ಸಾರಾಂಶ
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ಆಡಳಿತ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಪಿ.ಶಿವರಾಜು ಅವರನ್ನು ನೇಮಿಸಿ ಜ.31ರಂದು ಆದೇಶ ಹೊರಡಿಸಿದ್ದ ಸರ್ಕಾರ, ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಪುನಃ ಆದೇಶ ಬದಲಿಸಿದೆ. ಪಿ.ಶಿವರಾಜು ಬದಲಿಗೆ ಕೆಎಎಸ್ ಅಧಿಕಾರಿ (ಕಿರಿಯ ಶ್ರೇಣಿ) ಎಚ್.ವಿ. ವಿಜಯಕುಮಾರ್ ಅವರನ್ನು ಕುಲಸಚಿವರಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕುವೆಂಪು ವಿಶ್ವವಿದ್ಯಾಲಯ ಆಡಳಿತ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಪಿ.ಶಿವರಾಜು ಅವರನ್ನು ನೇಮಿಸಿ ಜ.31ರಂದು ಆದೇಶ ಹೊರಡಿಸಿದ್ದ ಸರ್ಕಾರ, ಅವರು ಅಧಿಕಾರ ಸ್ವೀಕರಿಸುವ ಮುನ್ನವೇ ಪುನಃ ಆದೇಶ ಬದಲಿಸಿದೆ.ಇದೀಗ ಪಿ.ಶಿವರಾಜು ಬದಲಿಗೆ ಕುವೆಂಪು ವಿಶ್ವವಿದ್ಯಾಲಯ ಆಡಳಿತ ಕುಲಸಚಿವರ ಸ್ಥಾನಕ್ಕೆ ಕೆಎಎಸ್ ಅಧಿಕಾರಿ (ಕಿರಿಯ ಶ್ರೇಣಿ) ಎಚ್.ವಿ. ವಿಜಯಕುಮಾರ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಜ.31ರ ಆದೇಶದಲ್ಲಿ ವಿಜಯಕುಮಾರ್ ಅವರನ್ನು ಯಾದಗಿರಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಆಗಿ ನೇಮಿಸಲಾಗಿತ್ತು. ಈ ಬದಲಾವಣೆಗೆ ಕಾರಣ ಏನೆಂಬುದನ್ನು ಮಾತ್ರ ಸ್ಪಷ್ಟಪಡಿಸಿಲ್ಲ.ನೇಮಕಗೊಂಡ ಅಧಿಕಾರಿ ಅಧಿಕಾರ ಸ್ವೀಕರಿಸಲು 8ರಿಂದ 10 ದಿನ ಅವಕಾಶವಿದೆ. ವಿಜಯಕುಮಾರ್ ಅವರು ಯಾವಾಗ ಅಧಿಕಾರ ಸ್ವೀಕರಿಸುತ್ತಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
- - - -2ಎಸ್ಎಂಜಿಕೆಪಿ12: ಎಚ್.ವಿ.ವಿಜಯಕುಮಾರ್- - -
-03smgkp07_650: ಪಿ.ಶಿವರಾಜು