ, ಮಹಾದೇವ ತೇರದಾಳ, ಶ್ರೀಶೈಲ ಪಾಟೀಲ, ಮುತ್ತಪ್ಪ ಮೇಟಿ, ನಿಂಗಪ್ಪ ಜನವಾಡ ಸೇರಿದಂತೆ ಅನೇಕರಿದ್ದರು.