ಯಜ್ಞ ಯಾಗಾದಿಗಳಿಂದ ಅನಂತ ಪುಣ್ಯ ಫಲ ಲಭ್ಯ: ರವೀಂದ್ರ ಶರ್ಮಾ

| Published : Sep 29 2025, 01:02 AM IST

ಯಜ್ಞ ಯಾಗಾದಿಗಳಿಂದ ಅನಂತ ಪುಣ್ಯ ಫಲ ಲಭ್ಯ: ರವೀಂದ್ರ ಶರ್ಮಾ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ನವರಾತ್ರಿ ಸಂದರ್ಭದಲ್ಲಿ ಜಗನ್ಮಾತೆ ಸನ್ನಿಧಿಯಲ್ಲಿ ಯಜ್ಞ ಯಾಗಾದಿಗಳನ್ನು ನಡೆಸುವುದರಿಂದ ಅನಂತ ಪುಣ್ಯ ಫಲಗಳು ಲಭಿಸಲಿದೆ ಎಂದು ಕೋಣಂದೂರಿನ ವೇ.ಬ್ರ.ರವೀಂದ್ರ ಶರ್ಮಾ ಹೇಳಿದರು.

ಲೋಕ ಕಲ್ಯಾಣಾರ್ಥವಾಗಿ ನಡೆದ ಶ್ರೀ ಚಂಡಿಕಾ ಹೋಮ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ನವರಾತ್ರಿ ಸಂದರ್ಭದಲ್ಲಿ ಜಗನ್ಮಾತೆ ಸನ್ನಿಧಿಯಲ್ಲಿ ಯಜ್ಞ ಯಾಗಾದಿಗಳನ್ನು ನಡೆಸುವುದರಿಂದ ಅನಂತ ಪುಣ್ಯ ಫಲಗಳು ಲಭಿಸಲಿದೆ ಎಂದು ಕೋಣಂದೂರಿನ ವೇ.ಬ್ರ.ರವೀಂದ್ರ ಶರ್ಮಾ ಹೇಳಿದರು.ಪಟ್ಟಣದ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯಿಂದ ಆಯೋಜಿಸಿರುವ 16ನೇ ವರ್ಷದ ದುರ್ಗಾದೇವಿ ನವರಾತ್ರಿ ಮಹೋತ್ಸವದಲ್ಲಿ ಭಾನುವಾರ ಲೋಕ ಕಲ್ಯಾಣಾರ್ಥವಾಗಿ ನಡೆದ ಶ್ರೀ ಚಂಡಿಕಾ ಹೋಮ ನೆರವೇರಿಸಿ ಮಾತನಾಡಿದರು.ಚಂಡಿಕಾ ಹೋಮ ದುರ್ಗಾದೇವಿಯ ಉಗ್ರ ರೂಪವಾದ ಚಂಡಿಕಾ ದೇವಿಗೆ ಸಮರ್ಪಿತವಾದ ಒಂದು ಶಕ್ತಿಶಾಲಿ ವೈದಿಕ ಆಚರಣೆ. ಇದು ಜೀವನದ ಎಲ್ಲಾ ಅಡೆತಡೆ ನಿವಾರಿಸಲು, ನಕಾರಾತ್ಮಕ ಶಕ್ತಿಗಳು ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ ಪಡೆಯಲು ಸಾಧ್ಯ. ಈ ಯಾಗದಿಂದ ಉತ್ತಮ ಆರೋಗ್ಯ, ಸಮೃದ್ಧಿ, ಯಶಸ್ಸು ಮತ್ತು ಆಧ್ಯಾತ್ಮಿಕ ಬೆಳವಣಿಗೆ ಪಡೆಯಲು ಸಾಧ್ಯ. ಜೀವನದಲ್ಲಿ ದೈವಿಕ ಅನುಗ್ರಹ ಪಡೆಯಲು ಸಹ ಇದು ಪೂರಕ.ನವರಾತ್ರಿ ಹಬ್ಬದ ಸಂದರ್ಭದಲ್ಲಿ ಚಂಡಿಕಾ ಹೋಮ ನಡೆಸುವುದು ಅತ್ಯಂತ ಮಂಗಳಕರವೆಂದು ವೇದ, ಪುರಾಣಗಳಲ್ಲಿ ತಿಳಿಸಲಾಗಿದೆ. ಲೋಕಕಲ್ಯಾಣಕ್ಕಾಗಿ ಈ ಹೋಮ ನಡೆಸಿದಾಗ ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಕಾರಾತ್ಮಕ ಶಕ್ತಿ ಯನ್ನು, ಮಹಾಲಕ್ಷ್ಮಿ ಸಂಪತ್ತು ಮತ್ತು ಯಶಸ್ವಿ ವೃತ್ತಿ ಮತ್ತು ಶಿಕ್ಷಣಕ್ಕಾಗಿ ಸರಸ್ವತಿಯನ್ನು ಸೃಷ್ಟಿಸುತ್ತದೆ. ನವರಾತ್ರಿಯ ದುರ್ಗಾದೇವಿ ಆರಾಧನೆ ಸಂದರ್ಭದಲ್ಲಿ ಇಂತಹ ಪುಣ್ಯಕರ ಯಜ್ಞ, ಯಾಗಾದಿಗ ನಡೆಸುವುದರಿಂದ ನಮಗಿರುವ ದೋಷ ನಿವಾರಣೆಯಾಗಿ ಸಮೃದ್ಧಿ ಪಡೆಯಲು ಸಾಧ್ಯವಿದೆ. ನವರಾತ್ರಿ ಪ್ರಮುಖವಾಗಿ ದುಷ್ಟರ ಶಿಕ್ಷೆ, ಶಿಷ್ಟರ ರಕ್ಷಣೆಗೆ ಇರುವ ಹಬ್ಬ. ಇಂತಹ ಪವಿತ್ರ ನವರಾತ್ರಿ ಸಂದರ್ಭದಲ್ಲಿ ಶ್ರೀದೇವಿ ಆರಾಧನೆ, ಪೂಜೆ, ಪುನಸ್ಕಾರ ಅಗತ್ಯವಾಗಿ ನಡೆಯಬೇಕಿದೆ.ಈ ನಿಟ್ಟಿನಲ್ಲಿ ಬಾಳೆಹೊನ್ನೂರು ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಕಳೆದ 16 ವರ್ಷಗಳಿಂದ ಸಂಪ್ರದಾಯ ಬದ್ಧವಾಗಿ ನವರಾತ್ರಿ ಉತ್ಸವ ಆಚರಿಸಿ ಜಗನ್ಮಾತೆ ಆರಾಧನೆ ನಡೆಸುತ್ತಿರುವುದು ಶ್ಲಾಘನೀಯ ಎಂದರು.ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಪ್ರಧಾನ ಅರ್ಚಕ ಸುಬ್ರಮಣ್ಯ ಭಟ್ ಧಾರ್ಮಿಕ ವಿಧಿ ವಿಧಾನಗಳ ನೇತೃತ್ವ ವಹಿಸಿದ್ದರು. ಸಮಿತಿಯ ಅಧ್ಯಕ್ಷ ಎಚ್.ಡಿ.ನಾಗೇಶ್ ಹೆಗ್ಡೆ, ಕಾರ್ಯಾಧ್ಯಕ್ಷ ಬಿ.ಚನ್ನಕೇಶವ ಬರಗಲ್, ಕೋಶಾಧಿಕಾರಿ ಭಾಸ್ಕರ್ ವೆನಿಲ್ಲಾ, ಪ್ರಧಾನ ಕಾರ್ಯದರ್ಶಿ ಆರ್.ಡಿ.ಮಹೇಂದ್ರ, ಜಂಟಿ ಕಾರ್ಯದರ್ಶಿ ಪ್ರಭಾಕರ್ ಪ್ರಣಸ್ವಿ, ಪ್ರಮುಖರಾದ ಶಿವರಾಮ ಶೆಟ್ಟಿ, ಕೆ.ಟಿ.ವೆಂಕಟೇಶ್, ಎಚ್.ಡಿ.ಸತೀಶ್, ಚೈತನ್ಯ ವೆಂಕಿ, ಎಚ್.ಎಚ್.ಕೃಷ್ಣಮೂರ್ತಿ, ಡಿ.ಎನ್.ಸುಧಾಕರ್, ಬಿ.ಕೆ.ನಾಗ ರಾಜ್, ನಾರಾಯಣಶೆಟ್ಟಿ ತುಪ್ಪೂರು, ರೆನ್ನಿ ದೇವಯ್ಯ, ಬಿ.ಗಿರೀಶ್, ಈಶ್ವರ್ ಇಟ್ಟಿಗೆ, ನಟರಾಜ್ ಶೆಟ್ಟಿ ಮತ್ತಿತರರು ಹಾಜರಿದ್ದರು.೨೮ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿಯ ವತಿಯಿಂದ ದುರ್ಗಾ ಮಹೋತ್ಸವದ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ಶ್ರೀ ಚಂಡಿಕಾ ಹೋಮ ನಡೆಸಲಾಯಿತು.