ಶಿವನ ಆರಾಧನೆ ಮನುಷ್ಯನ ದೈಹಿಕ ಹಾಗೂ ಭಾವನಾತ್ಮಕ ವಲಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಮಾನಸಿಕ ಶಾಂತಿಗಾಗಿ ಧ್ಯಾನ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಯೋಗಗುರು ವಿ.ರವೀಂದ್ರ ಕರೆ ನೀಡಿದರು.

ವಿಜಯಪುರ: ಮನುಷ್ಯನಿಗೆ ಶರೀರ, ಬುದ್ಧಿ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಶಿವಾರಾಧನೆ ಹಾಗೂ ಧ್ಯಾನ ಅಗತ್ಯ ಎಂದು ಯೋಗದೇವಿಗೆ ಯೋಗಗುರು ಹಾಗೂ ಶ್ರೀಸೋಮೇಶ್ವರಸ್ವಾಮಿ ದೇವಾಲಯದ ಕಾರ್ಯಾಧ್ಯಕ್ಷ ವಿ.ರವೀಂದ್ರ ತಿಳಿಸಿದರು. ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೋಮೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರದ ಪ್ರಯುಕ್ತ ನವಗ್ರಹ ಮಂಟಪದ ಮೇಲ್ಭಾಗದಲ್ಲಿ ''''ಆದಿಯೋಗಿ ಶ್ರೀ ಸೋಮೇಶ್ವರ'''' ಮೂರ್ತಿ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವನ ಆರಾಧನೆ ಮನುಷ್ಯನ ದೈಹಿಕ ಹಾಗೂ ಭಾವನಾತ್ಮಕ ವಲಯದಲ್ಲಿ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಮಾನಸಿಕ ಶಾಂತಿಗಾಗಿ ಧ್ಯಾನ ಮಾರ್ಗವನ್ನು ಅಳವಡಿಸಿಕೊಳ್ಳಬೇಕು ಎಂದು ಯೋಗಗುರು ವಿ.ರವೀಂದ್ರ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ದೇವಾಲಯದ ಕಾರ್ಯದರ್ಶಿ ಬಿ.ಶಿವರುದ್ರ, ಖಜಾಂಚಿ ವಿ.ಜಗನ್ನಾಥ್, ಕಾರ್ಯಕಾರಿ ಸಮಿತಿ ಸದಸ್ಯರಾದ ಎ.ಸೋಮಶೇಖರ್, ಬಿ.ಚಂದ್ರಣ್ಣ, ಚಂದ್ರರಾಜು, ಎಸ್.ಮಂಜುನಾಥ್‌, ವೀರಭದ್ರಸ್ವಾಮಿ, ಗೋಷ್ಠಿ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಮ.ಸುರೇಶ್ ಬಾಬು, ರೋಟರಿ ಸಂಸ್ಥಾಪಕ ಸದಸ್ಯ ಜೆಸಿಆರ್‌ ಚೆನ್ನಪ್ಪ, ನಗರ್ತ ಯುವಕ ಸಂಘದ ಮಾಜಿ ಅಧ್ಯಕ್ಷ ಸುರೇಶ್, ಮಹಾಂತಿನ ಮಠದ ಕಾರ್ಯದರ್ಶಿ ವಿ.ವಿಶ್ವನಾಥ್, ಪಿಸಿಕೆ ವಿಜಯ್ ಕುಮಾರ್, ರವಿತೇಜ ಇತರರು ಪಾಲ್ಗೊಂಡಿದ್ದರು.