ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು, ಶೀಘ್ರದಲ್ಲಿ ಹರಿಹರ ತಾಲೂಕು ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯಿಂದ ಹರಿಹರದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಹೇಳಿದ್ದಾರೆ.
- ಶ್ರೀ ನೀಲಕಂಠೇಶ್ವರ ಸ್ನೇಹ ಬಳಗ ವಾರ್ಷಿಕೋತ್ಸವ
- - -ಕನ್ನಡಪ್ರಭ ವಾರ್ತೆ ಹರಿಹರ
ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಲು, ಶೀಘ್ರದಲ್ಲಿ ಹರಿಹರ ತಾಲೂಕು ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯಿಂದ ಹರಿಹರದಲ್ಲಿ ಮಾಹಿತಿ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಹೇಳಿದರು.ನಗರದ ಶ್ರೀ ನೀಲಕಂಠೇಶ್ವರ ಸ್ನೇಹ ಬಳಗ ಕುರುಹಿನಶೆಟ್ಟಿ ಸಮಾಜ ಟ್ರಸ್ಟ್ ವತಿಯಿಂದ ನೇಕಾರ ಬಡಾವಣೆ ಸಮೀಪದ ಶ್ರೀ ಚೌಡಾಂಬಿಕಾ ದೇವಸ್ಥಾನ ಆವರಣದಲ್ಲಿ ಭಾನುವಾರ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಳಮಟ್ಟದ ಸಮುದಾಯಗಳಿಗೆ 20ಕ್ಕೂ ಹೆಚ್ಚು ನಿಗಮ ಮಂಡಳಿಗಳಿವೆ. ಅವುಗಳ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಮಾಹಿತಿ ಕೇಂದ್ರವನ್ನು ಸ್ಥಾಪಿಸಲಾಗುವುದು. ಆ ಮೂಲಕ ಬಡವರ, ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಶ್ರಮಿಸುವ ಇಚ್ಛೆ ವೇದಿಕೆಗೆ ಹೊಂದಿದೆ. ಇದರ ಉಪಯೋಗ ಸಾರ್ವಜನಿಕರು ಪಡೆದುಕೊಳ್ಳುವಂತೆ ತಿಳಿಸಿದರು.ಶ್ರೀ ನೀಲಕಂಠೇಶ್ವರ ಸ್ನೇಹ ಬಳಗ ಅಧ್ಯಕ್ಷ ಎಚ್.ಕೆ. ಕೊಟ್ರಪ್ಪ ಮಾತನಾಡಿ, ಸಂಘ ಹಲವಾರು ವರ್ಷಗಳಿಂದ ಸಾಮಾಜಿಕ, ಧಾರ್ಮಿಕ ಸಾಹಿತ್ಯಕ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಕೋವಿಡ್ ಹಾವಳಿಯಿದ್ದ ಸಂದರ್ಭದಲ್ಲಿ ಬಡವರಿಗೆ ಬಳಗ ವತಿಯಿಂದ ಸಹಾಯ ಮಾಡಿದೆ. ಶ್ರೀ ಶಕ್ತಿ ವೃದ್ಧಾಶ್ರಮಕ್ಕೆ ಟಿವಿ ಕೊಡಿಸಲಾಗಿದೆ. ಸಂಘದ ನೋಂದಣಿ ಆಗಿರಲಿಲ್ಲ. ಈಗ ನೊಂದಣಿಯಾಗಿ ವರ್ಷ ಪೂರೈಸಿದ ಹಿನ್ನೆಲೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಈಡಿಗ ಸಮಾಜದ ಅಧ್ಯಕ್ಷ ವೈ ಕೃಷ್ಣಮೂರ್ತಿ, ಕುರುಬ ಸಮಾಜದ ಮುಖಂಡರಾದ ಕೆ.ಬಿ. ರಾಜಶೇಖರ್, ಸಿ.ಎನ್. ಹುಲಿಗೇಶ್, ದೇವಾಂಗ ಸಮಾಜ ಅಧ್ಯಕ್ಷ ಪ್ರಕಾಶ್ ಕೋಳೂರು, ಸ್ವಕುಳಸಾಳಿ ಸಮಾಜ ಅಧ್ಯಕ್ಷ ಮಹಾಂತೇಶ್ ಭಂಡಾರಿ, ಗಂಗಾಮತಸ್ಥ ಸಮಾಜದ ಮುಖಂಡ ಮಹಾಂತೇಶ್ ಕೆಂಚನಹಳ್ಳಿ, ಗೊಲ್ಲ ಸಮಾಜದ ಮುಖಂಡ ಬಸಣ್ಣ ಚಿಕ್ಕಬಿದರಿ, ಬಲಿಜ ಸಮಾಜ ಮುಖಂಡ ಚಂದ್ರಶೇಖರ್ ಕೆ.ಎನ್.ಹಳ್ಳಿ ಮಾತನಾಡಿದರು.ನಗರಸಭೆ ಮಾಜಿ ಅಧ್ಯಕ್ಷೆ ಆಶಾ ಮರಿಯೋಜಿ ರಾವ್, ರಾಧಾ ಸಿ.ಎನ್. ಹುಲಿಗೇಶ್, ಸದಸ್ಯೆ ಲಕ್ಷ್ಮೀ ಮೋಹನ್ ದುರುಗೋಜಿ, ದಾವಣಗೆರೆ ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ್, ಸವಿತಾ ಸಮಾಜದ ಹನುಮಂತಪ್ಪ, ಹಿರಿಯ ಕ್ರೀಡಾಪಟು ಎಚ್.ನಿಜಗುಣ, ಬ್ರಹ್ಮಯ್ಯ, ರಾಜು ಮಣಿ, ವೀರಣ್ಣ ಅಗಡಿ, ಗಂಗಾಧರ್ ಕೊಟಗಿ, ಮಂಜುನಾಥ ಅಗಡಿ, ಪ್ರಭು ಕೊಟಗಿ, ಚಂದ್ರಪ್ಪ ಅಗಡಿ, ಜ್ಞಾನದೇವ ಇತರರು ಉಪಸ್ಥಿತರಿದ್ದರು.
- - --16HRR.01:
ಕಾರ್ಯಕ್ರಮವನ್ನು ಮರಾಠ ನಿಗಮ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್ ಉದ್ಘಾಟಿಸಿದರು.