ಕಳ್ಳತನ ನಿಯಂತ್ರಣಕ್ಕೆ ಸಿಸಿ ಕ್ಯಾಮರಾ ಅಳವಡಿಸಿ

| Published : Jul 27 2025, 01:58 AM IST

ಕಳ್ಳತನ ನಿಯಂತ್ರಣಕ್ಕೆ ಸಿಸಿ ಕ್ಯಾಮರಾ ಅಳವಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ತಾಳಿಕೋಟೆ ಚಿನ್ನ, ಬೆಳ್ಳಿ ದರಗಳು ಗಗನಕ್ಕೇರಿದಂತಾಗಿ ಕಳ್ಳರು ಮನೆಗಳ, ಅಂಗಡಿಗಳ ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಚಿನ್ನ, ಬೆಳ್ಳಿ ದರಗಳು ಗಗನಕ್ಕೇರಿದಂತಾಗಿ ಕಳ್ಳರು ಮನೆಗಳ, ಅಂಗಡಿಗಳ ಕಳ್ಳತನಕ್ಕೆ ಮುಂದಾಗುತ್ತಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿದ ವೇಳೇ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಭೆ ನಡೆಸಿದ ಅವರು, ಕೆಲವು ಸಲಹೆ ಸೂಚನೆಗಳನ್ನು ನೀಡಿ ಚಿನ್ನದ ಬೆಲೆ ಏರಿಕೆಯಾಗಿದ್ದೇ ಕಳ್ಳತನಕ್ಕೆ ದಾರಿ ಮಾಡಿಕೊಟ್ಟಂತಾಗಿದೆ. ಕದ್ದ ಚಿನ್ನ ಬೆಳ್ಳಿ ಹಣವನ್ನು ಮನಬಂದಂತೆ ಖರ್ಚು ವೆಚ್ಚ ಮಾಡುತ್ತಿದ್ದಾರೆ. ಇಂತಹ ಕಳ್ಳರ ಕಳ್ಳತನದ ನಿಯಂತ್ರಣಕ್ಕಾಗಿ ಮನೆ ಮನೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು. ಇದು ಅಲ್ಲದೇ ಬಡಾವಣೆಗಳ ಮುಖ್ಯ ರಸ್ತೆ ಕಾಣುವಂತೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು. ಪಟ್ಟಣದ ಪ್ರವೇಶದ ನಾಲ್ಕು ದಿಕ್ಕುಗಳ ಪ್ರವೇಶದ್ವಾರಕ್ಕೆ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯಕ್ಕೆ ಮುಂದಾಗಬೇಕು. ಈ ಕುರಿತು ಶೀಘ್ರದಲ್ಲಿಯೇ ತಾಳಿಕೋಟೆ ಪಟ್ಟಣದ ಸಂಬಂಧಿಸಿದ ಅಂಗಡಿಗಳ ಮಾಲೀಕರ ಅಸೋಸಿಯೇಶನ್‌ ಹಾಗೂ ವ್ಯಾಪಾರಸ್ಥರಿಗೂ ಸೂಚನೆ ನೀಡಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳುವ ಕುರಿತು ಸೂಚಿಸುವಂತೆ ಸಿಪಿಐ ಮಹ್ಮದ ಪಶುಉದ್ದೀನ ಹಾಗೂ ಪಿಎಸ್‌ಐ ಜ್ಯೋತಿ ಖೋತ್‌ಗೆ ಸೂಚಿಸಿದರು.ಹಿರಿಯ ಅಧಿಕಾರಿಗಳ ಮಾತಿಗೆ ಸ್ಪಂದಿಸಿದ ಪಿಎಸ್‌ಐ ಶೀಘ್ರದಲ್ಲಿಯೇ ಸಭೆ ಕರೆದು ಸೂಚನೆ ನೀಡಲಾಗುವುದೆಂದರು. ನಂತರ ಇತ್ತೀಚಗೆ ಗಣೇಶ ನಗರದ ಬಡಾವಣೆಯ ಮನೆಗಳಿಗೆ ಕಳ್ಳರು ಆಗಮಿಸಿದ್ದ ಆ ಬಡಾವಣೆಯ ಮನೆಗಳಿಗೆ ತೆರಳಿ ಅಲ್ಲಿಯ ನಾಗರಿಕರಿಗೆ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿದರು.ಇಂದು ವರ್ತಕರ-ಸಾರ್ವಜನಿಕರ ಸಭೆ:

ತಾಳಿಕೋಟೆ ಪಟ್ಟಣದ ಗಣೇಶ ನಗರದಲ್ಲಿ ಕಳ್ಳರ ಗುಂಪು ಕಾಣಿಸಿಕೊಂಡ ಬಗ್ಗೆ ರಾಮನಗೌಡ ಹಟ್ಟಿ ಮಾರ್ಗದರ್ಶನದಲ್ಲಿ ಪಟ್ಟಣದ ಕಿರಾಣಿ, ಕಪ್ಪಡ ಅಲ್ಲದೇ ಅಡತ್ ವ್ಯಾಪಾರಿಗಳ ಮತ್ತು ಚಿನ್ನ ಬೆಳ್ಳಿ ವ್ಯಾಪಾರಸ್ಥರ ಸಭೆಯನ್ನು ಜು.೨೭ರಂದು ಸಂಜೆ 4 ಗಂಟೆಗೆ ಪಟ್ಟಣದ ವಿಠ್ಠಲ ಮಂದಿರದಲ್ಲಿ ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದೆ ಎಂದು ಪಿಎಸ್‌ಐ ಜ್ಯೋತಿ ಖೋತ್, ಅಪರಾಧ ವಿಭಾಗದ ಪಿಎಸ್‌ಐ ಆರ್.ಎಸ್.ಭಂಗಿ ತಿಳಿಸಿದ್ದಾರೆ.

ಸಾರ್ವಜನಿಕರು ತಪ್ಪದೇ ಈ ಸಭೆಯಲ್ಲಿ ಭಾಗವಹಿಸಬೇಕು. ಪೊಲೀಸ್‌ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ಕಳ್ಳರ ಹಾವಳಿ ತಡೆಗಟ್ಟುವ ಬಗ್ಗೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಲಿದ್ದಾರೆ.