ಒಳಮೀಸಲು ವರ್ಗಿಕರಣ ವರದಿ ಜಾರಿಗೆ ಒತ್ತಾಯ

| Published : Oct 06 2024, 01:28 AM IST

ಸಾರಾಂಶ

ಸಿಎಂ ಸಿದ್ದರಾಮಯ್ಯ ಈ ಮುನ್ನ ದಲಿತರ ಪರ ಎಂದು ಯಾಮಾರಿಸಿ ಮತಗಳನ್ನು ಪಡೆದು ಮುಖ್ಯ ಮಂತ್ರಿಯಾದರು ಆದರೆ ಒಳ ಮೀಸಲಾತಿ ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಸುಪ್ರೀಂ ಕೋರ್ಟ್‌ ಪೀಠವು ಒಳ ಮೀಸಲಾತಿಯ ಸಾಧಕ ಬಾಧಕ ಪರಮಾರ್ಷಿಸಿ ಒಳಮೀಸಲಾತಿ ನೀಡಬಹುದೆಂದು ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ ಕೋಲಾರನಿವೃತ್ತ ನಾಯಾಧೀಶ ಎ.ಜೆ.ಸದಾಶಿವ ಆಯೋಗದ ವರದಿ, ಒಳಮೀಸಲಾತಿ ವರ್ಗಿಕರಣ ಅನುಷ್ಠಾನಕ್ಕೆ ತರದಿದ್ದರೆ ರಾಜ್ಯದ ಪ್ರತಿಗ್ರಾಮದಿಂದಲೂ ಸಂಘಟನೆ ಮಾಡಿ ನವೆಂಬರ್‌ ೧೧ ರಂದು ವಿಧಾನಸೌಧ ಮತ್ತು ಸಿಎಂ ಕಚೇರಿಗೆ ಮುತ್ತಿಗೆ ಹಾಕುವುದಾಗಿ ರಾಜ್ಯ ಸರ್ಕಾರಕ್ಕೆ ಮಾದಿಗ ದಂಡೋರ ಹಾಗೂ ಮೀಸಲಾತಿ ಜಾರಿ ಹೋರಾಟ ಸಮಿತಿಯ ರಾಜ್ಯ ಸಂಘಟನ ಕಾರ್ಯದರ್ಶಿ ಮುಳಬಾಗಿಲಿನ ಆರ್.ನಾಗರಾಜ್ ಎಚ್ಚರಿಸಿದರು.ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾದಿಗ ದಂಡೋರ ಹಾಗೂ ಮೀಸಲಾತಿ ಹೋರಾಟ ಸಮಿತಿಯು ಕಳೆದ ೩೦ ವರ್ಷದಿಂದ ಒಳಮೀಸಲಾತಿ ಜಾರಿಗಾಗಿ ಸುದೀರ್ಘ ಹೋರಾಟ ಮಾಡಿದೆ, ಕಳೆದ ೨೦೦೨ರಲ್ಲಿ ಸರ್ಕಾರವು ನಿವೃತ ನ್ಯಾಯಾಧೀಶರಾದ ಎ.ಜೆ.ಸದಾಶಿವ ಆಯೋಗ ಸಮಿತಿ ರಚಿಸಿ ವರದಿ ನೀಡಲು ಸೂಚಿಸಿತ್ತು ಎಂದರು. ಕೋರ್ಟ್‌ ತೀರ್ಪು ಜಾರಿಗೊಳಿಸಿ

ಸಿಎಂ ಸಿದ್ದರಾಮಯ್ಯ ಈ ಮುನ್ನ ದಲಿತರ ಪರ ಎಂದು ಯಾಮಾರಿಸಿ ಮತಗಳನ್ನು ಪಡೆದು ಮುಖ್ಯ ಮಂತ್ರಿಯಾದರು ಆದರೆ ಒಳ ಮೀಸಲಾತಿ ಅನುಷ್ಠಾನಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಸುಪ್ರೀಂ ಕೋರ್ಟ್‌ ಪೀಠವು ಒಳ ಮೀಸಲಾತಿಯ ಸಾಧಕ ಬಾಧಕ ಪರಮಾರ್ಷಿಸಿ ಒಳಮೀಸಲಾತಿ ನೀಡಬಹುದೆಂದು ತೀರ್ಪು ನೀಡಿ ಆದೇಶ ಜಾರಿ ಮಾಡಿದರು ಎಂದು ಹೇಳಿದರು.ಈ ಮಹತ್ವ ತೀರ್ಪನ್ನು ನೆರೆಯ ಆಂಧ್ರ ಪ್ರದೇಶ, ತಮಿಳುನಾಡು ಸರ್ಕಾರಗಳು ಆದೇಶ ಸಮ್ಮತಿಸಿ ಒಳಮೀಸಲಾತಿ ಜಾರಿಗೆ ಬದ್ದರಾಗಿದ್ದೇವು ಘೋಷಿಸಿದರು ಸಹ ರಾಜ್ಯದಲ್ಲಿನ ಸಿದ್ದರಾಮಯ್ಯರ ಸರ್ಕಾರ ಮಾತ್ರ ಅನುಷ್ಟಾನಗೊಳಿಸುವ ಬಗ್ಗೆ ಯಾವುದೇ ರೀತಿ ಸ್ಪಂದಿಸದೆ ಇರುವುದು ವಿಷಾಧನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.ಜಿಲ್ಲಾಧ್ಯಕ್ಷ ಮುನಿರಾಜು, ಗೌರವಾಧ್ಯಕ್ಷ ಹಾರೋಹಳ್ಳಿ ರವಿ,ಉಪಾಧ್ಯಕ್ಷ ಮುನಿಯಪ್ಪ, ವಕೀಲರ ಘಟಕದ ಅಧ್ಯಕ್ಷ ವಿ.ಜಯಪ್ಪ,ಪದಾಧಿಕಾರಿಗಳಾದ ಆಂಜನಪ್ಪ, ಲೋಕೇಶ್, ವೆಂಕಟೇಶ್, ಪಿಳ್ಳಪ್ಪ, ದೇವರಾಜ್, ಅಶ್ವಥ್ ಇದ್ದರು.