ಕೊಡಗಿನ ಸಾಂಪ್ರದಾಯಿಕ ಆಭರಣಕ್ಕೆ ಅವಮಾನ: ವ್ಯಾಪಕ ಆಕ್ರೋಶ

| Published : Dec 14 2023, 01:30 AM IST

ಕೊಡಗಿನ ಸಾಂಪ್ರದಾಯಿಕ ಆಭರಣಕ್ಕೆ ಅವಮಾನ: ವ್ಯಾಪಕ ಆಕ್ರೋಶ
Share this Article
  • FB
  • TW
  • Linkdin
  • Email

ಸಾರಾಂಶ

ಪಾದರಕ್ಷೆಯ ಮೇಲೆ ಕೊಡವರ ಸಾಂಪ್ರದಾಯಿಕ ಆಭರಣಗಳನ್ನು ಇಟ್ಟು ಫೋಟೋಶೂಟ್ ಮಾಡಿರುವುದು ಕೊಡವರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಮೆರಿಕದ ಮದುವೆ ಸಮಾರಂಭವೊಂದರಲ್ಲಿ ಕೊಡಗಿನ ಹಾಗೂ ಕೊಡವರ ಸಂಸ್ಕೃತಿಯ ಪ್ರತೀಕವಾದ ಪವಿತ್ರ ಆಭರಣಗಳಾದ ಕೊಕ್ಕೆತಾತಿ, ಪತ್ತಾಕ್ ಹಾಗೂ ದೇವಮಾಲೆಗೆ ಅವಮಾನ ಮಾಡಲಾಗಿದ್ದು, ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಗೊಂಡಿದೆ. ಪಾದರಕ್ಷೆಯ ಮೇಲೆ ಕೊಡವರ ಸಾಂಪ್ರದಾಯಿಕ ಆಭರಣಗಳನ್ನು ಇಟ್ಟು ಫೋಟೋಶೂಟ್ ಮಾಡಿರುವುದು ಕೊಡವರ ಕೆಂಗಣ್ಣಿಗೆ ಗುರಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕೂಡ ತೀವ್ರ ಖಂಡನೆ ವ್ಯಕ್ತಪಡಿಸಿದ್ದು, ಇಂತಹ ಕೃತ್ಯ ಮರುಕಳಿಸದಂತೆ ಸೂಕ್ತ ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ. ಕೊಡವ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಇಂತಹ ಕಿಡಿಗೇಡಿ ಕೃತ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಎ.ಎಸ್. ಪೊನ್ನಣ್ಣ ಒತ್ತಾಯಿಸಿದ್ದಾರೆ.