ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ನರೇಂದ್ರ ಮೋದಿ ಗುಜರಾತಿನ ಓರ್ವ ವ್ಯಕ್ತಿಗೆ ಭೂತಾನ್ ಹಾಗೂ ಬರ್ಮಾಗಳಿಂದ ಅಡಕೆ ಆಮದು ಮಾಡಲು ಅವಕಾಶ ಕಲ್ಪಿಸಿದ್ದರ ಫಲವಾಗಿಯೇ ದೇಶದಲ್ಲಿ ಅಡಕೆ ಬೆಲೆ ಕುಸಿಯುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಇಲ್ಲ ಎಂದು ಕಾಂಗ್ರೆಸ್ ನಾಯಕ ಡಾ. ಎಂ.ವೀರಪ್ಪ ಮೊಯ್ಲಿ ಆರೋಪಿಸಿದರು.ಅವರು ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಕಾಂಗ್ರೆಸ್ ಬಡವರ ಪಕ್ಷವಾಗಿದೆ. ಸಾಮಾಜಿಕ ನ್ಯಾಯ, ಜನರಿಗೆ ಬದುಕು ಕೊಟ್ಟಿದೆ. ಬಿಜೆಪಿ ಪ್ರತಿನಿತ್ಯವೂ ಸುಳ್ಳುಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಮುಂದೆಯೂ ಜನರಿಗೆ ಕಾಂಗ್ರೆಸ್ ಮಾತ್ರ, ಭರವಸೆ, ಗ್ಯಾರಂಟಿ ಎಂದರು.
ಹೆಬ್ರಿಯಲ್ಲಿ ತಾಲೂಕು ಸೇರಿದಂತೆ ಹಳ್ಳಿಯ ಪ್ರತಿಯೊಂದು ರಸ್ತೆಗಳನ್ನು ಕಾಂಗ್ರೆಸ್ ಅಭಿವೃದ್ಧಿ ಮಾಡಿದೆ. 350 ಕೋಟಿ ರು. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕಾರ್ಯಗತ ಗೊಳಿಸಿ ಮೆಲ್ದರ್ಜೆಗೆ ಏರಿಸಲಾಗಿದೆ. ಬಿಜೆಪಿಯವರಿಗೆ ಅಭಿವೃದ್ಧಿ ಏನೆಂದು ಗೊತ್ತಿಲ್ಲ ಎಂದರು.ರಾಜ್ಯ ಸರ್ಕಾರ ೫ ಗ್ಯಾರಂಟಿಯ ಮೂಲಕ ಜನರ ಬದುಕಿಗೆ ಗ್ಯಾರಂಟಿ ನೀಡಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಇನ್ನಷ್ಟು ಅತ್ಯುತ್ತಮ ಗ್ಯಾರಂಟಿಯ ಯೋಜನೆಯನ್ನು ಜನತೆಗೆ ಕಾಂಗ್ರೆಸ್ ನೀಡಲಿದೆ. ರಾಜ್ಯದಲ್ಲಿ ೨೫ ಸೀಟುಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುತ್ತೇನೆ ಎಂದ ದೇವೇಗೌಡರು ಮೋದಿ ಜೊತೆಗೆ ಸೇರಿಕೊಂಡಿದ್ದಾರೆ. ಏನು ಮಾತನಾಡುತ್ತಿದ್ದಾರೆ ಎಂದು ದೇವೆಗೌಡರಿಗೆ ಅರಿವಿಲ್ಲ ಎಂದು ಮೊಯ್ಲಿಕ ಹೇಳಿದರು.ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಿನಾಲೆ ಚಂದ್ರಶೇಖರ ಬಾಯರಿ, ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಮುದ್ರಾಡಿ ಮಂಜುನಾಥ ಪೂಜಾರಿ, ಹೆಬ್ರಿ ಪ್ರವೀಣ್ ಬಲ್ಲಾಳ್, ಡಿ.ಆರ್.ರಾಜು ಕಾರ್ಕಳ, ಕಿರಣ್ ಹೆಗ್ಡೆ ಕಾರ್ಕಳ, ನವೀನ್ ಕೆ. ಅಡ್ಯಂತಾಯ, ಶೀನ ಪೂಜಾರಿ ಹೆಬ್ರಿ, ಭಾಸ್ಕರ ಮೊಯ್ಲಿ ಮಂಗಳೂರು, ಪ್ರಭಾಕರ ಬಂಗೇರ ಕಾರ್ಕಳ, ಸೀತಾನದಿ ರಮೇಶ ಹೆಗ್ಡೆ ಸಹಿತ ನಾಯಕರು ಹಾಜರಿದ್ದರು.