ಸಾರಾಂಶ
ಗಣಿಬಾಧಿತ ಪ್ರದೇಶಗಳೆಂದು ಗುರುತಿಸಿರುವಂತಹ ೧೩ ಗ್ರಾಮ ಪಂಚಾಯಿತಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇಂದು ೩೦ಕೋಟಿ ವೆಚ್ಚದಲ್ಲಿ ಸುಮಾರು ೨೫ ಕಿ.ಮೀ. ಸಿಸಿ ರಸ್ತೆಗಳ ನಿರ್ಮಾಣ ಹಾಗೂ ರಸ್ತೆಗಳ ಅಭಿವೃದ್ದಿ ಮಾಡುತ್ತಿದ್ದು ಇದನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕನಾಯನಹಳ್ಳಿ
ಗಣಿಬಾಧಿತ ಪ್ರದೇಶಗಳೆಂದು ಗುರುತಿಸಿರುವಂತಹ ೧೩ ಗ್ರಾಮ ಪಂಚಾಯಿತಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಇಂದು ೩೦ಕೋಟಿ ವೆಚ್ಚದಲ್ಲಿ ಸುಮಾರು ೨೫ ಕಿ.ಮೀ. ಸಿಸಿ ರಸ್ತೆಗಳ ನಿರ್ಮಾಣ ಹಾಗೂ ರಸ್ತೆಗಳ ಅಭಿವೃದ್ದಿ ಮಾಡುತ್ತಿದ್ದು ಇದನ್ನು ಸಾರ್ವಜನಿಕರು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಸಿ.ಬಿ.ಸುರೇಶ್‌ಬಾಬು ತಿಳಿಸಿದರು. ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಿಸಿರಸ್ತೆಗೆ ಗುದ್ದಲಿ ಪೂಜೆ ನೇರವೆರಿಸಿ ಮಾತನಾಡಿದ ಅವರು, ಗಣಿಬಾದಿತ ಪ್ರದೇಶಾಭಿವೃದ್ದಿ ಯೋಜನೆಯಡಿ ಯಳನಾಡು ಪಂಚಾಯಿತಿ ಹಾಗೂ ಗಾಣದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ೩೦ಕೋಟಿಗೂ ಹೆಚ್ಚು ಅನುದಾನದಲ್ಲಿ ರಸ್ತೆಗಳ ಅಭಿವೃದ್ದಿಗೆ ಚಾಲನೆ ನೀಡಿದ್ದೇನೆ ಎಂದರು. ಜಿ.ಪಂ.ಎಇಇ ಮೋಹನ್ ಮಾತನಾಡಿ ಇಂದು ಹುಳಿಯಾರು ಹೋಬಳಿಯ ಯಳನಡು ಗ್ರಾಮದ ಮೂಲಕ ಗಣಿ ಪ್ರದೇಶಕ್ಕೆ ಹೋಗುವಂತಹ ರಸ್ತೆ ಅಭಿವೃದ್ದಿಯನ್ನು ೩ಕೋಟಿವೆಚ್ಚದಲ್ಲಿ , ಅಬೂಸಾಬ್‌ಪಾಳ್ಯದ ಮೂಲಕ ವಳಗೆರಹಳ್ಳಿಗೆ ಹೋಗುವಂತಹ ರಸ್ತೆ ಅಭಿವೃದ್ದಿಯನ್ನು ೩ ಕೋಟಿ ವೆಚ್ಚದಲ್ಲಿ, ಕಂಪನಹಳ್ಳಿಯಿಂದ ಗೌಡಗೆರೆ ಮುಖಾಂತರ ಕೆಂಕೆರೆಗೆ ಹೋಗುವಂತಹ ರಸ್ತೆ ಅಭಿವೃದ್ದಿ ೯ಕೋಟಿ ವೆಚ್ಚದಲ್ಲಿ, ಮೇಲನಹಳ್ಳಿ ರಸ್ತೆಯಿಂದ ಗೇಮಾನಾಯ್ಕನತಾಂಡ್ಯ ಹೋಗುವ ರಸ್ತೆ ಅಭಿವೃದ್ದಿ ೨.೨೫ಕೋಟಿವೆಚ್ಚದಲ್ಲಿ, ಗ್ಯಾರಂಟಿಪಾಳ್ಯದ ಮೂಲಕ ಗಾಣದಾಳು ಸೇರುವ ರಸ್ತೆ ಅಭಿವೃದ್ದಿ ೩.೭೫ಕೋಟಿ ವೆಚ್ಚದಲ್ಲಿ, ಗುರುವಾಪುರದಲ್ಲಿ ರಸ್ತೆ ಅಭಿವೃದ್ದಿ ೧.೨೦ಕೋಟಿವೆಚ್ಚದಲ್ಲಿ, ಕಂಪನಹಳ್ಳಿ ಮಾರುತಿನಗರದ ಮೂಲಕ ಗುರುವಾಪುರಕ್ಕೆ ಸೇರುವ ರಸ್ತೆ ಅಭಿವೃದ್ದಿ ೭.೫೦ಕೋಟಿವೆಚ್ಚದಲ್ಲಿ ಕಾಮಗಾರಿಗಳನ್ನು ಮಾಡಲಾಗುವುದು ಒಟ್ಟು ೫ಮೀಟರ್ ಅಗಲ ಹಾಗು ಎಂಟು ಇಂಚು ದಪ್ಪ ಇರುವಂತಹ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುವುದು ಗ್ರಾಮಗಳ ಬಳಿ ಚರಂಡಿಗಳನ್ನು ನಿರ್ಮಿಸಲಾಗುವುದು ರಸ್ತೆ ಅಕ್ಕಪಕ್ಕದ ರೈತರು ರಸ್ತೆ ಕಾಮಗಾರಿ ನಡೆಯುವ ವೇಳೆ ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಅಬುಸಾಬ್‌ಪಾಳ್ಯದ ಬಾಗದ ರಸ್ತೆ ಕಾಮಗಾರಿ ನಡೆಯುವ ಮಾರ್ಗದಲ್ಲಿ ರೈತರ ಮನವೊಲಿಸಲು ಚಂದ್ರಪ್ಪ ಎಂಬ ರೈತರ ಮನೆಗೆ ಶಾಸಕರೇ ಭೇಟಿ ನೀಡಿ ಗುಣಮಟ್ಟದ ಬಾಳಿಕೆ ಬರುವಂತಹ ರಸ್ತೆ ನಿರ್ಮಿಸಲಾಗುತ್ತಿದ್ದು ರೈತರು ಸಹಕಾರ ನೀಡುವಂತೆ ಮನವೊಲಿಸಿದರು.ಕಾರ್ಯಕ್ರಮದಲ್ಲಿ ಯಳನಡು ಗ್ರಾ ಪಂ ಅಧ್ಯಕ್ಷೆ ನಂದಿನಿ, ಮಾಜಿ ಉಪಾಧ್ಯಕ್ಷ ಉಮೇಶ್, ಗೀತ, ಶಶಿಧರ್ ದಯಾನಂದ್, ಯತೀಶ್ , ಬಸವಯ್ಯ, ಗುರುಪ್ರಸಾದ್, ಲಾಳಿ ಸೋಮಶೇಖರಯ್ಯ, ಪಿಡಿಒ ಹರ್ಷ ಎಸ್.ಎಂ, ಮುತುವಲ್ಲಿ ಆಸೀಬ್ ಸಾಬ್, ಷಫಿಸಾಬ್, ಫಯಾಜ್, ರಿಯಾಜ್, ಮಾಜಿ ಕೃಷಿಸಮಾಜದ ಅಧ್ಯಕ್ಷ ರೇಣುಕಪ್ರಸಾದ್, ದೇವರಾಜ , ತಿಮ್ಮಯ್ಯ, ರಾಮಣ್ಣ, ಮುದ್ದಯ್ಯ ಸೇರಿದಂತೆ ಮತ್ತಿತರರು ಇದ್ದರು.