ರಾಷ್ಟ್ರಧ್ವಜಕ್ಕೆ ಅಪಮಾನ: ಅಧಿಕಾರಿಗಳ ವಿರುದ್ಧ ಎಸ್ಪಿಗೆ ದೂರು

| Published : Jan 31 2024, 02:16 AM IST

ರಾಷ್ಟ್ರಧ್ವಜಕ್ಕೆ ಅಪಮಾನ: ಅಧಿಕಾರಿಗಳ ವಿರುದ್ಧ ಎಸ್ಪಿಗೆ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜ ಸಂಹಿತೆಯ ರೀತಿ ನೀತಿ ರಿವಾಜುಗಳನ್ನು ಸಂಪೂರ್ಣ ಉಲ್ಲಂಘಿಸಿರುತ್ತಾರೆ ಹಾಗೂ ಹನುಮಧ್ವಜ ಸಮಿತಿಯವರು ರಾಷ್ಟ್ರೀಯ ದಿನಾಚರಣೆಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಡ ಧ್ವಜವನ್ನು ನವೆಂಬರ್ 1 ರಂದು ಹಾಗೂ ಜನವರಿ 26, ಅಗಸ್ಟ್‌15 ರಂದು ಹಾರಿಸುವ ಬಗ್ಗೆ ಸ್ಪಷ್ಟತೆಯನ್ನು ಸಹ ನೀಡಿರುತ್ತಾರೆ. ಹಾಗಿದ್ದರೂ ಕೂಡ 40 ವರ್ಷದಿಂದ ಇದ್ದ ಧ್ವಜ ಸ್ಥಂಭದ ಬಾವುಟವನ್ನು ಇಳಿಸಿರುವುದು ಹಿಂದುಗಳಿಗೆ ಹಾಗೂ ರಾಷ್ಟ್ರ ಪ್ರೇಮಿಗಳಿಗೆ ಅಪಮಾನ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆರಗೋಡು ಗ್ರಾಮದಲ್ಲಿ ಹಾಕಿದ ಹನುಮ ಧ್ವಜವನ್ನು ಬಲವಂತವಾಗಿ ಕೆಳಗಿಳಿಸಿ ಅದೇ ಜಾಗದಲ್ಲಿ ರಾಷ್ಟ್ರ ಧ್ವಜ ಹಾರಿಸುವ ಸಂದರ್ಭ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಮುಖಂಡರು ಎಸ್ಪಿಗೆ ಮಂಗಳವಾರ ದೂರು ನೀಡಿದರು.

ಕೆರಗೋಡು ಪಂಚಾಯಿತಿ ಅಧಿಕಾರಿ. ಮಂಡ್ಯ ಉಪವಿಭಾಗಾಧಿಕಾರಿ, ತಾಲೂಕು ಕಾರ್ಯ ನಿರ್ವಾಹಕ ಅಧಿಕಾರಿ, ಇವರು ಸ್ಥಳೀಯ ಪಂಚಾಯಿತಿಯಿಂದ ಅನುಮತಿ ಪಡೆದು ಹಾಕಲಾಗಿದ್ದ ಹನುಮ ಧ್ವಜವನ್ನು ಬಲವಂತವಾಗಿ ಇಳಿಸಿ, ಆ ಜಾಗಕ್ಕೆ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂದು ಆರೋಪಿಸಿದರು.

ರಾಷ್ಟ್ರಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜ ಸಂಹಿತೆಯ ರೀತಿ ನೀತಿ ರಿವಾಜುಗಳನ್ನು ಸಂಪೂರ್ಣ ಉಲ್ಲಂಘಿಸಿರುತ್ತಾರೆ ಹಾಗೂ ಹನುಮಧ್ವಜ ಸಮಿತಿಯವರು ರಾಷ್ಟ್ರೀಯ ದಿನಾಚರಣೆಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಡ ಧ್ವಜವನ್ನು ನವೆಂಬರ್ 1 ರಂದು ಹಾಗೂ ಜನವರಿ 26, ಅಗಸ್ಟ್‌15 ರಂದು ಹಾರಿಸುವ ಬಗ್ಗೆ ಸ್ಪಷ್ಟತೆಯನ್ನು ಸಹ ನೀಡಿರುತ್ತಾರೆ. ಹಾಗಿದ್ದರೂ ಕೂಡ 40 ವರ್ಷದಿಂದ ಇದ್ದ ಧ್ವಜ ಸ್ಥಂಭದ ಬಾವುಟವನ್ನು ಇಳಿಸಿರುವುದು ಹಿಂದುಗಳಿಗೆ ಹಾಗೂ ರಾಷ್ಟ್ರ ಪ್ರೇಮಿಗಳಿಗೆ ಅಪಮಾನ ಮಾಡಿರುತ್ತಾರೆ ದೂರಿದರು.

ಧ್ವಜ ಸ್ಥಂಭದ ಮಕ್ಕಾಲು ಭಾಗಕ್ಕೆ ತಿರಂಗವನ್ನು ಹಾರಿಸಿರುತ್ತಾರೆ. ಧ್ವಜ ಹಾರಿಸುವ ಸಂದರ್ಭದಲ್ಲಿ ಕಾಲಿಗೆ ಚಪ್ಪಲಿ ಮತ್ತು ಶೂ ಧರಿಸಿರುತ್ತಾರೆ. ಧ್ವಜಾರೋಹಣ ವೇಳೆ ಹಾಗೂ ಧ್ವಜ ಇಳಿಸುವ ವೇಳೆ ನಿಯಮಾನುಸಾರ ರಾಷ್ಟ್ರೀಯ ಗೀತೆಯನ್ನು ಹಾಡಿರುವುದಿಲ್ಲ, ಹಾಗೂ ತುತ್ತೂರಿಯ ಶಬ್ದ ಮಾಡಿರುವುದಿಲ್ಲ. ಧ್ವಜಾರೋಹಣ ಸಂದರ್ಭದಲ್ಲಿ ಧ್ವಜದ ಮಧ್ಯ ಹೂವಿನ ದಳಗಳನ್ನು ಹಾಕಿರುವುದಿಲ್ಲ, ಮಧ್ಯಾಹ್ನದ ನಂತರ ಧ್ವಜ ಹಾರಿಸಿರುತ್ತಾರೆ.

ಇವೆಲ್ಲವು ಧ್ವಜ ಸಂಹಿತೆ 2022 ರ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಹಾಗಾಗಿ ಇವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ. ಹಾಗೂ ಈ ಕೂಡಲೇ ತೆರವುಗೊಳಿಸಿದ್ದ ಕೇಸರಿ ಧ್ವಜವನ್ನು ಮರು ಸ್ಥಾಪನೆ ಮಾಡಲು ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮುಖಂಡರಾದ ಸಿ.ಟಿ.ಮಂಜುನಾಥ್, ಚಂದ್ರು, ಶಿವಕುಮಾರ್, ವಿವೇಕ್, ಪ್ರಸನ್ನಕುಮಾರ್, ನವೀನ್ ಯಲಿಯೂರು ಭಾಗವಹಿಸಿದ್ದರು.

ಎಂಟು ಮಂದಿ ವಿರುದ್ಧ ಎಫ್ಐಆರ್

ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಪ್ರಕರಣ ಹಾಗೂ ಪಾದಯಾತ್ರೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಕಾರಣರಾದ ಎಂಟು ಮಂದಿ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.

ಕೆರೆಗೋಡು ಗ್ರಾಮದಲ್ಲಿ ಹನುಮಧ್ವಜ ನಿಲಿಸಿದ ವೇಳೆ ಕಾನೂನು ವ್ಯವಸ್ಥೆಗೆ ದಕ್ಕೆ ಉಂಟು ಮಾಡಿದ ಮೂವರು ಹಾಗೂ ಪಾದಯಾತ್ರೆ ಸಮಯದಲ್ಲಿ ಮಂಡ್ಯದ ಮಹಾವೀರ ವೃತ್ತದಲ್ಲಿ ಹರಿದು ಹಾಕಿ ಶಾಂತಿ ಭಂಗ ತಂಡ ನಾಲ್ವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ಇನ್ನುಳಿದಂತೆ ಕೆರಗೋಡು ಹಾಗೂ ಮಂಡ್ಯದಲ್ಲಿ ಶಾಂತಿ ಭಂಗ ಉಂಟುಮಾಡಿದವರ ಬಗ್ಗೆ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದ್ದು ಅವರ ಗುರುತು ಪತ್ತೆ ಹಚ್ಚಿ ಅವರ ವಿರುದ್ಧವು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ಸಧೀಕ್ಷಕ ಎನ್. ಯತೀಶ್ ತಿಳಿಸಿದ್ದಾರೆ.ಧ್ವಜಸ್ತಂಭ ನಿರ್ಮಾಣಕ್ಕೆ ಗ್ರಾಪಂನಿಂದ ಅನುಮತಿ

ಗ್ರಾಮದ ಗೌರಿಶಂಕರ ಸೇವಾ ಟ್ರಸ್ಟ್ ವತಿಯಿಂದ ಧ್ವಜ ಸ್ತಂಭ ನಿರ್ಮಾಣಕ್ಕೆ ಸ್ಥಳೀಯ ಪಂಚಾಯಿತಿಯಿಂದ ಅನುಮೋದನೆ ಪಡೆಯಲು ಅರ್ಜಿ ಸಲ್ಲಿಸಿತ್ತು. ಪಂಚಾಯಿತಿ ಸಭೆ ಕರೆದು ಒಟ್ಟು 22 ಮಂದಿ ಸದಸ್ಯರ ಪೈಕಿ 20 ಮಂದಿ ಸದಸ್ಯರು ಹಾಜರಾಗಿ 17 ಮಂದಿ ಸದಸ್ಯರು ಧ್ವಜಸ್ತಂಭ ಸ್ಥಾಪನೆ ಪರ, ಇಬ್ಬರು ತಟಸ್ಥರಾಗಿ ಮತ್ತು ಮತ್ತೋರ್ವ ಸದಸ್ಯ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಂಡರು. ಒಟ್ಟಾರೆ ಬಹುಮತದ ಆಧಾರದ ಮೇರೆಗೆ ಧ್ವಜ ಸ್ತಂಭ ಸ್ಥಾಪನೆಗೆ ಅನುಮೋದನೆ ನೀಡಲಾಗಿತ್ತು.