ಸಾರಾಂಶ
ಹೊಸಕೋಟೆ: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆ ಮತ್ತು ಚರಂಡಿ ಸೇರಿದಂತೆ ಇತರೆ ಮೂಲ ಸೌಕರ್ಯಗಳು ಆಯಾ ಗ್ರಾಮಗಳ ಪ್ರಗತಿಯ ಸಂಕೇತ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆ ಮತ್ತು ಚರಂಡಿ ಸೇರಿದಂತೆ ಇತರೆ ಮೂಲ ಸೌಕರ್ಯಗಳು ಆಯಾ ಗ್ರಾಮಗಳ ಪ್ರಗತಿಯ ಸಂಕೇತ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ತಾಲೂಕಿನ ಮುಗಬಾಳ ಗ್ರಾಪಂ ವ್ಯಾಪ್ತಿಗೆ ಸೇರಿದ ಸಿದ್ದಾಪುರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 10 ಲಕ್ಷ ರು. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಲಸಹಳ್ಳಿ ಮತ್ತು ನಿಡಘಟ್ಟ ಗ್ರಾಮಗಳಲ್ಲಿ ಕೆಆರ್‌ಡಿಎಲ್ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ 35 ಲಕ್ಷ ರು. ಮೊತ್ತದ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಹಾಗೂ ದೊಡ್ಡನಲ್ಲಾಳ ಗ್ರಾಪಂ ವ್ಯಾಪ್ತಿಯ ದೊಡ್ಡನಲ್ಲಾಳ, ಚಿಕ್ಕನಲ್ಲಾಳ, ದಬ್ಬಗುಂಟೆ, ದೊಡ್ಡದೇನಹಳ್ಳಿ ಉಮ್ಮಲು ಗ್ರಾಮಗಳಲ್ಲಿ ಒಟ್ಟು 1.5 ಕೋಟಿ ವೆಚ್ಚದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.ಸರ್ಕಾರದ ವಿವಿಧ ಯೋಜನೆಗಳಿಂದ ಗ್ರಾಮಗಳ ಅಭಿವೃದ್ಧಿಗಾಗಿ ಹಣ ತಂದು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿಗಳಿಗಾಗಿ ಜನಪ್ರತಿನಿಧಿಗಳ ಜೊತೆಗೆ ಗ್ರಾಮಸ್ಥರು ಕೂಡ ಜವಾಬ್ದಾರಿ ವಹಿಸಿಕೊಳ್ಳಬೇಕಾಗುತ್ತದೆ ಎಂದರು.
ಗ್ರಾಪಂ ಅಧ್ಯಕ್ಷೆ ಭಾಗ್ಯ ನಾಗರಾಜ್ ಮಾತನಾಡಿ, ಹಲಸಹಳ್ಳಿ ಮತ್ತು ನಿಡಘಟ್ಟ ಗ್ರಾಮಗಳಲ್ಲಿ ಶಾಸಕರು ರಸ್ತೆಗಳ ಅಭಿವೃದ್ಧಿಗೆ ಗುದ್ದಲಿಪೂಜೆ ನೆರವೇರಿಸಿದ್ದು, ಶೀಘ್ರವಾಗಿ ಕಾಮಗಾರಿಯನ್ನು ಮುಗಿಸಿ ಗ್ರಾಮಸ್ಥರ ಸಂಚಾರಕ್ಕೆ ಅನುವು ಮಾಡಲಾಗುತ್ತದೆ ಎಂದರು.ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೋಡಿಹಳ್ಳಿ ಸುರೇಶ್, ಬಮುಲ್ ನಿರ್ದೇಶಕ ಎಲ್‌ಅಂಡ್ ಟಿ.ಮಂಜುನಾಥ್, ಗ್ರಾಪಂ ಸದಸ್ಯರಾದ ಮಂಜುಳ ವೈ.ಕೆ, ಪಿಡಿಒ ಲೋಕೇಶ್, ಕಾರ್ಯದರ್ಶಿ ಮೆಹಬೂಬ್, ಮುಖಂಡರಾದ ಪ್ರವೀಣ್ ಹಳ್ಳಿಗೌಡ, ಗುರುಬಸಪ್ಪ, ನಂಜಪ್ಪ ಗಣ್ಯರು ಹಾಜರಿದ್ದರು.
ಪೋಟೋ 13 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶರತ್ ಬಚ್ಚೇಗೌಡ ಭೂಮಿಪೂಜೆ ನೆರವೇರಿಸಿದರು.