ಸಾರಾಂಶ
ದೇವಾಲಯದಲ್ಲಿ ಪೂಜಾ ಕೈಂಕರ್ಯ: ಕೆ.ಪಿ.ಕುಮಾರ್
ಕನ್ನಡಪ್ರಭ ವಾರ್ತೆ, ತರೀಕೆರೆತಾಲೂಕಿನ ಸೋಂಪುರ ಇತಿಹಾಸ ಪ್ರಸಿದ್ಧ ಶ್ರೀ ಸೋಮೇಶ್ವರ ದೇವಾಲಯದ ಆವರಣದಲ್ಲಿ ಕ್ಷೇತ್ರಪಾಲಕ, ಪ್ರಧಾನ ಬಲಿಕಲ್ಲು ಮತ್ತು ದೇವಾಲಯದ ಸುತ್ತಲೂ ಬಲಿ ಕಲ್ಲುಗಳನ್ನು ಹೋಮ ಹವನ ಹಾಗೂ ಪೂಜಾ ವಿಧಾನ ಗಳೊಂದಿಗೆ ಪ್ರತಿಷ್ಟಾಪಿಸಲಾಯಿತು.ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಪಿ.ಕುಮಾರ್ ಮಾತನಾಡಿ,1200 ವರ್ಷಗಳ ಹಿಂದೆ ಚೋಳ ರಾಜರ ಕಾಲದಲ್ಲಿ ನಿರ್ಮಾಣವಾಗಿರುವ ದೇವಾಲಯ ಶಿಥಿಲಗೊಂಡಿದ್ಧ ಕಾರಣ ಮುಜರಾಯಿ ಇಲಾಖೆ, ಕೇಂದ್ರ ಸರ್ಕಾರದ ಶಿಲ್ಪ ಕಲಾ ಇಲಾಖೆಯಿಂದ ಪುನರ್ ನಿರ್ಮಾಣ ವಾಗಿತ್ತು.
ಆ ಸಂದರ್ಭದಲ್ಲಿ ಮೊದಲಿನ ಶಿಲ್ಪ ಕಲಾಕೃತಿಗಳು ಸ್ಥಾಪಿಸಿರಲಿಲ್ಲ. ಆದ್ದರಿಂದ ಈ ದಿನ ಕ್ಷೇತ್ರಪಾಲಕ, ಬಲಿಕಲ್ಲು ಗಳ ಧಾರ್ಮಿಕ ಹಿನ್ನೆಲೆಯಲ್ಲಿ ಪುನರ್ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.ಇಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುಲು ಮೂಲ ಕಾರಣರಾದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಯೋಗಿ ಅವರ ಸಮ್ಮುಖದಲ್ಲಿ ಪ್ರಧಾನ ಅರ್ಚಕ ವೆಂಕಟೇಶ್, ಸಹ ಅರ್ಚಕರು ಹಾಗೂ ಧರ್ಮದರ್ಶಿ ಮಂಡಲಿ ನಿಕಟಪೂರ್ವ ಸದಸ್ಯರಾದ ಎಲ್. ಟಿ ಹೇಮಣ್ಣ, ಹರಿ, ಬಾಬು. ಗಟ್ಟು, ಮತ್ತಿತರ ಭಕ್ತರು ಪಾಲ್ಗೊಂಡಿದ್ದರು.4ಕೆಟಿಆರ್.ಕೆ.8ಃ ತರೀಕೆರೆ ಸಮೀಪದ ಸೋಂಪುರ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಕ್ಷೇತ್ರಪಾಲಕ, ಪ್ರಧಾನ ಬಲಿಕಲ್ಲು ಪ್ರತಿಷ್ಠಾಪನೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.