ಒಳ ಮೀಸಲು: ಕೇಂದ್ರಕ್ಕೆ ಶಿಫಾರಸಿಗೆ ರಾಠೋಡ ಖಂಡನೆ

| Published : Jan 23 2024, 01:47 AM IST

ಸಾರಾಂಶ

ಪರಿಶಿಷ್ಟ ಜಾತಿಗಳ ಒಳಮೀಸಲು ವಿಚಾರವಾಗಿ ಸಂವಿಧಾನದ 341 ವಿಧೇಯಕಕ್ಕೆ ತಿದ್ದುಪಡಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ ಎಂದು ಮೀಸಲಾತಿ ಸಂರಕ್ಷಕ ಒಕ್ಕೂಟದ ಮುಖಂಡ ಲಾಲಪ್ಪ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ಲಿಂಗಸುಗೂರು: ಪರಿಶಿಷ್ಟ ಜಾತಿಗಳ ಒಳಮೀಸಲು ವಿಚಾರವಾಗಿ ಸಂವಿಧಾನದ 341 ವಿಧೇಯಕಕ್ಕೆ ತಿದ್ದುಪಡಿಗಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವುದು ಖಂಡನೀಯ ಎಂದು ಮೀಸಲಾತಿ ಸಂರಕ್ಷಕ ಒಕ್ಕೂಟದ ಮುಖಂಡ ಲಾಲಪ್ಪ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಸದಾಶಿವ ಆಯೋಗದ ವರದಿ ಜಾರಿ ಮಾಡುವ ಕುರಿತು 2011ರಲ್ಲಿ ಕೈಗೊಂಡ ಜಾತಿ ಗಣತಿ ಸರಿಯಾಗಿಲ್ಲ, ತಾಂಡಾಗಳಿಗೆ ಆಯೋಗ ಭೇಟಿ ನೀಡಿಲ್ಲ. ಆಯೋಗವು ಕಚೇರಿಯಲ್ಲೇ ಕುಳಿತು ಜಾತಿ ಸಮೀಕ್ಷೆ ವರದಿ ಸಿದ್ಧಪಡಿಸಿ ಜಾರಿಗೆ ಮುಂದಾಗಿದೆ. ಗುಡ್ಡಗಾಡು ಪ್ರದೇಶದ ಜನರ ಸಮೀಕ್ಷೆ ಸಮರ್ಪಕವಾಗಿಲ್ಲ. ಇದರಿಂದ ಮೀಸಲಾತಿ ಜಾರಿ ಸಮರ್ಪಕ ಆಗದೇ ಅನ್ಯಾಯವಾಗುತ್ತದೆ ಎಂದು ಗಮನ ಸೆಳೆದರು.

ವರದಿಯಿಂದ ಕೊರಚ. ಭೋವಿ, ಕೊರಮ ಸೇರಿ 101 ಜಾತಿಗಳಿಗೆ ಅನ್ಯಾಯವಾಗಲಿದೆ. ಈ ಸತ್ಯಾಂಶ ಅರಿಯದೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿದೆ. ಈಗಾಗಲೆ ವರದಿ ಜಾರಿಗೆ ಮುಂದಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು. ಕಾಂಗ್ರೆಸ್ ಪಕ್ಷವು ಸದಾಶಿವ ಆಯೋಗದ ವರದಿ ಜಾರಿಗೆ ಶಿಫಾರಸ್ಸು ಮಾಡಿರುವುದು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಭೋವಿ ಸಮಾಜದ ಮುಖಂಡರಾದ ಭೀಮಣ್ಣ ಹಿರೇಮನಿ, ನಾಗರೆಡ್ಡಿ, ನಾರಾಯಣಪ್ಪ ರಾಠೋಡ, ದೇವರಡ್ಡಿ ಬೋವಿ, ಹುಚ್ಚೇಶ್ವರ ಭಜಂತ್ರಿ, ದೇವಪ್ಪ ರಾಠೋಡ ಸೇರಿ ಇತರರಿದ್ದರು.