ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ ಶಾಸಕ ಲಕ್ಷ್ಮಣ ಸವದಿ ಹುಲುಗಬಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಲಕ್ಷ್ಮಣ ಸವದಿ ಕೃಷ್ಣಾ ನದಿ ಪ್ರವಾಹಲ್ಲಿ ಸಿಲುಕಿ ಮೃತಪಟ್ಟ ಬಾಳು ಚವ್ಹಾಣ ಮನೆಗೆ ತೆರಳಿ ಕುಟುಬಸ್ಥರಿಗೆ ಧೈರ್ಯ ತುಂಬಿದರು. ಕುಟುಂಬದ ಜೀವನ ನಿರ್ವಹಣೆಗೆ ಅನುಕೂಲವಾಗಲೆಂದು ಧನ ಸಹಾಯ ಮಾಡಿದರು.
ಕನ್ನಡಪ್ರಭ ವಾರ್ತೆ ಅಥಣಿ
ಶಾಸಕ ಲಕ್ಷ್ಮಣ ಸವದಿ ಹುಲುಗಬಾಳ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಲಕ್ಷ್ಮಣ ಸವದಿ ಕೃಷ್ಣಾ ನದಿ ಪ್ರವಾಹಲ್ಲಿ ಸಿಲುಕಿ ಮೃತಪಟ್ಟ ಬಾಳು ಚವ್ಹಾಣ ಮನೆಗೆ ತೆರಳಿ ಕುಟುಬಸ್ಥರಿಗೆ ಧೈರ್ಯ ತುಂಬಿದರು. ಕುಟುಂಬದ ಜೀವನ ನಿರ್ವಹಣೆಗೆ ಅನುಕೂಲವಾಗಲೆಂದು ಧನ ಸಹಾಯ ಮಾಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ತಾಲೂಕಿನ ಹುಲುಗಬಾಳ ಗ್ರಾಮದ ಬಾಳು ಚವ್ಹಾಣ ಎಂಬ ರೈತ ಪ್ರವಾಹದ ಸಂದರ್ಭದಲ್ಲಿ ಮನೆಗೆ ತೆರಳುವಾಗ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಮೃತಪಟ್ಟಿದ್ದು, ಈತನಿಗೆ ಒಂದು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದಾರೆ. ಇಬ್ಬರೂ ಜಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಬ್ಬಳು ವಸತಿ ನಿಲಯದಲ್ಲಿದ್ದು, ಎರಡನೇ ಮಗಳಿಗೂ ವಸತಿ ನಿಲಯದಲ್ಲಿ ಪ್ರವೇಶ ನೀಡುವಂತೆ ಅಧಿಕಾರಿಗೆ ಸೂಚನೆ ನೀಡಿದ್ದೇನೆ. ₹5 ಲಕ್ಷ ಪರಿಹಾರ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 2-3 ದಿನದಲ್ಲಿ ಪರಿಹಾರದ ಮೊತ್ತ ಅವರ ಖಾತೆಗೆ ಜಮಾ ಮಾಡಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಅವರ ಕಷ್ಟ ಕಾರ್ಪಣ್ಯಗಳಿಗೆ ನೆರವಾಗುವುದರ ಜೊತೆಗೆ ಅವರ ಕುಟುಂಬಕ್ಕೆ ಸಂಪೂರ್ಣ ಸಹಾಯ, ಸಹಕಾರ ನೀಡುವ ಭರವಸೆ ನೀಡಿದರು. ಕುಟುಂಬದ ಜೀವನೋಪಾಯಕ್ಕೆ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಏನು ಸಹಾಯ ಬೇಕೋ ಅದನೆಲ್ಲ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಶ್ರೀಶೈಲ ನಾಯಿಕ. ಶ್ರೀಶೈಲ ಸಿಂಧೆ. ಸಿದ್ಧಾರೂಢ ಕೆಂಪಿ. ಗಜಾನನ ಚವ್ಹಾಣ, ಅಶೋಕ ಚವ್ಹಾಣ, ಪಾಂಡು ಬೇಡಗ, ಅಣ್ಣಪ್ಪ ದೊಯಿಪೋಡೆ, ಸುರೇಶ ಸಿಂಧೆ, ಮಾರುತಿ ಹರಳೆ, ಮಹಾಂತೇಶ ದುರ್ಗಿ, ಸಿದ್ದು ಕಬ್ಬೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.