ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಜು.6ರಂದು ತಾಲೂಕಿನ ಬಸರಕೋಡ ಗ್ರಾಮದ ಐತಿಹಾಸಿಕ ದೇವಾಲಯ ಶ್ರೀ ಪವಾಡ ಬಸವೇಶ್ವರ ದೇವಾಲಯದ 32 ಕೆಜಿ ಬೆಳ್ಳಿಯ ಪ್ರತಿಮೆ ಕಳ್ಳತನ ಮಾಡಿದ ಖದೀಮರ ಮಾಹಿತಿ ತಿಳಿದು ಬಂದಿದೆ. ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಬೆಳಗಾವಿ ಉತ್ತರ ವಲಯದ ಪೂಲೀಸ್ ಮಹಾನೀರಿಕ್ಷಕ ಸಂದೀಪ್ ಪಾಟೀಲ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಜು.6ರಂದು ತಾಲೂಕಿನ ಬಸರಕೋಡ ಗ್ರಾಮದ ಐತಿಹಾಸಿಕ ದೇವಾಲಯ ಶ್ರೀ ಪವಾಡ ಬಸವೇಶ್ವರ ದೇವಾಲಯದ 32 ಕೆಜಿ ಬೆಳ್ಳಿಯ ಪ್ರತಿಮೆ ಕಳ್ಳತನ ಮಾಡಿದ ಖದೀಮರ ಮಾಹಿತಿ ತಿಳಿದು ಬಂದಿದೆ. ಇನ್ನಷ್ಟು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಬೆಳಗಾವಿ ಉತ್ತರ ವಲಯದ ಪೂಲೀಸ್ ಮಹಾನೀರಿಕ್ಷಕ ಸಂದೀಪ್ ಪಾಟೀಲ ತಿಳಿಸಿದರು.ಮಂಗಳವಾರ ಬಸರಕೋಡ ಬಸವೇಶ್ವರ ದೇವಾಲಯಕ್ಕೆ ಭೇಟಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ವಿವಿಧ ತನಿಖಾ ತಜ್ಞರ ತಂಡಗಳನ್ನು ರಚನೆ ಮಾಡಲಾಗಿದೆ. ಸದ್ಯ ಕಳ್ಳತನಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವುಗಳು ಹಾಗೂ ಕಳ್ಳರ ಬಗ್ಗೆ ಮಾಹಿತಿ ದೂರೆಕಿದೆ. ಶೀಘ್ರದಲ್ಲೇ ಕಳ್ಳತನ ಮಾಡಿದ ಕಳ್ಳರನ್ನು ಪತ್ತೆ ಹಚ್ಚುವ ಮೂಲಕ ಮತ್ತು 32 ಕೆಜಿಯ ಬೆಳ್ಳಿಯ ಪ್ರತಿಮೆ ಸೇರಿದಂತೆ ಅನೇಕ ರೀತಿಯ ತನಿಖೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಲಕ್ಷಾಂತರ ಭಕ್ತರನ್ನು ಹೊಂದಿರುವ ದೇವಾಲಯ ಕಳ್ಳತನ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿರುವುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲಾಗಿದೆ ಎಂದ ಅವರು, ಎಷ್ಟು ದಿನಗಳಲ್ಲಿ ಪ್ರತಿಮೆ ದೇವಾಲಯಕ್ಕೆ ಬರಬಹುದು. ಮತ್ತು ಕಳ್ಳರ ಬಂಧನವಾಗಬಹುದು ಎಂಬುದನ್ನು ನಿಖರವಾಗಿ ಹೇಳಲಾಗುವುದಿಲ್ಲ. ಚುರುಕಿನ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲದಕ್ಕೂ ಉತ್ತರ ಸಿಗಲಿದೆ ಎಂದರು.ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ವೈ.ಬಿರಾದಾರ ಹಾಗೂ ಸದಸ್ಯ ಶ್ರೀಶೈಲ ಮೇಟಿ ಹಾಗೂ ನೀಲಕಂಠರಾವ ನಾಡಗೌಡ (ಅಪ್ಪು ಧನಿ) ಅವರು ಮಾತನಾಡಿ, ಕೆಲವು ದಿನಗಳ ಹಿಂದೆ ದೇವಾಲಯದಲ್ಲಿ ಕಳ್ಳತನವಾದ ಪವಾಡ ಮುತ್ಯಾರ ಪ್ರತಿಮೆಗೆ ಸಂಬಂಧಿಸಿದಂತೆ ಇಂದು ಬೆಳಗಾವಿ ಐಜಿಪಿ ಸಂದೀಪ್ ಪಾಟೀಲರು ಇಂದು ದೇವಾಲಯಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಾಧ್ಯಮಗಳ ಮುಂದೆ ಕಳ್ಳತನ ಕುರಿತು ಮಹತ್ವದ ಸುಳಿವು ಸಿಕ್ಕಿರುವುದಾಗಿ ವಿವರಿಸಿದ್ದಾರೆ. ದೇವಾಲಯದ ಸದ್ಭಕ್ತರು ಮತ್ತು ಆಡಳಿತ ಮಂಡಳಿಯವರು ಪೂಲೀಸರ ತನಿಖೆ ಮುಗಿಯುವವರೆಗೆ ಸಹಕಾರ ನೀಡುತ್ತೇವೆ. ಅಲ್ಲದೇ, ಕಾಯುತ್ತೇವೆ. ಪ್ರಸ್ತುತ ತನಿಖೆ ಪ್ರಗತಿಹಂತದಲ್ಲಿದ್ದು, ಶೀಘ್ರ ಕಳ್ಳರ ಬಂಧನವಾಗಿ ದೇವರ ಪ್ರತಿಮೆ ಬರಲಿದೆ ಎಂಬ ವಿಶ್ವಾಸ ನಮಗಿದೆ. ದೇವಾಲಯ ಸುರಕ್ಷತಾ ದೃಷ್ಟಿಯಿಂದ ದೇವಾಲಯದಲ್ಲಿ ಇರುವ 20 ಸಿಸಿ ಕ್ಯಾಮರಾಗಳ ಜೊತೆಗೆ ಹೆಚ್ಚುವರಿಯಾಗಿ ಮತ್ತೆ 15 ಕ್ಯಾಮರಾಗಳ ಅಳವಡಿಸಲಾಗುತ್ತಿದೆ. ಮತ್ತು ಎರಡು ದೇವಾಲಯಕ್ಕೆ ಹೊಸ ಕಬ್ಬಿನದ ಗೇಟ್‌ಗಳನ್ನು ಗ್ರೀಲ್ ಅಳವಡಿಸಲಾಗುತ್ತಿದೆ. ಮತ್ತು ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿ ನೇಮಕ ಹಾಗೂ ಸ್ಟ್ರಾಂಗ್ ರೂಂ ಮಾಡಲಾಗುವುದು ಎಂದು ತಿಳಿಸಿದರು.ಈ ವೇಳೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಸಿಪಿಐ ಮಹಮ್ಮದ್ ಫಸಿಯುದ್ದಿನ ಸೇರಿದಂತೆ ಪೂಲೀಸ್ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಎಸ್.ಎಸ್.ಹಂಡರಗಲ್ಲ, ಅಪ್ಪು ನಾಡಗೌಡ, ವಿರೇಶ ಮಂಕಣಿ ಮುಂತಾದವರು ಉಪಸ್ಥಿತರಿದ್ದರು.