ಸಾರಾಂಶ
- ಕ್ರೀಡೆ, ಎನ್ ಎಸ್ ಎಸ್,ರೋವರ್ಸ್ ರೇಂಜರ್ಸ್, ಯುವ ರೆಡ್ ಕ್ರಾಸ್ ಘಟಕಗಳ ಸಮಾರೋಪ ಕಾರ್ಯಕ್ರಮ
ಕನ್ನಡ ಪ್ರಭ ವಾರ್ತೆ, ಕಡೂರುಸರ್ಕಾರಿ ಮತ್ತು ಖಾಸಗಿಯಾಗಿ ಸಿಗುತ್ತಿರುವ ಶಿಕ್ಷಣದ ಗುಣಮಟ್ಟದಲ್ಲಿ ಹೆಚ್ಚಿನ ಅಸಮಾನತೆ ಎದ್ದು ಕಾಣುತ್ತಿದೆ ಎಂದು ಬೆಂಗಳೂರಿನ ಇನ್ ಸೈಟ್ ಆಕ್ಟೀವ್ ಲರ್ನಿಂಗ್ ನ ಸಂಸ್ಥಾಪಕ ಮತ್ತು ನಿರ್ದೇಶಕ ಜಿ.ಬಿ.ವಿನಯಕುಮಾರ್ ಅಭಿಪ್ರಾಯ ಪಟ್ಟರು.
ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ ಎಸ್ ಎಸ್,ರೋವರ್ಸ್ ರೇಂಜರ್ಸ್, ಯುವ ರೆಡ್ ಕ್ರಾಸ್ ಘಟಕಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಾಸಂಗದ ಬಳಿಕ ಸ್ಥಳೀಯ ವಾಗಿ ಉದ್ಯೋಗ ಸಿಗದ ಕಾರಣ ನಗರಗಳಿಗೆ ವಲಸೆ ಹೋಗಬೇಕಾದ ಅನಿವಾರ್ಯತೆ ಇದ್ದು ಇರುವ ವ್ಯವಸ್ಥೆಯಲ್ಲಿ ಬದುಕಲು ಶ್ರಮ ಹಾಕಬೇಕು. ಇಲ್ಲವೇ ಸಮಾಜದಲ್ಲಿ ಸ್ವಯಂ ಉದ್ಯೋಗ ಮಾಡಿ ಮಾದರಿಯಾಗಿ ಬದುಕಬೇಕು ಎಂದರು.ನಮ್ಮಲ್ಲಿ ಓದುವ ಸಂಸ್ಕೃತಿ ಸತ್ತು ಹೋಗಿದೆ ಎಂದ ಅವರು ಐಪಿಎಸ್ ,ಐಎಎಸ್ ಆಗಬೇಕೆಂಬ ಛಲ ಮತ್ತು, ರಾಜಕೀಯ ಜೀವನದ ಚುನಾವಣೆಯಲ್ಲಿ ನಿಂತು ಅದರ ಅನುಭವ ಪಡೆದಿದ್ದೇನೆ. ಗ್ರಂಥಾಲಯಗಳಲ್ಲಿ ಅಧ್ಯಯನ ಶೀಲರಾಗಿ ಜ್ಞಾನ ಭಂಡಾರ ಹೆಚ್ಚಿಸಿಕೊಂಡಲ್ಲಿ ಐಎ ಎಸ್ ಐಪಿಎಸ್ ಉದ್ಯೋಗ ಪರೀಕ್ಷೆ ಬರೆಯಲು ಸಾಧ್ಯ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿ ಛಲದಿಂದ ಪ್ರಯತ್ನ ಮಾಡುವ ಜೊತೆ ಶ್ರಮ ಪಟ್ಟು ದಿನಪತ್ರಿಕೆಗಳು ಸೇರಿದಂತೆ ಗ್ರಂಥಗಳ ಅಧ್ಯಯನ ಶೀಲರಾದರೆ ಯಾವುದೇ ಪರೀಕ್ಷೆಗಳನ್ನು ಬರೆಯಲು ಸಾಧ್ಯ. ಅವು ನೀವು ಕಂಡ ಕನಸುಗಳನ್ನು ಸಾಕಾರ ಗೊಳಿಸಲು ಸಹಾಯ ಮಾಡುತ್ತದೆ ಎಂದರು.ಇಂಗ್ಲಿಷ್ ಭಾಷೆಯಲ್ಲೂ ಪ್ರಭುತ್ವ ಸಾಧಿಸಿದಲ್ಲಿ ಅದು ನಿಮ್ಮ ಜೀವನದಲ್ಲಿ ಸಹಾಯಕ್ಕೆ ಬರುತ್ತದೆ ಅವುಗಳನ್ನು ಕಲಿಯದಿದ್ದರೆ ದೊಡ್ಡವರ ಆಧುನಿಕ ಗುಲಾಮಗಿರಿಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಕೆಲಸದ ಯಂತ್ರಗಳಾಗಿ ನಿಮ್ಮನ್ನು ಬಳಸಿಕೊಳ್ಳೋದು ತಪ್ಪಿಸಬೇಕು. ಮುಂದಿನ ದಿನಗಳಲ್ಲಿ ಸಂಕಷ್ಟದ ದಿನಗಳು ಎದುರಾಗಲಿದೆ ಯುವಶಕ್ತಿ ಎಚ್ಚರದಿಂದ ಇರಬೇಕು ಎಂದರು.
ಕರ್ನಾಟಕ ಲೋಕ ಸೇವಾ ಆಯೋಗದ ಸದಸ್ಯ ಎಚ್. ಎಸ್ ಬೋಜ್ಯಾನಾಯ್ಕ ಮಾತನಾಡಿ, ಗುರಿ ಮುಟ್ಟಲು ಶ್ರದ್ಧೆ ಮತ್ತು ಪರಿಶ್ರಮ ಬಹು ಮುಖ್ಯ. ನನಗೆ ಸಿಕ್ಕ ಅವಕಾಶ ಬಳಸಿಕೊಂಡು ನಿಮ್ಮ ಮುಂದಿದ್ದೇನೆ. ಹಾಗೆಯೇಡಾ. ಬಿ .ಆರ್. ಅಂಬೇಡ್ಕರ್ ಸುಮಾರು 50 ಸಾವಿರ ವಿವಿಧ ರೀತಿ ಪುಸ್ತಕಗಳನ್ನು ಅಧ್ಯಯನ ಮಾಡಿ ನೀಡಿದ ಸಂವಿಧಾನದಿಂದ ದೇಶದ ಒಗ್ಗಟ್ಟು ಕಾಪಾಡ ಲಾಗಿದೆ. ಅಧ್ಯಯನಕ್ಕೆ ಯಾವುದೇ ಕ್ಷೇತ್ರದ ಪುಸ್ತಕವಾಗಿದ್ದರೂ ಅಧ್ಯಯನ ಮಾಡುವುದು ಬಹು ಮುಖ್ಯಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಕೆ ಎ.ರಾಜಣ್ಣ ಮಾತನಾಡಿ, ಶೈಕ್ಷಣಿಕ ವರ್ಷದ ವಿವಿಧ ಘಟಕಗಳ ಸಮಾರೋಪ ಸಮಾರಂಭ ಇದಾಗಿದ್ದು, ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಿ ವಿಧ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವ ಕಾರ್ಯ ಇದಾಗಿದೆ. ನೀವು ಕೂಡ ಸಾಧಕರಾಗಲಿ ಎಂಬ ಆಶಯದಿಂದ ಅನುಭವಿಗಳನ್ನು ಕರೆಸಿ ಬದುಕು ಮತ್ತು ಶಿಕ್ಷಣ ಎರಡರ ಕುರಿತು ಅಮೂಲ್ಯ ಸಲಹೆ ನೀಡಿದ್ದಾರೆ. ಇದು ನಿಮ್ಮ ಜೀವನದಲ್ಲಿ ಬರಲಿ ಎಂದು ಆಶಿಸುತ್ತೇನೆ. ನಮ್ಮ ಕಾಲೇಜಿನ ಕನಿಷ್ಠ 200 ವಿದ್ಯಾರ್ಥಿಗಳು ಉನ್ನತ ಹುದ್ದೆಗಳ ಕನಸು ಕಂಡು ನನಸು ಮಾಡಿಕೊಳ್ಳಿ ಎಂದು ಹಾರೈಸಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಕೆಂಪಸಿದ್ದಯ್ಯ, ವಿವಿಧ ವಿಭಾಗಗಳ ಸಂಘಟನೆಗಳ ಸಂಚಾಲಕರು, ವಿವಿಧ ವಿಭಾಗಗಳ ಅಧ್ಯಾಪಕ ಎಸ್. ಕುಮಾರ್, ತಿಮ್ಮರಾಜು, ಬಸವರಾಜ್ ಭಂಡಾರಿ,ಸಂಪತ್ ಕುಮಾರ್, ಶಿವಕುಮಾರ್, ನಾಗೇಶ್,ಲೋಕಪಾವನ,ಜ್ಯೋತಿ, ಬೋಧಕೇತರರು, ವಿದ್ಯಾರ್ಥಿಗಳು ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ಮತ್ತು ಬಹುಮಾನ ವಿತರಣೆ ನಡೆಯಿತು. 14ಕೆಕೆಡಿಯು1.ಕಡೂರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ, ಎನ್ ಎಸ್ ಎಸ್ ಹಾಗು ಮತ್ತಿತರ ವಿಭಾಗಗಳ ಸಮಾರೋಪ ಸಮಾರಂಭದಲ್ಲಿ ಬಿ.ಜಿ ವಿನಯ ಕುಮಾರ್ ರವರನ್ನು ಅಭಿನಂದಿಸಲಾಯಿತು.