ಕಲಬುರಗಿಯ ಜಿಲ್ಲಾಡಳಿತ ಕಚೇರಿಗಳಿರುವ ಮಿನಿ ವಿದಾನಸೌಧ ಅಂಗಳಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಪುತ್ಥಳಿ ಸ್ಥಾಪಿಸಬೇಕು, 5 ಎಕರೆ ಜಾಗದಲ್ಲಿ ಖರ್ಗೆ ಹೆಸರಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಬೇಕು ಹಾಗೂ ಪ್ರತೀ ವರ್ಷವೂ ಸೆ.17ರಂದು ನಡೆಯುವ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು ಎಂದು ಕಲುರಗಿಯ ಖರ್ಗೆ ಅಭಿಮಾನಿ ಬಳಗ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ ಕಲಬುರಗಿಕಲಬುರಗಿಯ ಜಿಲ್ಲಾಡಳಿತ ಕಚೇರಿಗಳಿರುವ ಮಿನಿ ವಿದಾನಸೌಧ ಅಂಗಳಲ್ಲಿ ಡಾ.ಮಲ್ಲಿಕಾರ್ಜುನ ಖರ್ಗೆ ಪುತ್ಥಳಿ ಸ್ಥಾಪಿಸಬೇಕು, 5 ಎಕರೆ ಜಾಗದಲ್ಲಿ ಖರ್ಗೆ ಹೆಸರಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣ ಮಾಡಬೇಕು ಹಾಗೂ ಪ್ರತೀ ವರ್ಷವೂ ಸೆ.17ರಂದು ನಡೆಯುವ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು ಎಂದು ಕಲುರಗಿಯ ಖರ್ಗೆ ಅಭಿಮಾನಿ ಬಳಗ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.ಈ ಕುರಿತು ಖರ್ಗೆಯವರ ಅಭಿಮಾನಿಗಳಾದ ಬಿ. ಆರ್. ಬುದ್ಧಾ, ಅಮೃತ ಸಜ್ಜನ್ , ಸೈಯ್ಯದ್ ರಕೀಬ್ ಒಳಗೊಂಡ ನಿಯೋಗವು ಬೆಂಗಳೂರಲ್ಲಿ ಸಿಎಂ ಶಿವಕುಮಾರ್, ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿ ಗಮನ ಸೆಳೆಯಲಾಗಿದೆ. ಕರ್ನಾಟಕ ಸರ್ಕಾರದ ವತಿಯಿಂದ ಈ ಎಲ್ಲಾ ಮಹತ್ತರವಾದ ಬೇಡಿಕೆಗಳನ್ನು ಈಡೇರಿಸಿಕೊಡಬೇಕೆಂದು ಕೋರಲಾಗಿದೆ ಎಂದು ಕಲಬುರಗಿ ಸುಮೇಧ ಪ್ರಕಾಶನದ ರೂವಾರಿ ದತ್ತಾತ್ರೇಯ ಇಕ್ಕಳಕಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಮುತ್ಸದ್ಧಿ ರಾಜಕಾರಣಿಗಳಲ್ಲಿ ಡಾ. ಮಲ್ಲಿಕಾರ್ಜುನ ಖರ್ಗೆ ಪ್ರಮುಖರು. 50 ವರ್ಷಗಳ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕಲಬುರಗಿ ಜಿಲ್ಲೆಯಿಂದ 9 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿ, 2 ಬಾರಿ ರಾಜ್ಯಸಭಾ ಸದಸ್ಯರಾಗಿ, ವಿರೋಧ ಪಕ್ಷದ ನಾಯಕರಾಗಿ, ಜನೋಪಯೋಗಿ, ಸಮಾಜಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅವರ ಕೊಡುಗೆ ಅಪಾರ ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.-----ಲೀಡ್ ಓಪನ್-----ಖರ್ಗೆ ಅಭಿಮಾನಿಗಳ ಬೇಡಿಕೆಗಳು* 5 ಎಕರೆ ವಿಸ್ತೀರ್ಣದಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾಂಸ್ಕೃತಿಕ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಸ್ಥಾಪಿಸಿ ಬುದ್ಧ, ಬಸವಣ್ಣ, ಬಾಬಾಸಾಹೇಬ್ ಅಂಬೇಡ್ಕರ್ʼ ಮುಂತಾದ ಸಮಾಜ ಪರಿವರ್ತನಾಕಾರರ ಚಿಂತನೆಗಳನ್ನು ಒಳಗೊಂಡ ವಸ್ತು ಸಂಗ್ರಹಾಲಯ ಹಾಗೂ ಅವರ ವೈಚಾರಿಕ, ವೈಜ್ಞಾನಿಕ ಸಾಹಿತ್ಯಕ, ಸಾಂಸ್ಕೃತಿಕ, ಚಿಂತನ-ಮಂಥನ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಚರಿತ್ರೆಯನ್ನು ಅಧ್ಯಯನ ನಡೆಸಲು ಸೌಲಭ್ಯಗಳನ್ನು ಒದಗಿಸುವುದು.* ಡಾ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಪ್ರಶಸ್ತಿ: ರಾಷ್ಟ್ರೀಯ, ರಾಜ್ಯ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಾಹಿತ್ಯ, ಸಂಸ್ಕೃತಿ, ಕಲೆ, ಮತ್ತು ಸಾಮಾಜಿಕ, ರಾಜಕೀಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಹಾಗೂ ಸಂಶೋಧನೆ ಮಾಡಿದ ಒಬ್ಬ ಸಾಧಕರಿಗೆ, ಡಾ. ಮಲ್ಲಿಕಾರ್ಜುನ ಖರ್ಗೆ ಹೆಸರಿನಲ್ಲಿ ಸೆ.17ರಂದು ಪ್ರತಿ ವರ್ಷ ಹೈ- ಕ ವಿಮೋಚನಾ ದಿನಾಚರಣೆ ಸಂದರ್ಭ ಕಲಬುರಗಿಯಲ್ಲಿ ನಡೆಯುವ ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಪ್ರಶಸ್ತಿ ನೀಡಬೇಕು. ಈ ಪ್ರಶಸ್ತಿಯು 10 ಲಕ್ಷ ರು. ನಗದು, 20 ಗ್ರಾಂ ಚಿನ್ನದ ಪದಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರಬೇಕು.* ಮಲ್ಲಿಕಾರ್ಜುನ ಖರ್ಗೆ ಪ್ರತಿಮೆ ಪ್ರತಿಷ್ಠಾಪನೆ: ರಾಜ್ಯ, ರಾಷ್ಟ್ರ ಹಾಗೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅಭೂತಪೂರ್ವ ಕೊಡುಗೆ ನೀಡಿರುವ ಆದರ್ಶ ರಾಜಕಾರಣಿ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಪ್ರತಿಮೆಯನ್ನು ಕಲಬುರಗಿಯ ವಿಧಾನಸೌಧದ ಎದುರಿಗೆ ಸ್ಥಾಪಿಸಬೇಕು ಎಂಬ ಬೇಡಿಕೆಗಳನ್ನು ಅಭಿಮಾನಿಗಳು ಸರ್ಕಾರದ ಮುಂದಿಟ್ಟಿದ್ದಾರೆ.