ಸಾರಾಂಶ
Injustice to retired employees under 7th Pay Commission
-ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿವೃತ್ತ ನೌಕರರ ಸಂಘ ಸಜ್ಜು: ರಾಜ್ಯ ಸಂಚಾಲಕ ಗೋವಿಂದಯ್ಯ
-------ಕನ್ನಡಪ್ರಭ ವಾರ್ತೆ ಚಳ್ಳಕೆರೆ
ರಾಜ್ಯ ಸರ್ಕಾರ ಆಗಸ್ಟ್ 1 ರಿಂದ ೭ನೇ ವೇತನ ಆಯೋಗವನ್ನು ಅಧಿಕೃತವಾಗಿ ಜಾರಿಗೊಳಿಸಿರುವುದಾಗಿ ಪ್ರಕಟಿಸಿದೆ. ನಿವೃತ್ತ ನೌಕರರಿಗೂ ಇದು ಅನ್ವಯವಾದರೂ ಕಳೆದ ೧ ಜುಲೈ ೨೦೨೨ರಿಂದ ೩೧ ಜುಲೈ೨೦೨೪ರ ಅವಧಿಯಲ್ಲಿ ನಿವೃತ್ತರಾದವರಿಗೂ ಈ ಸೌಲಭ್ಯವನ್ನು ಸರ್ಕಾರ ನೀಡಬೇಕೆಂದು ನಿವೃತ್ತ ನೌಕರರ ಸಂಘದ ರಾಜ್ಯ ಸಂಚಾಲಕ ಎಚ್.ಗೋವಿಂದಯ್ಯ ಒತ್ತಾಯಿಸಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಅವಧಿಯಲ್ಲಿ ನಿವೃತ್ತರಾದ ನೌಕರರ ಸರ್ಕಾರದಿಂದ ಆರ್ಥಿಕ ನೆರವು ಕೊಡಿಸುವಲ್ಲಿ ರಾಜ್ಯಾದ್ಯಂತ ಪ್ರವಾಸಕೈಗೊಂಡು ನಿವೃತ್ತ ನೌಕರರ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಮನವರಿಕೆ ಮಾಡಿಕೊಡಲಾಗುವುದು. ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸದೇ ತಿರಸ್ಕರಿಸಿದಲ್ಲಿ ಸರ್ಕಾರದ ವಿರುದ್ಧ ಅ.೧ರಂದು ಆಯೋಜಿಸಿರುವ ಹಿರಿಯ ನಾಗರಿಕರ ದಿನಾಚರಣೆ ಸಂದರ್ಭದಲ್ಲಿ ಕಪ್ಪುಪಟ್ಟಿ ಧರಿಸಿ ನಿವೃತ್ತ ನೌಕರರು ಸರ್ಕಾರ ವಿರುದ್ಧ ಜಿಲ್ಲಾ ಮಟ್ಟದಲ್ಲಿ ಧರಣಿ ನಡೆಸಲಾಗುವುದು ಎಂದು ತಿಳಿಸಿದ ಅವರು, ಕೂಡಲೇ ಮುಖ್ಯಮಂತ್ರಿಗಳು ನಿವೃತ್ತ ನೌಕರರ ಸಮಸ್ಯೆ ಬಗೆಹರಿಸಬೇಕೆಂದು ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆಯನ್ನು ತಾ ಸಂ. ಎಂ.ಜಿ.ಪ್ರಕಾಶ್ ವಹಿಸಿದ್ದರು. ಸಭೆಯಲ್ಲಿ ನಿವೃತ್ತ ಅಧಿಕಾರಿಗಳಾದ ಡಿ.ದಯಾನಂದ, ಮಂಜುನಾಥಚಾರ್, ಪಿ.ವಿ.ಕೃಷ್ಣಮೂರ್ತಿ, ಪಿ.ಮಾರಣ್ಣ ಮುಂತಾದವರು ಭಾಗವಹಿಸಿದ್ದರು.------
ಪೋಟೋ: ೨೪ಸಿಎಲ್ಕೆ೩ಚಳ್ಳಕೆರೆ ನಗರದ ತಾಲೂಕು ವೃತ್ತ ನೌಕರರ ಸಮಾಲೋಚನಾ ಸಭೆಯಲ್ಲಿ ರಾಜ್ಯ ಸಂಚಾಲಕ ಎಚ್.ಗೋವಿಂದಯ್ಯ ಮಾತನಾಡಿದರು.