ಹಲವು ಕಾರಣಗಳಿಂದ ಈ ಸಂಸ್ಥೆ ಕಳೆದ ೭- ೮ ವರ್ಷಗಳ ಕಾಲ ಬೆಳವಣಿಗೆ ಕುಂಠಿತವಾಗಿತ್ತು. ಸ್ಥಳೀಯ ಶಾಸಕರು ಮತ್ತು ಹಿರಿಯರ ಮಾರ್ಗದರ್ಶನ ದೊರೆತಿರುವುದರಿಂದ ಉತ್ತಮ ಬೆಳವಣಿಗೆ ಹೊಂದಿದೆ.

ಯಲ್ಲಾಪುರ: ನಮ್ಮ ಕೈಗಾರಿಕಾ ಸಹಕಾರಿ ಸಂಘ ಕಳೆದ ೧೧ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರೂ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿ, ಸಹಕಾರಿ ತತ್ವಕ್ಕೆ ಬದ್ಧವಾಗಿ ಸಂಸ್ಥೆಯ ಶ್ರೇಯೋಭಿವೃದ್ಧಿ ಜತೆಗೆ ಗ್ರಾಹಕರ ಠೇವಣಿ ಮತ್ತು ಸಾಲಕ್ಕೆ ಹೊಸ ರೂಪ ನೀಡಿ, ಉತ್ತಮ ಪ್ರಗತಿ ಸಾಧಿಸಿದೆ. ಇದಕ್ಕೆ ನಮ್ಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಕಾರ್ಯಶೈಲಿಯೇ ಕಾರಣ ಎಂದು ಸಂಘದ ಅಧ್ಯಕ್ಷ ಡಿ. ಶಂಕರ ಭಟ್ಟ ಹೇಳಿದರು.

ಪಟ್ಟಣದ ಶಕ್ತಿಗಣಪತಿ ದೇವಸ್ಥಾನದ ಆವಾರದಲ್ಲಿ ೧೧ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಲವು ಕಾರಣಗಳಿಂದ ಈ ಸಂಸ್ಥೆ ಕಳೆದ ೭- ೮ ವರ್ಷಗಳ ಕಾಲ ಬೆಳವಣಿಗೆ ಕುಂಠಿತವಾಗಿತ್ತು. ಸ್ಥಳೀಯ ಶಾಸಕರು ಮತ್ತು ಹಿರಿಯರ ಮಾರ್ಗದರ್ಶನ ದೊರೆತಿರುವುದರಿಂದ ಉತ್ತಮ ಬೆಳವಣಿಗೆ ಹೊಂದಿದೆ. ಸಣ್ಣ ಪುಟ್ಟ ಕೈಗಾರಿಕೆಗಳಿಗೆ ನಾವು ತ್ವರಿತಗತಿಯಲ್ಲಿ ಸಾಲ ನೀಡುವುದು ನಮ್ಮ ಸಂಘದ ಚಟುವಟಿಕೆ ಬೆಳೆಯುವುದಕ್ಕೆ ಕಾರಣವಾಗಿದೆ. ನಮ್ಮ ಸಂಘ ₹೪೦ ಲಕ್ಷ ಲಾಭ ಗಳಿಸಿದೆ ಎಂದರು.

ಯು.ಕೆ. ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ರಾಜ್ಯದಲ್ಲೇ ಉತ್ತರ ಕನ್ನಡ ಸಹಕಾರಿ ಕ್ಷೇತ್ರದಲ್ಲಿ ಇಂದಿಗೂ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡು ಬಂದಿದೆ ಎಂದರು.

ವಿಕಾಸ ಬ್ಯಾಂಕ್ ಅಧ್ಯಕ್ಷ ಮುರುಳಿ ಹೆಗಡೆ ಮಾತನಾಡಿದರು. ಉಪಾಧ್ಯಕ್ಷರಾದ ಸಂತೋಷ ನಾಯ್ಕ, ನಿರ್ದೇಶಕರಾದ ಗಣಪತಿ ಮುದ್ದೆಪಾಲ, ಪ್ರಶಾಂತ ಹೆಗಡೆ, ಅನಂತ ಗಾಂವ್ಕರ, ಗಣೇಶ ಹೆಗಡೆ, ಮಾಲಾ ಬಾಳೆಹೊಸೂರು, ಸಂಗೀತಾ ನಾಯ್ಕ, ಆಶಾ ಬಿ. ಶೇಖ್, ಹನುಮಂತ ಕೊರವರ್, ಗಣೇಶ ಸಿದ್ದಿ, ನ್ಯಾಯವಾದಿ ಪ್ರಕಾಶ ಭಟ್ಟ, ಮಾರ್ಗದರ್ಶಕರಾದ ಪಿ.ಜಿ. ಹೆಗಡೆ, ವಿಜಯಾ ಎ. ವೈದ್ಯ, ನಾಗೇಂದ್ರ ಭಟ್ಟ ಕವಾಳೆ ಉಪಸ್ಥಿತರಿದ್ದರು. ಶ್ರೀಪಾದ ಮೆಣಸುಮನೆ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಾಹಕ ರವೀಂದ್ರ ದೇಸಾಯಿ ವರದಿ ವಾಚಿಸಿದರು. ಸಹಾಯಕ ಸಿಬ್ಬಂದಿ ವೀಣಾ ಧರ್ಮಶೆಟ್ಟಿ ಪ್ರಾರ್ಥಿಸಿ, ವಂದಿಸಿದರು.