ಕನಕಪುರ: ನರೇಗಾ ಕಾಮಗಾರಿ ಅನುಷ್ಠಾನದಲ್ಲಿ ಅಕ್ರಮ ನಡೆದಿದೆಯೆಂಬ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕೋಡಿಹಳ್ಳಿ ಗ್ರಾಪಂಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಕನಕಪುರ: ನರೇಗಾ ಕಾಮಗಾರಿ ಅನುಷ್ಠಾನದಲ್ಲಿ ಅಕ್ರಮ ನಡೆದಿದೆಯೆಂಬ ದೂರಿನ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ಕೋಡಿಹಳ್ಳಿ ಗ್ರಾಪಂಗೆ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ತಾಲೂಕಿನ ಕೋಡಿಹಳ್ಳಿ ಗ್ರಾಪಂ 2019ರಿಂದ 2021ರವರೆಗೆ ಅನುಷ್ಠಾನ ಮಾಡಿರುವ ಕೆರೆ ಅಭಿವೃದ್ಧಿ, ಕೆರೆ ಪಿಚ್ಚಿಂಗ್, ನಾಲಾ ಅಭಿವೃದ್ಧಿ, ಜಲ್ಲಿ ಮೆಟ್ಲಿಂಗ್ ರಸ್ತೆ ಸೇರಿದಂತೆ ಹಲವು ನರೇಗಾ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ಅನಾಮದೇಯ ದೂರುಗಳು ಬಂದಿದ್ದವು. ಆ ಹಿನ್ನೆಲೆಯಲ್ಲಿ ರಾಮನಗರ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದಲ್ಲಿ ರಘು ಮತ್ತು ಶಿವಕುಮಾರ್ ಸಿಬ್ಬಂದಿ,ಕನಕಪುರ ತಾಪಂ ಇಒ ಅವಿನಾಶ್ ಜೊತೆ ಭೇಟಿ ನೀಡಿದರು.ತಾಪಂ ಸಹಾಯಕ ನಿರ್ದೇಶಕ ಮೋಹನ್‌ಬಾಬು, ಕೋಡಿಹಳ್ಳಿ ಗ್ರಾಪಂ ಪಿಡಿಒ ಶ್ರೀಧರ್ ಹಾಗೂ ಸಂಬಂಧಪಟ್ಟ ನರೇಗಾ ಇಂಜಿನಿಯರ್‌ಗಳ ಸಮ್ಮುಖದಲ್ಲಿ 2019ರಿಂದ 2021ರವರೆಗಿನ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು. ಕೋಡಿಹಳ್ಳಿ ಗ್ರಾಪಂ ವ್ಯಾಪ್ತಿಯ ಅರಳಿಮರದ ದೊಡ್ಡಿ, ಕೋಡಿಪುರ ಸೇರಿದಂತೆ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೆರೆ ಅಭಿವೃದ್ಧಿ, ಕೆರೆ ಪಿಚ್ಚಿಂಗ್, ಹೂಳೆತ್ತುವುದು, ನಾಲಾ ಅಭಿವೃದ್ಧಿ, ಜಲ್ಲಿ ಮೆಟ್ಲಿಂಗ್ ರಸ್ತೆ ಸೇರಿದಂತೆ ಕಾಮಗಾರಿಗಳಲ್ಲಿ ಕೆಲವು ಲೋಪಗಳು ಕಂಡು ಬಂದಿರುವುದು ಪರಿಶೀಲನೆಯಲ್ಲಿ ಬೆಳಕಿಗೆ ಬಂದಿದೆ.
ಗ್ರಾಪಂನಲ್ಲಿ ಕೆಲವು ದಾಖಲೆಗಳನ್ನು ಪರಿಶೀಲಿಸಿ, ಜಿಪಿಎಸ್ ಫೋಟೋ, ಎನ್ಎಂಆರ್ ಜನರೇಟ್ ಇತ್ಯಾದಿಗಳಲ್ಲಿ ಲೋಪಗಳಿವೆ. ಪ್ರಕರಣದ ಸಂಬಂಧ ಪಂಚಾಯತಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳಿವೆ.ಕೆ ಕೆ ಪಿ ಸುದ್ದಿ 02:
ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಪಂ ವ್ಯಾಪ್ತಿಯ ನರೇಗಾ ಕಾಮಗಾರಿಗಳಲ್ಲಿ ಅಕ್ರಮ ದೂರಿನ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಪರೀಶೀಲನೆ ನಡೆಸಿದರು.