ಉದ್ಯಮ ಹತ್ಯೆ ಪ್ರಕರಣ: ಪತ್ನಿ ಸೇರಿ ಮೂವರ ಸೆರೆ

| Published : Oct 18 2024, 01:15 AM IST

ಸಾರಾಂಶ

ಬೆಳಗಾವಿಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ಪತ್ನಿ ಉಮಾ ಸೇರಿದಂತೆ ಮೂವರ ಬಂಧಿಸಿ ಹಿಂಡಲಗಾ ‌ಕೇಂದ್ರ ಕಾರಾಗೃಹಕ್ಕೆ ಹಾಕಲಾಗಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ ಪತ್ನಿ ಉಮಾ ಸೇರಿದಂತೆ ಮೂವರ ಬಂಧಿಸಿ ಹಿಂಡಲಗಾ ‌ಕೇಂದ್ರ ಕಾರಾಗೃಹಕ್ಕೆ ಹಾಕಲಾಗಿದೆ.

ಸಂತೋಷ ಪತ್ನಿ ಉಮಾ ಸೇರಿ ಮೂವರನ್ನೂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಬೆಳಗಾವಿ ಮಾಳ ಮಾರುತಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದ ನ್ಯಾಯಾಧೀಶರು ಹಿಂಡಲಗಾ ಜೈಲಿಗೆ ಆರೋಪಿ ಪತ್ನಿ ಉಮಾ, ಪೆಸ್‌ಬುಕ್‌ ಗೆಳೆಯ ಶೋಬೇಶ್ ಗೌಡ, ಪವನ್ ಮೂವರು ಶಿಫ್ಟ್‌ ಮಾಡಲಾಗಿದೆ. ಅ.9ರಂದು ಪತ್ನಿ ಉಮಾ ಪ್ಲ್ಯಾನ್‌ ಶೋಬೇಶ್ ಹಾಗೂ ಪವನ್‌ನನ್ನು ಕರೆಸಿ ಮನೆಯಲ್ಲಿ ಉಸಿರುಗಟ್ಟಿಸಿ ಕೊಂದು ಎಸ್ಕೇಪ್ ಆಗಿದ್ದ. ಬಳಿಕ ಹೃದಯಾಘಾತದಿಂದ ಪತಿ ಸಾವಿಗೀಡಾದರು ಎಂದು ಪತ್ನಿ ಅಂತ್ಯಸಂಸ್ಕಾರ ಮಾಡಿದ್ದಳು. ಪುತ್ರಿ ಸಂಜನಾ ಪದ್ಮಣ್ಣವರ ತಾಯಿಯ ಮೇಲೆ ಸಂಶಯ ಬಂದು ಮಾಳಮಾರುತಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಎರಡೇ ದಿನಗಳಲ್ಲಿ ಕೊಲೆಯ ರಹಸ್ಯ ಭೇದಿಸಿದ್ದಾರೆ. ಮಾಳಮಾರುತಿ ಠಾಣೆ ಸಿಬ್ಬಂದಿಗಳ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಶ್ಲಾಘಿಸಿದ್ದಾರೆ.