ಸಾರಾಂಶ
ಶಿಕ್ಷಕರು ಪಾಠದ ಜತೆಗೆ ಆಟವನ್ನು ರೂಡಿಸಿಕೊಂಡರೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಉತ್ತಮ ಕ್ರೀಡಾಂಗಣಕ್ಕಾಗಿ 18 ಕೋಟಿ ರು ನೀಡಿ ಜಮೀನು ಖರೀದಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ರೂಪಿಸಲು ಯೋಜನೆ ಸಿದ್ಧಪಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ವಿದ್ಯಾರ್ಥಿ ಮತ್ತು ಶಿಕ್ಷಕರ ಅನುಕೂಲಕ್ಕಾಗಿ 4 ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇನ್‌ಡೋರ್ ಸ್ಟೇಡಿಯಂ ಶೀಘ್ರದಲ್ಲಿ ಉದ್ಘಾಟನೆ ಗೊಳ್ಳಲಿದೆ ಎಂದು ವಿಧಾನ ಪರಿಷತ್ ಸದಸ್ಯ, ಭಾರತೀ ವಿದ್ಯಾ ಸಂಸ್ಥೆ ಚೇರ್‍ಮನ್ ಮಧು ಜಿ. ಮಾದೇಗೌಡ ಹೇಳಿದರು.ಭಾರತೀ ಕಾಲೇಜಿನ ಕ್ರೀಡಾಂಗಣದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಮತ್ತು ಭಾರತೀ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಭಾರತೀ ಇದ್ಯಾ ಸಂಸ್ಥೆಯ ಅಂಗಸಂಸ್ಥೆಗಳ ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರು ಪಾಠದ ಜತೆಗೆ ಆಟವನ್ನು ರೂಡಿಸಿಕೊಂಡರೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ಉತ್ತಮ ಕ್ರೀಡಾಂಗಣಕ್ಕಾಗಿ 18 ಕೋಟಿ ರು ನೀಡಿ ಜಮೀನು ಖರೀದಿಸಲಾಗಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ರೂಪಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದರು.ಇವತ್ತಿನ ದಿನಗಳಲ್ಲಿ ಒತ್ತಡಗಳು ನಿವಾರಣೆ ಆಗಬೇಕಾದರೆ ಕ್ರೀಡೆಯಲ್ಲಿ ಭಾಗವಹಿಸಬೇಕು, ನಿತ್ಯ ವ್ಯಾಯಾಮ ಮಾಡುವಮೂಲಕ ಮನಸ್ಸಿಗೆ ಉತ್ಸಾಹ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು, ವಯಸ್ಸಾದ ಮೇಲೆ ಕಾಯಿಲೆಗಳು ಹೆಚ್ಚಾಗಿ ಬರುತ್ತದೆ. ಇಲ್ಲಿ ಯಾರು ಚಿರಂಜೀವಿಗಳಿಲ್ಲ. ಪ್ರತಿದಿನ ಜಂಕ್ ಫುಡ್ ತಿನ್ನುವುದನ್ನು ನಿಲ್ಲಿಸಿ ಬೆಳಗ್ಗೆ ಸಂಜೆ ಜಿಮ್, ವಾಕ್ ಮಾಡಬೇಕು ಎಂದರು.
ನಂತರ ವಿವಿಧ ಕಸ್ಪರ್ಧೆಗಳಲ್ಲಿ ಶಿಕ್ಷಕರು ಭಾಗವಹಿಸಿದರು. ಭಾರತೀ ಬಿಇಡಿ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಲ್.ಸುರೇಶ್, ಸಂಯೋಜಕರಾದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಎಂ.ಕೆ.ಸುನೀಲ್ ಕುಮಾರ್, ಶೋಭಾ, ಎಸ್.ನಾಗರಾಜ, ವಿವಿಧ ಅಂಗ ಸಂಸ್ಥೆ ಪ್ರಾಂಶುಪಾಲರಾದ ಡಾ.ಎಂ.ಎಸ್.ಮಹದೇವಸ್ವಾಮಿ, ಪ್ರೊ.ಎಸ್.ನಾಗರಾಜ, ಡಾ.ಬಿ.ಆರ್.ಚಂದನ್, ಸಿ.ವಿ.ಮಲ್ಲಿಕಾರ್ಜುನ್, ಡಾ.ಬಾಲಸುಬ್ರಹ್ಮಣ್ಯಂ, ಡಾ.ತಮಿಜ್ ಮಣಿ, ಸಿ.ರಮ್ಯಾ, ಜಿ.ಬಿ.ಪಲ್ಲವಿ, ಪಿ.ರಾಜೇಂದ್ರ ರಾಜೇಅರಸು, ಅಂಗ ಸಂಸ್ಥೆ ಮುಖ್ಯಸ್ಥರು ಅಧ್ಯಾಪಕರು ಅಧ್ಯಾಪಕೇತರು ಹಾಜರಿದ್ದರು.