ಸಾರಾಂಶ
ಕನಕಗಿರಿ ತಾಲೂಕಿನ ಕರಡೋಣಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಎಸ್ಎಫ್ಐ ಸಂಘಟನೆ ಈಶಾನ್ಯ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ ಗಂಗಾವತಿ
ಕನಕಗಿರಿ ತಾಲೂಕಿನ ಕರಡೋಣಿ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಎಸ್ಎಫ್ಐ ಸಂಘಟನೆ ಈಶಾನ್ಯ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಒತ್ತಾಯಿಸಿದೆ.ಈ ಕುರಿತು ಮನವಿ ಪತ್ರ ಅರ್ಪಿಸಿರುವ ಸಂಘಟನೆ ರಾಜ್ಯಾದ್ಯಕ್ಷ ಅಮರೇಶ ಕಡಗದ ಮಾತನಾಡಿ, ಕನಕಗಿರಿ, ಕಾಟಾಪುರ, ಗುಡುದೂರು, ಹಿರೇಖೇಡ, ಚಿಕ್ಕಖೇಡ, ನೀರಲೂಟಿ ಗ್ರಾಮದ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ದಿನನಿತ್ಯ ಕನಕಗಿರಿ, ಗಂಗಾವತಿ, ಕೊಪ್ಪಳ ಶಾಲಾ-ಕಾಲೇಜುಗಳಿಗೆ ಮುಂದಿನ ಉನ್ನತ ಶಿಕ್ಷಣಕ್ಕಾಗಿ ವಿದ್ಯಾಭ್ಯಾಸ ಮಾಡಲು ಹೋಗುತ್ತಾರೆ. ವಿವಿಧ ಗ್ರಾಮಗಳಿಂದ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬಸ್‌ಗಳನ್ನು ಅವಲಂಭಿಸಿದ್ದಾರೆ.
ಬಸ್ ತಡವಾಗಿ ಬಂದರೆ ಅಥವಾ ಒಂದು ದಿನ ಬಸ್ ಬರದಿದ್ದರೆ ಅಂದು ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಲು ಆಗುವುದಿಲ್ಲ. ಅಂದಿನ ಪಾಠಗಳನ್ನು ಅಧ್ಯಯನ ಮಾಡಲು ತೊಂದರೆ ಆಗುತ್ತದೆ. ಕರಡೋಣಿ ಮಾರ್ಗವಾಗಿ ಕನಕಗಿರಿಗೆ ಬೆಳಗ್ಗೆ 7:20ಕ್ಕೆ ಬರಬೇಕಾದ ಬಸ್ ಸಮಯಕ್ಕೆ ಸರಿಯಾಗಿ ಬರವುದಿಲ್ಲ. ಪ್ರತಿದಿನ. 8 ಗಂಟೆ, ಅಥವಾ 8:30ಕ್ಕೆ ತಡವಾಗಿ ಬರುತ್ತದೆ. ಇದರಿಂದಾಗಿ ವಿದ್ಯಾಭ್ಯಾಸಕ್ಕೆ ಶಾಲಾ-ಕಾಲೇಜಿಗೆ ಹೋಗಲು ತುಂಬಾ ತೊಂದರೆ ಆಗುತ್ತದೆ. ಒಂದೇ ಬಸ್ ಬರವುದರಿಂದ ನೂರಾರು ವಿದ್ಯಾರ್ಥಿಗಳು ಅದೇ ಬಸ್‌ಗೆ ಹತ್ತುವುದರಿಂದ ಕೆಲವು ವಿದ್ಯಾರ್ಥಿಗಳಿಗೆ ನಿಲ್ಲಲು ಸ್ಥಳ ಇಲ್ಲದೆ ಗ್ರಾಮದಲ್ಲಿ ಉಳಿದು ಬಿಡುತ್ತಾರೆ. ಕೂಡಲೇ ಸರಿಯಾದ ಸಮಯಕ್ಕೆ ಬಸ್ ಬಿಡುವಂತೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಶಿವಕುಮಾರ್, ಹನುಮೇಶ, ವಿದ್ಯಾರ್ಥಿಗಳಾದ ಬಸವರಾಜ,ಅನ್ಸಾರಿ, ಶಶಿಕಲಾ, ಪದ್ದಮ್ಮ, ವಿಜಯಲಕ್ಷ್ಮೀ, ದುರಗಮ್ಮ, ಅಂಜನಮ್ಮ ಇದ್ದರು.