ಸಾರಾಂಶ
- ಚನ್ನಗಿರಿಯಲ್ಲಿ ವಿಕಲಚೇತನರಿಗೆ ಮೋಟಾರ್ ವಾಹನಗಳ ವಿತರಣೆ - - - ಚನ್ನಗಿರಿ: ವಿಕಲಚೇತನರಿಗೆ ಅನುಕಂಪಕ್ಕಿಂತ, ಸ್ವಾವಲಂಬನೆಗೆ ಪೂರಕವಾದ ನೆರವು ಹಾಗೂ ಅವಕಾಶಗಳನ್ನು ನೀಡಬೇಕಾಗಿದೆ. ನಮ್ಮ ಸರ್ಕಾರ ವಿಕಲಚೇತನರು ಸ್ವಾವಲಂಬಿಗಳಾಗಿ ಜೀವಿಸಲು ಆತ್ಮ ಸ್ಥೈರ್ಯ ಮೂಡಿಸುವಂಥ ಸ್ವಯಂಚಾಲಿತ ಮೋಟರ್ ವಾಹನಗಳನ್ನು ಉಚಿತವಾಗಿ ನೀಡುತ್ತಿದೆ. ಈ ಅವಕಾಶ ಬಳಸಿ, ಎಲ್ಲರಂತೆ ಸ್ವಾವಲಂಬನೆ ಸಾಧಿಸಬೇಕು ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಸೋಮವಾರ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಾರ್ಯಾಲಯದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ವಿಕಲಚೇತನ ಅರ್ಹ ಫಲಾನುಭವಿಗಳಿಗೆ ಸ್ವಯಂಚಾಲಿತ ಮೋಟಾರ್ ವಾಹನಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.2023-2024ನೇ ಸಾಲಿನ ಅನಿರ್ಬಂಧಿತ ಯೋಜನೆಯಲ್ಲಿ ₹1.20 ಲಕ್ಷ ವೆಚ್ಚದ 4 ಸ್ವಯಂಚಾಲಿತ ಮೋಟಾರು ವಾಹನಗಳನ್ನು ನೀಡಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೇಸ್ ಸರ್ಕಾರ ಬಡವರ್ಗದ ಜನರ ಶ್ರೇಯೋಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅರ್ಹರು ಅವುಗಳನ್ನು ಸಕಾಲಕ್ಕೆ ಸದುಪಯೋಗ ಪಡೆಯಬೇಕು ಎಂದರು.
ತಾಪಂ ಕಾರ್ಯನಿರ್ವಾಹಕಾಧಿಕಾರಿ ಬಿ.ಕೆ.ಉತ್ತಮ ಮಾತನಾಡಿ, ವಿಕಲಚೇತನರು ಸ್ವಾವಲಂಬಿಗಳಾಗಿ ಜೀವಿಸಲು ಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಜಾರಿಗೆ ತಂದಿದೆ. ಇವುಗಳ ಬಗ್ಗೆ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.ಈ ಸಂದರ್ಭ ತಾಲೂಕು ವಿಕಲಚೇತನರ ಸಂಘದ ಅಧ್ಯಕ್ಷ ಸುಬ್ರಮಣಿ, ಕಾಂಗ್ರೆಸ್ ಮುಖಂಡರಾದ ಬೆಂಕಿಕೆರೆ ಹನುಮಂತಪ್ಪ, ಅಣ್ಣಪ್ಪ, ಹಾಲೇಶ್, ಸುರೇಶ್, ಜಯದೇವ್, ರಾಕೇಶ್, ರವಿಕುಮಾರ್, ಶಿವಕುಮಾರ್ ಮೊದಲಾದವರು ಹಾಜರಿದ್ದರು.
- - - -7ಕೆಸಿಎನ್ಜಿ1:ಚನ್ನಗಿರಿ ಪಟ್ಟಣದ ಬಸವೇಶ್ವರ ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ತಾಲೂಕು ಪಂಚಾಯಿತಿಯಿಂದ ವಿಕಲಚೇತನರಿಗೆ ನೀಡಲಾದ ಸ್ವಯಂಚಾಲಿತ ಮೋಟಾರ್ ವಾಹನ ಸೌಲಭ್ಯಗಳನ್ನು ಶಾಸಕ ಬಸವರಾಜು ವಿ. ಶಿವಗಂಗಾ ವಿತರಿಸಿದರು.