ಸಾರಾಂಶ
ಗುರುಮಠಕಲ್ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ತಹಸೀಲ್ದಾರರಿಗೆ 7ನೇ ವೇತನ ಜಾರಿಗೆ ತರಲು ಒತ್ತಾಯಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಗುರುಮಠಕಲ್
ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ತಾಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಸಂಘದ ತಾಲೂಕಾಧ್ಯಕ್ಷ ಸಂತೋಷ ಕುಮಾರ ನಿರೇಟಿ ಮಾತನಾಡಿ, ರಾಜ್ಯ ಸರ್ಕಾರ ನೌಕರರಿಗಾಗಿ 7ನೇ ವೇತನ ಆಯೋಗ ಶಿಫಾರಸ್ಸು ತ್ವರಿತ ಮಾಡಬೇಕು. 7ನೇ ವೇತನ ಆಯೋಗದ ಶಿಫಾರಸ್ಸು 19 ತಿಂಗಳಾದರೂ ಇನ್ನು ಜಾರಿಗೆಯಾಗಿಲ್ಲ. ನಮ್ಮ ರಾಜ್ಯಾಧ್ಯಕ್ಷರಿಂದ ಮುಖ್ಯಮಂತ್ರಿಗಳಿಗೆ ಮನವಿ ನೀಡಲಾಗಿದೆ ಮತ್ತು ತಾಲೂಕು ಸಂಘಟನೆಯಿಂದ ಶಾಸಕರಿಗೆ ಮನವಿ ನೀಡಲಾಗಿದೆ. ಈಗ ತಹಸೀಲ್ದಾರರ ಮುಖಾಂತರ ಸಿಎಂಗೆ ಮನವಿ ಮಾಡಲಾಗುತ್ತಿದೆ ಎಂದರು.
ಎನ್‌ಪಿಎಸ್ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದು. ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಅವರು ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿದರು.ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕಿಷ್ಟಪ್ಪ ಪುರುಸೋತ್ತಮ, ಬುಡ್ಡಪ್ಪ ಜರ್ನಾಧನ, ತಾಪಂ ಇಒ ಸಂತೋಷ, ಉಪ ತಹಸೀಲ್ದಾರ್ ನರಸಿಂಹ ಸ್ವಾಮಿ, ಗಾಯತ್ರಿ ನಾಯಕಿನ್, ಪಿಡಿಒ ಭೀಮರಾಯ, ಸುದರ್ಶನರೆಡ್ಡಿ, ವೆಂಕಟರೆಡ್ಡಿ, ಬಾಲರಾಜ್, ಅಂಜನೇಯ, ಸಂತೋಷಿಬಾಯಿ, ವೀರಮ್ಮ, ಭಾರತಿ ಸಜ್ಜನ್, ಶಶಿಕಾಂತ ಹಜಾರೆ, ವಿದ್ಯಾಸಾಗರ ಕುಲಕರ್ಣಿ ಸೇರಿ ಇತರರಿದ್ದರು.