ಸಾರಾಂಶ
ತಾಲೂಕಿನ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಕಾಲುವೆ ಪೈಪ್ ಲೈನ್ ನಿರ್ಮಾಣಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಪರಿಶೀಲನೆ ನಡೆಸಿದರು.
ಕನ್ನಡಪ್ರಭ ವಾರ್ತೆ, ಹನೂರು
ತಾಲೂಕಿನ ರಾಮನಗುಡ್ಡ ಕೆರೆಗೆ ನೀರು ತುಂಬಿಸುವ ಯೋಜನೆಗೆ ಕಾಲುವೆ ಪೈಪ್ ಲೈನ್ ನಿರ್ಮಾಣಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಪರಿಶೀಲನೆ ನಡೆಸಿದರು.ಬರಗಾಲದಿಂದ ತತ್ತರಿಸಿ ಮಳೆ ಇಲ್ಲದೆ ಕಂಗಾಲಾಗಿರುವ ರೈತರ ಒತ್ತಾಯದ ಮೇರೆಗೆ ಕೆರೆಗೆ ನೀರು ತುಂಬಿಸುವ ಯೋಜನೆಗೆ ಪರಿಶೀಲನೆ ನಡೆಸಿ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾವೇರಿ ನದಿಯಿಂದ ಪೈಪ್ ಲೈನ್ ಕಾಮಗಾರಿ ಒಂದು ಕಿ.ಮೀ.ವರೆಗೆ ಅನುದಾನವಿಲ್ಲದೆ ಸ್ಥಗಿತಗೊಂಡಿರುವುದರಿಂದ ಕಾವೇರಿ ನದಿಯಿಂದ ನೀರನ್ನು ಒಂದು ಕಿ.ಮೀ. ಕಾಲುವೆ ಮಾಡಿ ಕೆರೆಗೆ ನೀರು ತುಂಬಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ರಾಮನ ಗುಡ್ಡ ಕೆರೆ ಒತ್ತುವರಿ ತೆರವಿಗೆ ಕ್ರಮ:
100 ಎಕರೆ ವಿಸ್ತಾರವಾದ ರಾಮನಗುಡ್ಡ ಕೆರೆಗೆ ಕಳೆದ 30 ವರ್ಷಗಳ ಹಿಂದೆ ನೀರು ತುಂಬಿಸಲು ನೀರಾವರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಯೋಜನೆ ರೂಪಿಸಲಾಗಿತ್ತು. ರಾಮನಗುಡ್ಡ ಕೆರೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ತುರ್ತಾಗಿ ಕೆರೆ ಸರ್ವೇ ಮಾಡಿ ರಾಮನಗುಡ್ಡ ಕೆರೆಗೆ ಜಾಗವನ್ನು ಉಳಿಸಲು ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಜೊತೆಗೆ ನೀರಾವರಿ ಕೆಲಸ ಕಾರ್ಯಗಳಿಗೆ ನಿರ್ದಿಷ್ಟ ಸಮಯದೊಳಗೆ ಯೋಜನೆಗಳಿಗೆ ಕ್ರಮ ಕೈಗೊಳ್ಳಬೇಕು ಎಂದು ದೂರವಾಣಿ ಮುಖಾಂತರ ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.ರೈತ ಮುಖಂಡರಾದ ದಿನೇಶ್ ಕುಮಾರ್ ಅಮೋಘ ರಾವ್ ಹಾಗೂ ತಾಲೂಕಿನ ಸುತ್ತಮುತ್ತಲಿನ ರೈತರು ಉಪಸ್ಥಿತರಿದ್ದರು.