ಸಾರಾಂಶ
ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ
ಬೇಸಿಗೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪಂಪ್‌ಸೆಟ್‌ಗಳು ಸುರಕ್ಷಿತವಾಗಿ ನಡೆಯಲಿ ಎಂದು ಹಾಗೂ ಬೀದಿದೀಪ ಅಳವಡಿಕೆಯ ಉದ್ದೇಶದಿಂದ ಸಿಸಿಎಂಎಸ್‌ಸಿ ಯೋಜನೆಯಡಿ ₹೩೬.೫೦ಲಕ್ಷರೂ ಮೊತ್ತದಲ್ಲಿ ೭೨ ಕಂಬ ಹಾಕಲಾಗುವುದು ಎಂದು ಪುರಸಭೆ ಅಧ್ಯಕ್ಷ ಎಂ.ಮರಿರಾಮಪ್ಪ ತಿಳಿಸಿದರು.ಪಟ್ಟಣದ ೨೩ ವಾರ್ಡ್‌ಳಿಗೆ ತಲಾ ೩ ವಿದ್ಯುತ್ ಕಂಬ ಹಾಗೂ ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಆಯಾ ವಾರ್ಡ್‌ಗಳ ಸದಸ್ಯರು ಹೇಳುವ ಸ್ಥಳದಲ್ಲಿ ಕಂಬ ಹಾಕಲಾಗುವುದು. ಪಟ್ಟಣದಲ್ಲಿ ಇನ್ನೂ ಯಾವ ವಾರ್ಡ್‌ಗಳಲ್ಲಿ ಕಂಬ ಮತ್ತು ಲೈನ್ ಅವಶ್ಯವಿದೆಯೋ ಆಯಾ ವಾರ್ಡ್‌ಗಳಿಗೆ ಎಸ್‌ಸಿಪಿ ಟಿಎಸ್‌ಪಿ ಅನುದಾನದಲ್ಲಿ ಕ್ರಿಯಾಯೋಜನೆ ರೂಪಿಸಲಾಗುವುದು. ಪಟ್ಟಣದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮವಹಿಸಲಾಗುವುದು. ಪಟ್ಟಣ ಸೇರಿದಂತೆ, ಬಸವೇಶ್ವರ ರಸ್ತೆಯನ್ನು ಸುಂದರಗೊಳಿಸಲು ಅನುದಾನ ಕಾಯ್ದಿರಿಸಲಾಗುವುದು. ಪುರಸಭೆಯಿಂದ ಮನೆಗೊಂದು ಸಸಿಯನ್ನು ಕೊಡುವ ಕಾರ್ಯಕ್ರಮವನ್ನು ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ್ ಮಾತನಾಡಿ, ಪಟ್ಟಣದಲ್ಲಿ ಸಮರ್ಪಕವಾಗಿ ವಿದ್ಯುತ್ ದೀಪ ಅಳವಡಿಸಿದ್ದು, ಇನ್ನೂ ಅನೇಕ ಕಡೆಗಳಲ್ಲಿ ಅವಶ್ಯವಿರುವ ಹಿನ್ನೆಲೆಯಲ್ಲಿ ವಿದ್ಯುತ್ ಕಂಬ ಮತ್ತು ಲೈನ್ ಹಾಕಿದ ನಂತರ ವಿದ್ಯುತ್ ದೀಪ ಅಳವಡಿಸಲಾಗುವುದು ಎಂದರು.ಈ ಸಂದರ್ಭ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗುರುಬಸವರಾಜ ಸೊನ್ನದ್, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೆಂದ್ರ, ಪುರಸಭೆ ಸದಸ್ಯರಾದ ಪವಾಡಿ ಹನುಮಂತಪ್ಪ, ಜೋಗಿ ಹನುಮಂತಪ್ಪ, ದೀಪಕ್ ಕಠಾರೆ, ತ್ಯಾವಣಗಿ ಕೊಟ್ರೇಶ, ಬಾಳಪ್ಪ, ಮಾಜಿ ಸದಸ್ಯರಾದ ಸೆರೆಗಾರ ಹುಚ್ಚಪ್ಪ, ಅಲ್ಲಾಭಕ್ಷಿ, ವಿಜಯ್‌ಕುಮಾರ, ರವೀಂದ್ರಗೌಡ, ಬಾಲಕೃಷ್ಣಬಾಬು, ಎನ್.ಎಂ. ಗೌಸ್, ರೋಗಾಣಿ ಪ್ರಕಾಶ್, ಕೆ.ಬಸವರಾಜ, ಬಾಬು ಇತರರಿದ್ದರು.