ಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಂದಿನ ಐದು ವರ್ಷಗಳ ಅವಧಿಯ ಸಾಮಾನ್ಯ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 48 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಜಿಪಂ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿರುವುದು ಮುಂದಿನ ಪೀಳಿಗೆ ನಾಯಕತ್ವ ಹತ್ತಿಕ್ಕುವ ಕುತಂತ್ರವಾಗಿದೆ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.
ಶಾಮ ರಾವ್ ಚಿಂಚೋಳಿ
ಕನ್ನಡಪ್ರಭ ವಾರ್ತೆ ಚಿಂಚೋಳಿಕಲಬುರಗಿ ಜಿಲ್ಲಾ ಪಂಚಾಯಿತಿಯ ಮುಂದಿನ ಐದು ವರ್ಷಗಳ ಅವಧಿಯ ಸಾಮಾನ್ಯ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 48 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬಹುತೇಕ ಎಲ್ಲಾ ಜಿಪಂ ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿರುವುದು ಮುಂದಿನ ಪೀಳಿಗೆ ನಾಯಕತ್ವ ಹತ್ತಿಕ್ಕುವ ಕುತಂತ್ರವಾಗಿದೆ ಎಂದು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ನ.23ರಂದು ಈ ಕುರಿತು ವಿಶೇಷ ರಾಜ್ಯಪತ್ರ ಹೊರಡಿಸಿದೆ. ಅ.9ರಂದು ಪ್ರಕಟಿಸಲಾಗಿದ್ದ ಕರಡು ಅಧಿಸೂಚನೆಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಆಕ್ಷೇಪಣೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿದ ನಂತರ ಈ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ.ಕಳೆದ 8-9 ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯದಿರುವುದರಿಂದ ಈ ಬಾರಿಯಾದರೂ ಚುನಾವಣೆ ಎದುರಿಸಿ ಗೆಲ್ಲುವ ತವಕದಲ್ಲಿ ಹಲವು ಆಕಾಂಕ್ಷಿಗಳಿದ್ದರು. ಜಿಪಂ ಕ್ಷೇತ್ರದ ಬಹುತೇಕ ಸ್ಥಾನಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಿರುವುದು ಚಿಂಚೋಳಿ ಮತಕ್ಷೇತ್ರದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವನ್ನುಂಟು ಮಾಡಿದ್ದು ತಮ್ಮದೇ ಪಕ್ಷದ ಹೈಕಮಾಂಡ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಪತ್ನಿಯರನ್ನೇ ಕಣಕ್ಕಿಳಿಸಲು ನಾಯಕರ ಸಿದ್ಧತೆ: ಮತ್ತೊಂದೆಡೆ, ಬಹುತೇಕ ಮತಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿರುವುದರಿಂದ ಕ್ಷೇತ್ರದ ಕೆಲವು ಪ್ರಮುಖ ರಾಜಕಾರಣಿಗಳು ಮತ್ತು ಪ್ರಭಾವಿ ನಾಯಕರು ತಮ್ಮ ಪತ್ನಿಯರನ್ನು ಚುನಾವಣಾ ಕಣಕ್ಕೆ ಇಳಿಸಲು ತೆರೆಮರೆಯಲ್ಲಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ.ಜಿಲ್ಲಾ ಪಂಚಾಯಿತಿ ಮೀಸಲಾತಿ ಅತ್ಯಂತ ಸಾಕಷ್ಟು ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ. ಕೆಳಮಟ್ಟದ ಕಾರ್ಯಕರ್ತರು ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಇಂತಹ ಚುನಾವಣೆ ಅವಶ್ಯಕತೆವಾಗಿವೆ. ಆದರೆ ಪುರುಷರಿಗೆ ಯಾವುದೇ ಸ್ಥಾನ ಮೀಸಲಾಗಿಟ್ಟಿಲ್ಲ. ಚಿಂಚೋಳಿ ಮತಕ್ಷೇತ್ರದಲ್ಲಿ ಗಂಡಸರೇ ಇಲ್ಲ ಎಂದು ಅಬ್ದುಲ್ ರವೂಫ್ ಮಿರಿಯಾಣ ಅಸಮಾಧಾನ ವ್ಯಕ್ತಪಡಿಸಿದರು.
ಚಿಂಚೋಳಿ ಮೀಸಲಾತಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ಜಿಪಂ ಮೀಸಲು ಬೇಕಾಬಿಟ್ಟಿ ಮಾಡಿದೆ ಚಿತ್ತಾಪುರ, ಸೇಡಂ, ಅಫಜಲಪುರ, ಆಳಂದ, ಜೇವರ್ಗಿ ತಾಲೂಕಿನಲ್ಲಿ ಸರ್ವರಿಗೂ ಸಮಪಾಲು ಸಮಪಾಲು ನೀಡಿದೆ. ಆದರೆ ಚಿಂಚೋಳಿಗೆ ಯಾಕೆ ಕುತಂತ್ರ ಮಾಡಿದೆ? ಜಿಲ್ಲಾ ಪಂಚಾಯಿತಿ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ ಎಂದು ಕೋಲಿ ಸಮಾಜದ ಜಿಲ್ಲಾಧ್ಯಕ್ಷ, ಬಿಜೆಪಿ ಮುಖಂಡ ರವಿರಾಜ್ ಕೊರವಿ ಹೇಳಿದರು.ಜಿಲ್ಲಾ ಪಂಚಾಯಿತಿ ಮೀಸಲಾತಿ ಚಿಂಚೋಳಿ ಮತಕ್ಷೇತ್ರದಲ್ಲಿ ಗಂಡಸರಿಗೆ ಅವಕಾಶ ನೀಡಿಲ್ಲ. ಒಳ ಮೀಸಲಾತಿ ಪ್ರಕಾರ ಸ್ಥಾನಗಳ ಹಂಚಿಕೆ ಮಾಡಬೇಕಾಗಿತ್ತು. ಇದು ಮೀಸಲಾತಿಯೇ ಅಲ್ಲ ಎಂದು ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ ಆಕ್ಷೇಪಿಸಿದರು.
ಚಿಂಚೋಳಿ ಮೀಸಲು ಮತಕ್ಷೇತ್ರಕ್ಕೆ ಜಿಪಂ ಮೀಸಲಾತಿ ಪ್ರಕಟ ಬಹಳಷ್ಟು ಅನ್ಯಾಯ ತಂದಿದೆ. ಕೇವಲ ಮಹಿಳೆಯರಿಗೆ ಮಾತ್ರ ಎಲ್ಲ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸಲಾಗಿದೆ. ಮುಂದಿನ ನಾಯಕತ್ವ ಹೇಗೆ ಬೆಳೆಯಬೇಕು? ಗಂಡಸರು ರಾಜಕೀಯ ಮಾಡಬಾರದಾ? ಇದೊಂದು ಕುತಂತ್ರ ಅವೈಜ್ಞಾನಿಕ ಮೀಸಲಾತಿಯಾಗಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಂ.ಬಾರಿ ಅಸಮಾಧಾನ ವ್ಯಕ್ತಪಡಿಸಿದರು.ಕ್ಷೇತ್ರವಾರು ಅಂತಿಮ ಮೀಸಲಾತಿ ವಿವರಕೋಡ್ಲಿಹಿಂದುಳಿದ ವರ್ಗ "ಬ " (ಮಹಿಳೆ)
ಚಿಮ್ಮನಚೋಡಸಾಮಾನ್ಯ (ಮಹಿಳೆ)ಐನೊಳ್ಳಿಅನುಸೂಚಿತ ಪಂಗಡ (ಮಹಿಳೆ)
ಕುಂಚಾವರಂಅನುಸೂಚಿತ ಜಾತಿಸುಲೇಪೇಟಸಾಮಾನ್ಯ (ಮಹಿಳೆ)
ನಿಡಗುಂದಾಅನುಸೂಚಿತ ಜಾತಿ (ಮಹಿಳೆ)