ತೋಕೂರು: ಅಂತರ್ಜಲದ ಒತ್ತಡದ ಬಗ್ಗೆ ಮಾಹಿತಿ ಕಾರ್ಯಾಗಾರ

| Published : Jun 03 2024, 12:31 AM IST

ತೋಕೂರು: ಅಂತರ್ಜಲದ ಒತ್ತಡದ ಬಗ್ಗೆ ಮಾಹಿತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಸುತ್ತ ಮುತ್ತಲು ಗಿಡ ಮರಗಳನ್ನು ನೆಟ್ಟು ವಾತಾವರಣದ ಉಷ್ಣತೆಯನ್ನು ತಂಪು ಮಾಡಲು ಸಾಧ್ಯವಿದೆ ಎಂದು ಪಿಯೂಸ್‌ ಹೇಳಿದರು.

ಕನ್ನಡಪ್ರಭವಾರ್ತೆ ಮೂಲ್ಕಿ

ಕೊಳವೆ ಬಾವಿ ಮರು ಪೂರಣ , ಮಳೆ ನೀರು ಶೇಖರಣೆ, ಇಂಗು ಗುಂಡಿ ಮಾಡುವುದು, ಕಿಂಡಿ ಅಣೆಕಟ್ಟು ಮುಂತಾದ ನೀರು ಇಂಗಿಸುವಿಕೆ ವಿಧಾನ ದಿಂದ ಅಂತರ್ಜಲ ವೃದ್ಧಿ ಮಾಡಲು ಸಾಧ್ಯ ಎಂದು ನಿಟ್ಟೆ ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಧನ್ವಿ ಹಾಗೂ ಪಿಯೂಸ್ ಹೇಳಿದರು.

ತೋಕೂರು ಸಂಘದ ಸಭಾಭವನದಲ್ಲಿ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ಹಾಗೂ ತೋಕೂರು ತಪೋವನದ ಡಾ. ಎಂ. ಆರ್. ಎಮ್, ಎಂ, ಆಂಗ್ಲ ಮಾಧ್ಯಮ ಶಾಲೆ ಆಶ್ರಯದಲ್ಲಿ ಜರುಗಿದ ಅಂತರ್ಜಲ ಒತ್ತಡದ ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ನೀಡಿ ಮಾತನಾಡಿದರು.

ಸುತ್ತ ಮುತ್ತಲು ಗಿಡ ಮರಗಳನ್ನು ನೆಟ್ಟು ವಾತಾವರಣದ ಉಷ್ಣತೆಯನ್ನು ತಂಪು ಮಾಡಲು ಸಾಧ್ಯವಿದೆ ಎಂದು ಹೇಳಿದರು.

ನಿಟ್ಟೆ ರಾಮಣ್ಣ ಶೆಟ್ಟಿ ಶಾಲೆಯ ಶಿಕ್ಷಕಿ ಜ್ಯೋತಿ ಬಂಜನ್ ಮಾಹಿತಿ ನೀಡಿ ದ. ಕ. ಉಡುಪಿಯಲ್ಲಿ ಅಂತರ್‌ಜಲ ಮಟ್ಟ ಕುಸಿತ ಕಂಡಿಲ್ಲ ವಾದರೂ ಪಕ್ಕದ ಕಡೂರಿನಲ್ಲಿ ಅರಣ್ಯ ಪ್ರದೇಶವಿದ್ದರೂ ನೀರಿನ ಮಟ್ಟ ಕುಸಿತ ಕಂಡಿರುವುದು ಆತಂಕ ವಿಷಯವಾಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚತ್ತು ಕೊಳ್ಳಬೇಕಾಗಿದೆ ಎಂದು ಹೇಳಿದರು.

ತೋಕೂರು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋಧ ದೇವಾಡಿಗ, ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್, ತೋಕೂರು ರಾಮಣ್ಣ ಶೆಟ್ಟಿ ಶಾಲೆಯ ಶಿಕ್ಷಕ - ರಕ್ಷಕ ಸಂಘದ ಅಧ್ಯಕ್ಷರಾದ ಪುಪ್ಪರಾಜ ಚೌಟ, ಸದಸ್ಯ ನರೇಂದ್ರ ಪ್ರಭು, ಡಾ. ನಂದಿನಿ, ಪತ್ರಕರ್ತ ಗಣೇಶ ಪಂಜ, ಗೀತಾ ಶೆಟ್ಟಿಗಾರ್ ಉಪಸ್ಥಿತರಿದ್ದರು.

ಕ್ಲಬ್ ಅಧ್ಯಕ್ಷ ಜಗದೀಶ ಕುಲಾಲ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಸೀಮಾ ಸನಿಲ್ ವಂದಿಸಿದರು. ಸುರೇಖಾ ಕಲ್ಲಾಪು ಕಾರ್ಯಕ್ರಮ ನಿರೂಪಿಸಿದರು.