ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಹೋಮಿಯೋಪಥಿ ಪ್ರಭಾವಿ:ಡಾ.ಗೀತಾ

| Published : May 29 2024, 12:51 AM IST

ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಹೋಮಿಯೋಪಥಿ ಪ್ರಭಾವಿ:ಡಾ.ಗೀತಾ
Share this Article
  • FB
  • TW
  • Linkdin
  • Email

ಸಾರಾಂಶ

ಮಾನಸಿಕ ರೋಗಗಳ ಚಿಕಿತ್ಸೆಯಲ್ಲಿ ಹೋಮಿಯೋಪಥಿ ಅತ್ಯಂತ ಪ್ರಭಾವಿಯಾಗಿದೆ ಹಾಗೂ ಹೋಮಿಯೋಪಥಿ ವಿಧಾನ ಸಂಪೂರ್ಣ ಸುರಕ್ಷಿತ ಹಾಗೂ ನೈಸರ್ಗಿಕವಾಗಿದೆ ಎಂದು ಧಾರವಾಡದ ಪ್ರಾಧ್ಯಾಪಕಿ ಡಾ.ಗೀತಾ ಬೊಮ್ಮನಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಾನಸಿಕ ರೋಗಗಳ ಚಿಕಿತ್ಸೆಯಲ್ಲಿ ಹೋಮಿಯೋಪಥಿ ಅತ್ಯಂತ ಪ್ರಭಾವಿಯಾಗಿದೆ ಹಾಗೂ ಹೋಮಿಯೋಪಥಿ ವಿಧಾನ ಸಂಪೂರ್ಣ ಸುರಕ್ಷಿತ ಹಾಗೂ ನೈಸರ್ಗಿಕವಾಗಿದೆ ಎಂದು ಧಾರವಾಡದ ಪ್ರಾಧ್ಯಾಪಕಿ ಡಾ.ಗೀತಾ ಬೊಮ್ಮನಗೌಡ ಹೇಳಿದರು.

ನಗರದ ಬಿ.ವಿ.ವಿ.ಎಸ್. ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯರು ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ಮಾನಸಿಕ ರೋಗಗಳ ನಿರ್ವಹಣೆಯಲ್ಲಿ ಹೋಮಿಯೋಪಥಿ ಕುರಿತು ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.

ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಪಾಟೀಲ ಮಾತನಾಡಿ, ಹೋಮಿಯೋಪಥಿ ಚಿಕಿತ್ಸೆಯು ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಮಾನಸಿಕ ಅಸಮತೋಲನ ವಿರುದ್ಧ ಕೂಡ ಪರಿಣಾಮಕಾರಿಯಾಗಿದೆ ಎಂದರು.

ಉಪನ್ಯಾಸಕಿ ಡಾ.ಶಮಶ್ಯಾದ ಅಂಕಲಗಿ ಪರಿಚಯಿಸಿ ಸ್ವಾಗತಿಸಿದರು. ಡಾ.ವಿಜಯಲಕ್ಷ್ಮಿ ಪೂಜಾರ ವಂದಿಸಿದರು. ಪ್ರಾಧ್ಯಾಪಕರಾದ ಡಾ.ರವಿ.ಎಸ್. ಕೋಟೆಣ್ಣವರ, ಡಾ ಅಮರೇಶ ಬಳಗಾನೂರ, ಡಾ.ಸುಧೀರ ಬೆಟಗೇರಿ ಇತರರು ಉಪಸ್ಥಿತರಿದ್ದರು.