ವಿಶ್ವ ಹಿಂದೂ ಪರಿಷತ್, ಭಜರಂಗದಳ ಆಶ್ರಯದಲ್ಲಿ ಹಿಂದು ಮಹಾಗಣಪತಿ ಉತ್ಸವ ಸಮಿತಿ-2026 ರ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ನಗರದ ಗ್ರಾಮೀಣ ಪೊಲೀಸ್ ಠಾಣೆ ರಸ್ತೆಯಲ್ಲಿ ಬರುವ ಭವಾನಿ ದೇವಸ್ಥಾನ ಬಳಿಯ ಬಯಲು ಪ್ರದೇಶದಲ್ಲಿ ಭೂಮಿ ಪೂಜೆ, ಗೋ ಪೂಜೆ ಹಾಗೂ ಭಗವಾ ಧ್ವಜಾರೋಹಣದ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು
ಕನ್ನಡಪ್ರಭ ವಾರ್ತೆ ಯಾದಗಿರಿ
ವಿಶ್ವ ಹಿಂದೂ ಪರಿಷತ್, ಭಜರಂಗದಳ ಆಶ್ರಯದಲ್ಲಿ ಹಿಂದು ಮಹಾಗಣಪತಿ ಉತ್ಸವ ಸಮಿತಿ-2026 ರ ನೇತೃತ್ವದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆಗೆ ನಗರದ ಗ್ರಾಮೀಣ ಪೊಲೀಸ್ ಠಾಣೆ ರಸ್ತೆಯಲ್ಲಿ ಬರುವ ಭವಾನಿ ದೇವಸ್ಥಾನ ಬಳಿಯ ಬಯಲು ಪ್ರದೇಶದಲ್ಲಿ ಭೂಮಿ ಪೂಜೆ, ಗೋ ಪೂಜೆ ಹಾಗೂ ಭಗವಾ ಧ್ವಜಾರೋಹಣದ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು. ಪ್ರತಿವರ್ಷ ಭಕ್ತಿಭಾವ ಹಾಗೂ ಸಡಗರದಿಂದ ನಡೆಯುವ ಹಿಂದೂ ಮಹಾ ಗಣಪತಿ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿದ್ದು ಈ ಬಾರಿಯೂ ಅದ್ಧೂರಿಯಾಗಿ ನಡೆಯಲಿದೆ. ಉತ್ಸವದ ಯಶಸ್ಸಿಗೆ ಭಕ್ತರು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಸಮಿತಿ ಈ ವರ್ಷದ ಅಧ್ಯಕ್ಷರಾಗಿರುವ ಸಿದ್ರಾಮಪ್ಪ ಅರಿಕೇರಿ ಹೇಳಿದರು.ನಗರದ ವಿಶ್ವಕರ್ಮ ಏಕದಂಡಗಿಮಠದ ಪೂಜ್ಯ ಶ್ರೀ ರವೀಂದ್ರ ಮಹಾಸ್ವಾಮೀಜಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷರಾದ ಜಿಲ್ಲಾ ಕಸಾಪ ಹಾಗೂ ಶಸಾಪ ಅಧ್ಯಕ್ಷರೂ ಆದ ನಾಫೆಡ್ ರಾಷ್ಟ್ರೀಯ ಉಪಾಧ್ಯಕ್ಷರೂ ಆದ ಸಿದ್ದಪ್ಪ ಹೊಟ್ಟಿ, ಹಿಂದೂ ಸಮಾಜದ ಮುಖಂಡರಾದ ಹನುಮಾನದಾಸ ಮುಂದಡಾ, ಮಹೇಶ್ಚಂದ್ರ ವಾಲಿ, ನರಸಿಂಗರಾವ್ ಕುಲಕರ್ಣಿ, ಮಲ್ಲಣ್ಣ ಕೊಯಿಮತ್ತೂರ, ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗೌತಮ ಕಾಡ್ಲೂರು, ಯಮಾರಡ್ಡಿ ಮುಂಡಾಸ, ಚಂದಪ್ಪ ಗುಂಜನೂರ, ಗುರುನಾಥರಡ್ಡಿ ಮಾಡಿಗಿ, ರಾಜು ಯೆಂದೆ, ಅರವಿಂದ ಆಚಾರ್, ಪಿ. ಶ್ರೀನಿವಾಸರಾವ್, ಸುಮೀರಮಲ್ ಜೈನ್, ಚಂದ್ರಕಾಂತ ಚವ್ಹಾಣ, ಸುಮಾ ಮಂಜುನಾಥ ಜೋಗೂರು, ಅಂಬಿಕಾ ಬಸವರಾಜ ಮಹಾಮನಿ, ಸಂಗೀತಾ ಗೌಳಿ, ಶ್ರೀ ವೈಷ್ಣೋದೇವಿ ಮಹಿಳಾ ಸಂಘ, ಶ್ರೀ ದಾನೇಶ್ವರಿ ಮಹಿಳಾ ಸಂಘದ ಕಾವೇರಿ, ಕೀರ್ತನಾ ಬನದೇಶ ಪಾಂಚಾಳ, ಮಹೇಶ್ವರಿ, ಯೋಗಿತಾ ಲಕ್ಷ್ಮೀಕಾಂತ, ಕಾರ್ಯಕರ್ತರಾದ ಮಲ್ಲು ಮ್ಯಾಳಿಗಿ, ತಾಯಪ್ಪ ಶೆಂಡಿಗಿ, ಸಾಯಿಕುಮಾರ ಅಂಬಿಗೇರ, ಮಿಥುನ್‌ಕುಮಾರ, ಸಂದೀಪಕುಮಾರ, ಚೇತನಕುಮಾರ, ಸುರೇಶ ಹುಲಕಲ್, ಸಾಯಿ ಕಲ್ಬುರ್ಗಿ, ಗುರುನಾಥ, ಅರುಣ, ಅರುಗೌಡ, ಜಗದೀಪ, ಚಂದ್ರು ಅನಪೂರ, ನಾಗು ಗುತ್ತೇದಾರ, ಅನಿಲ್, ಸುಮಿತ್ ಕುಮಾರ, ಲಕ್ಷ್ಮಣ, ಆಶಪ್ಪ, ಶರಣು ಸೇರಿದಂತೆ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
-ಕೋಟ್:
ಪ್ರತಿವರ್ಷ ಪ್ರತಿಷ್ಠಾಪನೆಗೊಂಡು ವಿಜೃಂಭಣೆಯಿಂದ ವರ್ಷದಿಂದ ವರ್ಷಕ್ಕೆ ವ್ಯಾಪ್ತಿ, ವಿಸ್ತಾರ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿರುವ ಹಿಂದು ಮಹಾಗಣಪತಿ, ನಗರದಲ್ಲಿ ಹಿಂದೂ ಸಮಾಜದ ಒಗ್ಗೂಡಿಸುವ ಬೃಹತ್ ಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಈ ಬಾರಿಯೂ ಸಮಸ್ತ ಹಿಂದೂಗಳು ಬೃಹತ್ ಸಂಖ್ಯೆಯಲ್ಲಿ ಗಣೇಶೋತ್ಸವದಲ್ಲಿ ಭಾಗಿಯಾಗುವ ಮೂಲಕ ಇತಿಹಾಸ ನಿರ್ಮಿಸಲು ಮುಂದಾಗಬೇಕು ಎಂದು ಮನವಿ ಮಾಡುತ್ತೇನೆ.ಶಿವಕುಮಾರ ಸುಕಲೂರು, ಭಜರಂಗದಳ, ಕಲ್ಬುರ್ಗಿ ವಿಭಾಗೀಯ ಸಹ ಸಂಯೋಜಕರು, ಯಾದಗಿರಿ
-22ವೈಡಿಆರ್11 : ವಿಶ್ವ ಹಿಂದೂ ಪರಿಷತ್, ಭಜರಂಗದಳ ಆಶ್ರಯದಲ್ಲಿ ನಗರದ ಗ್ರಾಮೀಣ ಪೊಲೀಸ್ ಠಾಣೆ ರಸ್ತೆಯಲ್ಲಿ ಬರುವ ಭವಾನಿ ದೇವಸ್ಥಾನ ಬಳಿಯ ಬಯಲು ಪ್ರದೇಶದಲ್ಲಿ ಭೂಮಿ ಪೂಜೆ, ಗೋ ಪೂಜೆ ಹಾಗೂ ಭಗವಾ ಧ್ವಜಾರೋಹಣದ ಮೂಲಕ ವಿಧ್ಯುಕ್ತ ಚಾಲನೆ ನೀಡಲಾಯಿತು.
---000---