ಸ್ವಚ್ಛತೆ ವಿಚಾರದಲ್ಲಿ ರಸ್ತೆ ಬದಿ ಕಸ ಹಾಕುವವರಿಗೆ ದಂಡ ವಿಧಿಸಿ ಎಫ್‌ಐಆರ್ ದಾಖಲು ಮಾಡಿ. ಇಲ್ಲಿಯವರೆಗೆ ಎಷ್ಟು ಪ್ರಕರಣ ದಾಖಲಿಸಿದ್ದೀರಿ. ರಂಗಾಪುರ ಮತ್ತು ದಸರಿಘಟ್ಟ ಮಾರ್ಗದ ನಗರದ ಹೊರವಲಯದಲ್ಲಿ ಪ್ರತಿನಿತ್ಯ ಕೋಳಿ ಮಾಂಸ ತ್ಯಾಜ್ಯ ಮತ್ತು ಕಸ ಬೀಳುತ್ತಿದ್ದು ಇಲ್ಲಿ ಕಸ ಹಾಕುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು.

ತಿಪಟೂರು: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಹಾಗೂ ಶಾಲೆ, ಕಾಲೇಜು ಮತ್ತು ಹಾಸ್ಟೆಲ್ ಗಳಲ್ಲಿ ಪ್ರತಿ ತಿಂಗಳು ಸಮರ್ಪಕ ಕುಡಿಯುವ ನೀರಿನ ಬಗ್ಗೆ ಪರಿಶೀಲಿಸಿ ೫ನೇ ತಾರೀಖಿನೊಳಗೆ ಮಾಹಿತಿ ನೀಡಬೇಕು, ಈ ವಿಚಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಬೇಜವಾಬ್ದಾರಿ ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉಪ ವಿಭಾಗಾಧಿಕಾರಿ ಸಪ್ತಶ್ರೀ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಮಿನಿ ವಿಧಾನಸೌಧದಲ್ಲಿರುವ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಿಪಟೂರು ಉಪವಿಭಾಗದ ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತಿಪಟೂರು ವಿಭಾಗದ ಅಧಿಕಾರಿಗಳ ವಿಪತ್ತು ನಿರ್ವಹಣಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ನಗರದಲ್ಲಿ ನಾಯಿಗಳ ಹಾವಳಿ ಜಾಸ್ತಿ ಇದ್ದು ಕಸವನ್ನು ರಸ್ತೆ ಬದಿಯಲ್ಲಿ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಿ. ಸ್ವಚ್ಛತೆ ವಿಚಾರ ನಗರಸಭೆಯ ಮುಖ್ಯ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಬೆಳಗ್ಗೆ ಪ್ರತಿ ಏರಿಯಾಗಳಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕರು, ಸಿಬ್ಬಂದಿಯೊಂದಿಗೆ ಬೆಳಗ್ಗೆ ಹಾಜರಿರಬೇಕು ಎಂದರು. ಮುಂದಿನ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳು ಬರುತ್ತಿದ್ದು ವಿದ್ಯಾರ್ಥಿಗಳ ಆರೋಗ್ಯದಲ್ಲಿ ನೀರು ಬಹು ಮುಖ್ಯವಾಗಿದ್ದು ಶುದ್ಧ ನೀರನ್ನು ಒದಗಿಸಬೇಕು. ಟ್ಯಾಂಕರ್ ನೀರನ್ನು ಪರಿಶೀಲಿಸಿ ನೀಡಬೇಕು. ಯಾವುದೇ ಗ್ರಾಮಗಳ ಯಾವುದೇ ಕುಟುಂಬಗಳಿಗೂ ಕುಡಿಯುವ ನೀರಿನ ಕೊರತೆಯಾಗಬಾರದು. ಗ್ರಾಮೀಣ ಭಾಗದಲ್ಲಿ ಜಾತ್ರೆ, ಉತ್ಸವ, ಕಾರ್ಯಕ್ರಮಗಳಲ್ಲಿ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ಫಲಕ ಹಾಕಬೇಕು. ಗ್ರಾಮದ ಮುಖಂಡರೊಂದಿಗೆ ಮಾಹಿತಿ ಪಡೆದು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ಶಾಲೆಗಳಲ್ಲಿ ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳಿಗೆ ಹೆಚ್ಚಿನ ಸಮಯದ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.

--------

ಸ್ವಚ್ಛತೆ ವಿಚಾರದಲ್ಲಿ ರಸ್ತೆ ಬದಿ ಕಸ ಹಾಕುವವರಿಗೆ ದಂಡ ವಿಧಿಸಿ ಎಫ್‌ಐಆರ್ ದಾಖಲು ಮಾಡಿ. ಇಲ್ಲಿಯವರೆಗೆ ಎಷ್ಟು ಪ್ರಕರಣ ದಾಖಲಿಸಿದ್ದೀರಿ. ರಂಗಾಪುರ ಮತ್ತು ದಸರಿಘಟ್ಟ ಮಾರ್ಗದ ನಗರದ ಹೊರವಲಯದಲ್ಲಿ ಪ್ರತಿನಿತ್ಯ ಕೋಳಿ ಮಾಂಸ ತ್ಯಾಜ್ಯ ಮತ್ತು ಕಸ ಬೀಳುತ್ತಿದ್ದು ಇಲ್ಲಿ ಕಸ ಹಾಕುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು.

ಉಪವಿಭಾಗಾಧಿಕಾರಿ ಸಪ್ತಶ್ರೀ