ಇನ್ನರ್‌ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

| Published : Aug 10 2024, 01:31 AM IST

ಇನ್ನರ್‌ವೀಲ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ಹೊಸ ವರ್ಷದಲ್ಲಿ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಇನ್ನರ್‌ವೀಲ್ ಕ್ಲಬ್ ಆಫ್ ಚಿಕ್ಕೋಡಿ ನಿರ್ಧರಿಸಿದೆ ಎಂದು ಅಧ್ಯಕ್ಷೆ ಭಾಗ್ಯಶ್ರೀ ತೊಗ್ಗಿ ಹೇಳಿದರು. ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ ಇನ್ನರ್‌ವೀಲ್ ಕ್ಲಬ್ ಆಫ್ ಚಿಕ್ಕೋಡಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅನಾಥರಿಗೆ ಹಾಗೂ ವೃದ್ಧರ ಸೇವೆಗೆ, ಹೆಣ್ಣು ಮಕ್ಕಳಿಗೆ ಋತುಸ್ರಾವದ ಬಗ್ಗೆ ಮಾಹಿತಿ ನೀಡಲು ಬರುವ ದಿನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಹೊಸ ವರ್ಷದಲ್ಲಿ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಇನ್ನರ್‌ವೀಲ್ ಕ್ಲಬ್ ಆಫ್ ಚಿಕ್ಕೋಡಿ ನಿರ್ಧರಿಸಿದೆ ಎಂದು ಅಧ್ಯಕ್ಷೆ ಭಾಗ್ಯಶ್ರೀ ತೊಗ್ಗಿ ಹೇಳಿದರು. ಪಟ್ಟಣದಲ್ಲಿ ಇತ್ತೀಚೆಗೆ ಆಯೋಜಿಸಿದ ಇನ್ನರ್‌ವೀಲ್ ಕ್ಲಬ್ ಆಫ್ ಚಿಕ್ಕೋಡಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, ಅನಾಥರಿಗೆ ಹಾಗೂ ವೃದ್ಧರ ಸೇವೆಗೆ, ಹೆಣ್ಣು ಮಕ್ಕಳಿಗೆ ಋತುಸ್ರಾವದ ಬಗ್ಗೆ ಮಾಹಿತಿ ನೀಡಲು ಬರುವ ದಿನಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದರು.

ಕೊಲ್ಲಾಪುರದ ಜಿಲ್ಲಾ ವೈಸ್ ಚೇರಮನ್ (317) ಉತ್ಕರ್ಷ ಪಾಟೀಲ್ ಪದಗ್ರಹಣ ಸಮಾರಂಭದ ಸ್ಥಾಪನಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಮಾತನಾಡಿ, ಮಹಿಳೆಯರು ಇನ್ನರ್‌ವ್ಹೀಲ್‌ ಮೂಲಕ ಸಮಾಜಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದುಡಿಯುತ್ತಿದ್ದಾರೆ ಎಂದರು. ಗೌರವ ಅತಿಥಿಗಳಾಗಿ ಇನ್ನರ್‌ವ್ಹೀಲ್‌ ಕ್ಲಬ್ ನಿಪ್ಪಾಣಿಯ ಮಾಜಿ ಅಧ್ಯಕ್ಷೆ ವರ್ಷಾ ನಂದರಗಿ ಉಪಸ್ಥಿತರಿದ್ದರು.

ನಿಕಟಪೂರ್ವ ಇನ್ನರ್‌ವ್ಹೀಲ್‌ ಅಧ್ಯಕ್ಷೆ ಸೀಮಾ ಟಿಕ್ಕೆ ಮತ್ತು ಕಾರ್ಯಾಧ್ಯಕ್ಷೆ ಪ್ರತಿಮಾ ಮಹಾಜನ ಕಾರ್ಯಾಧ್ಯಕ್ಷೆ ಸುವರ್ಣ ಬಬಲೇಶ್ವರ, ಖಜಾಂಚಿ ಸುಜಾತಾ ಪಾಟೀಲ್, ಸುವರ್ಣ ಹಂಪನ್ನವರ, ಉಪಾಧ್ಯಕ್ಷೆ ಗೀತಾ ಪಡಲಾಳೆ, ಕಾರ್ಯನಿರ್ವಹಣಾಧಿಕಾರಿ ರಾಜಶ್ರೀ ಕುಲಕರ್ಣಿ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಯಿತು. ರೋಹಿಣಿ ಕುಲಕರ್ಣಿ, ಡಾ.ಪ್ರಿಯಾಂಕಾ ಚೌಗುಲೆ, ಡಾ.ಸೀಮಾ ಟಿಕ್ಕೆ, ಡಾ.ಸಂಗೀತಾ ಜೋಶಿ, ಡಾ.ರಾಜಶ್ರೀ ಪಾಟೀಲ, ಡಾ.ಸ್ನೇಹಾ ಪಾಟೀಲ ಅವರನ್ನು ಸನ್ಮಾನಿಸಲಾಯಿತು.