ಜಿಲ್ಲೆಯ ಉಳಿದ 5 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸುವುದು ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ನಡೆಸಿದ ಬಂದ್ ಯಶಸ್ವಿಯಾಗಿದೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಉಳಿದ 5 ತಾಲೂಕುಗಳನ್ನು ಸಂಪೂರ್ಣ ಬರಪೀಡಿತ ಪ್ರದೇಶಗಳೆಂದು ಘೋಷಿಸುವುದು ಹಾಗೂ ರಾಷ್ಟ್ರೀಯ ಬ್ಯಾಂಕ್‌ಗಳು, ಸಹಕಾರ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ಸರ್ವ ಸಂಘಟನೆಗಳ ಹೋರಾಟ ಸಮಿತಿ ನಡೆಸಿದ ಬಂದ್ ಯಶಸ್ವಿಯಾಗಿದೆ.

ಬೆಳಗ್ಗೆಯಿಂದಲೇ ಸರ್ವ ಸಂಘಟನೆಗಳ ಹೋರಾಟ ಸಮಿತಿ ಮುಖಂಡರು, ಬೈಕ್ ಗಳ ಮೇಲೆ ಸಂಚರಿಸಿ ಅನ್ನದಾತನಿಗೆ ಆದ ಅನ್ಯಾಯದ ವಿರುದ್ಧ ಸಂಪೂರ್ಣ ಬಂದ್ ಮಾಡಿ ಬೆಂಬಲಿಸುವಂತೆ ಮಾಡಿದ ಮನವಿಗೆ ಅಂಗಡಿ ಮುಂಗಟ್ಟುಕಾರರು ವ್ಯಾಪಾರ-ವಹಿವಾಟು ಬಂದ್ ಮಾಡಿ ಬೆಂಬಲ ಸೂಚಿಸಿದರು. ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಬೆಳಗ್ಗೆಯಿಂದ ಬಸ್ ಸಂಚಾರವೂ ಸ್ಥಗಿತಗೊಂಡಿತ್ತು.

ಮೈಲಾಪುರ ಅಗಸಿಯಿಂದ ಪ್ರಾರಂಭಗೊಂಡ ಪಾದಯಾತ್ರೆ, ಗಾಂಧಿ ವೃತ್ತ, ಬಾಬು ಜಗಜಜೀವನರಾಂ ವೃತ್ತ, ಕನಕ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಲಾಲ್‌ ಬಹಾದ್ದೂರ್‌ ಶಾಸ್ತ್ರಿ ವೃತ್ತ, ನೇತಾಜಿ ಸುಭಾಷ್ಚಂದ್ರ ಭೋಸ್‌ ವೃತ್ತಕ್ಕೆ ಆಗಮಿಸಿ, ಬಹಿರಂಗ ಪ್ರತಿಭಟನಾ ಸಭೆ ನಡೆಸಿದರು.

ಸಂಘಟನೆಗಳ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನವರ ಮಾತನಾಡಿ, ಶೇ.85 ರಿಂದ 90 ರವರೆಗೆ ಬೆಳೆ ಹಾನಿಯಾಗಿದ್ದರೂ ಸರ್ಕಾರ ಉಳಿದ 5 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡದೇ ಅನ್ಯಾಯ ಮಾಡಿದೆ. ಅಂತರ್ಜಲ ಬತ್ತಿದ್ದು, ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜನ-ಜನಾವಾರುಗಳಿಗೆ ತುಂಬಾ ತೊಂದರೆಯಾಗಿದ್ದು, ಈ ಭಾಗದ ರೈತ ಮತ್ತು ಕುಲಿಕಾರ್ಮಿಕರು ಕೆಲಸವಿಲ್ಲದೇ ಹೊಟ್ಟೆ ಪಾಡಿಗಾಗಿ ದಿನನಿತ್ಯ ಸಾವಿರಾರು ಜನರು ಬೆಂಗಳೂರು ಮತ್ತು ಮುಂಬೈ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಗಾಲದ ವಾಸ್ತವ ಸ್ಥಿತಿಯ ಬಗ್ಗೆ ಮನವರಿಕೆ ಮಾಡುವಲ್ಲಿ ಜಿಲ್ಲೆಯ ಶಾಸಕರು, ಲೋಕಸಭಾ ಸದಸ್ಯರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿವೆ. ಸೆ.17 ರೊಳಗರ ಐದು ತಾಲೂಕುಗಳನ್ನೂ ಬರ ಪಟ್ಟಿಗೆ ಸೇರ್ಪಡೆ ಮಾಡದಿದ್ದರೆ ಸಂಪೂರ್ಣ ಜಿಲ್ಲೆ ಬಂದ್ ಮಾಡಿ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ವಾಲ್ಮೀಕಿ ನಾಯಕ ಸಮಾಜದ ಮುಖಂಡ ಮರೆಪ್ಪ ನಾಯಕ ಮೊಗದಂಪುರ ಮಾತನಾಡಿ, ದೇಶಕ್ಕೆ ಸ್ವಾತಂತ್ರ‍್ಯ ದೊರೆತು 8 ದಶಕಗಳು ಮುಗಿಯುತ್ತ ಬಂದರೂ, ರೈತರ ಬದುಕು ಮತ್ತು ಸಂಕಷ್ಟ ತಪ್ಪುತ್ತಿಲ್ಲ. ನಮ್ಮನ್ನು ಆಳುವಂತಹ ಸರ್ಕಾರಗಳು ದೇಶಕ್ಕೆ ಅನ್ನ ನೀಡುವ ರೈತರ ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವಂತಹ ಯೋಜನೆಗಳು ಕಟ್ಟು-ನಿಟ್ಟಾಗಿ ಕಾನೂನು ಮುಖಾಂತರ ಜಾರಿಗೆ ತರದೇ ಅನ್ಯಾಯ ಮಾಡಿವೆ. ರೈತರು ಬೆಳೆದ ಬೆಳಗಳಿಗೆ ಕನಿಷ್ಠ ಬೆಂಬಲ ಬೆಲೆಗಳು ನಿಗದಿ ಮಾಡದೆ ಸರ್ಕಾರಗಳು ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವುದು ಖಂಡನೀಯವಾಗಿದೆ. ಸೆ.17ರೊಳಗೆ ಜಿಲ್ಲೆ ಬರ ಘೋಷಣೆ ಮಾಡದಿದ್ದರೆ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲರಿಗೆ ಕಲ್ಯಾಣ ಕರ್ನಾಟಕ ಉತ್ಸವ ಧ್ವಜಾರೋಹಣ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಸಿದರ

ಜನಸೇನಾ ರಾಜ್ಯಾಧ್ಯಕ್ಷ ಮೈಲಾರಪ್ಪ ಜಾಗೀರದಾರ ಮಾತನಾಡಿ, ಜೂನ್ ಮೊದಲನೇ ವಾರದಲ್ಲಿ ಶೇ. 90% ರಷ್ಟು ಬಿತ್ತನೆ ಮಾಡಿದಂತಹ ರೈತರು ಜೂನ್ ಅಂತ್ಯ ಜುಲೈ ಮೊದಲನೇ ವಾರದವರೆಗೆ ಮಳೆ ಬಾರದೇ ತೇವಾಂಶದ ಕೊರತೆಯಿಂದ ಮಳೆ ಕೊರತೆಯಿಂದ ಉಳಿದ ಶೇ.50ರಷ್ಟು ಮೊಳಕೆ ಬಾರದೇ ಹಾನಿಯಾಗಿರುತ್ತದೆ. ಸಾಲ ಮಾಡಿದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ವಾಸ್ತವ ಅರಿತು ನೆರವಿಗೆ ಬಂದು ರೈತರ ರಾಷ್ಟ್ರೀಕೃತ ಮತ್ತು ಸ್ಥಳಿಯ ಬ್ಯಾಂಕ್ಗಳ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಕೋಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಮಾತನಾಡಿದರು.

ದೇವರಾಜ ನಾಯಕ, ಕಾಂತು ಪಾಟೀಲ್, ಬಸವರಾಜ ಪಡುಕೋಟೆ, ಗೌರವಾದ್ಯಕ್ಷ ದೇವಿಂದ್ರಪ್ಪ ಎಚ್. ಯರಗೋಳ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ್, ಹಣಮಂತ ಇಟಗಿ, ವಿಜಯಕುಮಾರ ಶಿರಗೋಳ, ಭೀಮಾಶಂಕರ ಆಲ್ದಾಳ, ಅಶೋಕ ಐಕೂರ, ವಿಶ್ವಾರಾಧ್ಯ ದಿಮ್ಮೆ, ಮಹಾವೀರ ಲಿಂಗೇರಿ, ಸಿದ್ದರಾಜರಡ್ಡಿ ತಂಗಡಗಿ, ಎಸ್.ನಿಜಲಿಂಗಪ್ಪ ಪೂಜಾರಿ, ಭೀಮು ಪೂಜಾರಿ, ಕಾಶಿನಾಥ ನಾಟೇಕರ್, ಕೃಷ್ಣಮೂರ್ತಿ ಕುಲಕರ್ಣಿ, ಕಾಶಪ್ಪ ಹೆಗ್ಗಣಗೇರಾ, ಎಂ.ಡಿ ತಾಜ್, ಶರಣಪ್ಪ ಜಾಕನಳ್ಳಿ, ಅಜಯಕುಮಾರ ಮಾಸನ್, ಬಂಗಾರು ಜೆಬಿ ರಾಠೋಡ, ಪೋಲಪ್ಪ ನಾರಾಯಣೋರ, ವಿಜಯ ಭಾರತ, ಬಸ್ಸುಗೌಡ ಚಟ್ನಳ್ಳಿ, ಮಹಾದೇವಪ್ಪ ಕಣೇಕಲ್, ರಾಜಶೇಖರ ಎದುರುಮನಿ, ಭೀಮರಾಯ ಯಲ್ಹೇರಿ, ಮಲ್ಲಿಕಾರ್ಜುನ ಸಾಂಗ್ಲಿಯಾನ, ಬೀರೇಶ ಚಿರತೆನೋರ, ಚಂದ್ರಕಲಾ ಗುತ್ತೇದಾರ, ಮಾಯಾ ನಾಯಕ, ಅನಿಲ್ ಕುಮಾರ ಕರಾಟೆ, ಶಿವರಾಜ ದಾಸನಕೇರಿ, ನಿಂಗಪ್ಪ ಬೀರನಾಳ, ಸಿದ್ದಲಿಂಗಪ್ಪ ನಾಯಕ, ಸಿದ್ದಪ್ಪ ಪೂಜಾರಿ, ದೀಪಕ್ ಒಡೆಯರ್, ಮಂಜುನಾಥ ಬಡಿಗೇರ, ಚಂದ್ರಶೇಖರ ಕಡೇಸೂರ, ಸಾಬು ಹೋರುಂಚಾ, ವೀರೇಶ ಕಡೇಚೂರ, ನಾಗೇಂದ್ರ ರಾಯಚೂರ, ಮಾರ್ಥಾಂಡಪ್ಪ ಮುಷ್ಟೂರು ಇತರರಿದ್ದರು.ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಾಂಡ್ವೆ ರಾಹುಲ್ ತುಕಾರಾಮ್ ಅವರಿಗೆ ಮನವಿ ಸಲ್ಲಿಸಲಾಯಿತು.ನ್ನ ಮಾಡುವಂತೆ ಆಗ್ರಹಿಸಿ ನಡೆಸಿದ ಬಂದ್‌ ಯಶಸ್ವಿಯಾಯಿತು.