ದಾವಣಗೆರೆ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಸಂವಹನ ಸಚಿವಾಲಯಕ್ಕೆ ಮಾಹಿತಿ ಕೇಳಿದ್ದಾರೆ.
- ನಗರ- ಗ್ರಾಮಗಳ ಡಿಜಿಟಲ್ ಅಂತರ ಕಡಿಮೆಗೆ ಏನು ಕ್ರಮ ಕೈಗೊಂಡಿದ್ದೀರಿ?: ಸಂಸದೆಗೆ ಕೇಂದ್ರ ಉತ್ತರ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಕೈಗೊಂಡಿರುವ ಕ್ರಮಗಳ ಬಗ್ಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಸಂವಹನ ಸಚಿವಾಲಯಕ್ಕೆ ಮಾಹಿತಿ ಕೇಳಿದ್ದಾರೆ.ನಗರ–ಗ್ರಾಮ ಡಿಜಿಟಲ್ ಅಂತರವನ್ನು ಕಡಿಮೆ ಮಾಡಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳು, ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ದೂರಸಂಪರ್ಕ ಪ್ರವೇಶ ಹೊಂದಿರುವ ಜಿಲ್ಲೆಗಳ ಗುರುತು, ಡಿಜಿಟಲ್ ಸಾಕ್ಷರತೆ ವೃದ್ಧಿ, ಲಾಸ್ಟ್–ಮೈಲ್ ಸಂಪರ್ಕಕ್ಕೆ ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವ ಮತ್ತು ಭಾರತ್‌ನೆಟ್ ಹಂತ–III ಯೋಜನೆಯ ಕಾಲಮಿತಿ ಕುರಿತು ಸಂಸದರು ಪ್ರಶ್ನಿಸಿದ್ದರು.ಇದಕ್ಕೆ ಉತ್ತರಿಸಿದ ಕೇಂದ್ರ ಸರ್ಕಾರ, ಡಿಜಿಟಲ್ ಭಾರತ ನಿಧಿ ಅಡಿಯಲ್ಲಿ 4ಜಿ ಸ್ಯಾಚುರೇಷನ್ ಯೋಜನೆಯ ಮೂಲಕ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ 4ಜಿ ಮೊಬೈಲ್ ಟವರ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಭಾರತ್‌ನೆಟ್ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿಗಳಿಗೆ ವೈ-ಫೈ ಹಾಟ್‌ಸ್ಪಾಟ್‌ಗಳು ಹಾಗೂ ಫೈಬರ್ ಟು ದ ಹೋಮ್ ** (FTTH)** ಬ್ರಾಡ್‌ಬ್ಯಾಂಡ್ ಸಂಪರ್ಕ ಒದಗಿಸಲಾಗುತ್ತಿದೆ.
ದೂರಸಂಪರ್ಕ ಪ್ರವೇಶವು ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ ಮಿಷನ್ ಉತ್ಕರ್ಷ ಅಡಿಯಲ್ಲಿ ದೇಶದ 10 ಜಿಲ್ಲೆಗಳನ್ನು ಗುರುತಿಸಲಾಗಿದೆ, ಡಿಜಿಟಲ್ ಸಾಕ್ಷರತೆ ವೃದ್ಧಿಗಾಗಿ ** MeitY ** ಅಧೀನದಲ್ಲಿ ಕಾರ್ಯನಿರ್ವಹಿಸುವ ** NIELIT ** ಸಂಸ್ಥೆಯ ಮೂಲಕ ದೇಶಾದ್ಯಂತ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಅಂತಿಮ ಹಂತದ ಸಂಪರ್ಕಕ್ಕಾಗಿ ಭಾರತ್‌ನೆಟ್ ಉದ್ಯಮಿಗಳ ** (BNU) ** ಮೂಲಕ ಲಾಸ್ಟ್–ಮೈಲ್ ಕನೆಕ್ಟಿವಿಟಿ ಒದಗಿಸಲಾಗುತ್ತಿದ್ದು, ಹೊಸ ಮನೆ ಫೈಬರ್ ಸಂಪರ್ಕಗಳಿಗೆ ಒಮ್ಮೆ ಮಾತ್ರ ಪ್ರೋತ್ಸಾಹಧನ ಹಾಗೂ ಮಾಸಿಕ ಆದಾಯ ಪಾಲು ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.
ಇದಲ್ಲದೆ, ತಿದ್ದುಪಡಿ ಭಾರತ್‌ನೆಟ್ ಕಾರ್ಯಕ್ರಮ **(ABP)** ಅನ್ನು **DBOM** ಮಾದರಿಯಲ್ಲಿ ಅನುಮೋದಿಸಲಾಗಿದೆ. ಹಂತ–I ಮತ್ತು ಹಂತ–II ಜಾಲಗಳ ಉನ್ನತೀಕರಣ, ಉಳಿದ ಗ್ರಾಮ ಪಂಚಾಯತ್‌ಗಳಲ್ಲಿ ಹೊಸ ಜಾಲ ನಿರ್ಮಾಣ ಹಾಗೂ 10 ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಒಳಗೊಂಡ ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸದರ ಪ್ರಶ್ನೆಗೆ ಉತ್ತರ ನೀಡಿದೆ.- - -
-6ಕೆಡಿವಿಜಿ31: ಡಾ.ಪ್ರಭಾ ಮಲ್ಲಿಕಾರ್ಜುನ