ಉಪರಾಷ್ಟ್ರಪತಿಗೆ ಅವಮಾನ: ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆ

| Published : Dec 22 2023, 01:30 AM IST

ಉಪರಾಷ್ಟ್ರಪತಿಗೆ ಅವಮಾನ: ಕೊಪ್ಪಳದಲ್ಲಿ ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಸಾಂವಿಧಾನಿಕ ಹುದ್ದೆ ಹೊಂದಿದ, ಯಾವುದೇ ಪಕ್ಷಕ್ಕೆ ಸೇರದ ವ್ಯಕ್ತಿ ಮತ್ತು ದೇಶದ ಎರಡನೇ ಪ್ರಥಮ ಪ್ರಜೆ ಆಗಿರುವ ಉಪ ರಾಷ್ಟ್ರಪತಿ ಜಗದೀಶ್ ಧನಕರ್ ಬಗ್ಗೆ ಸಂಸದರ ಭವನದ ಮುಂಭಾಗ ಅಣಕು ಪ್ರದರ್ಶನ ಮಾಡಿದ್ದಾರೆ. ಇದು ಇಡೀ ದೇಶಕ್ಕೆ ಅಪಮಾನ ಮಾಡಿದಂತಾಗಿದೆ. ತಕ್ಷಣ ರಾಹುಲ್ ಗಾಂಧಿ ಮತ್ತು ಇತರ ಸಂಸದರು ದೇಶದ ಜನತೆಯ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.

ಕೊಪ್ಪಳ: ಉಪರಾಷ್ಟ್ರಪತಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಸೇರಿದಂತೆ ಕಾಂಗ್ರೆಸ್ ಒಕ್ಕೂಟದ ಸಂಸದರು ಅವಮಾನ ಮಾಡಿರುವುದನ್ನು ವಿರೋಧಿಸಿ ಕೊಪ್ಪಳ ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.ಬಸವೇಶ್ವರ ವೃತ್ತ ಬಳಿ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು. ಅಲ್ಲದೆ, ಕಾಂಗ್ರೆಸ್ ಪಕ್ಷದ ವಿರುದ್ಧ ಘೋಷಣೆ ಕೂಗಲಾಯಿತು.ದೇಶದ ಸಾಂವಿಧಾನಿಕ ಹುದ್ದೆ ಹೊಂದಿದ, ಯಾವುದೇ ಪಕ್ಷಕ್ಕೆ ಸೇರದ ವ್ಯಕ್ತಿ ಮತ್ತು ದೇಶದ ಎರಡನೇ ಪ್ರಥಮ ಪ್ರಜೆ ಆಗಿರುವ ಉಪ ರಾಷ್ಟ್ರಪತಿ ಜಗದೀಶ್ ಧನಕರ್ ಬಗ್ಗೆ ಸಂಸದರ ಭವನದ ಮುಂಭಾಗ ಅಣಕು ಪ್ರದರ್ಶನ ಮಾಡಿದ್ದಾರೆ. ಇದು ಇಡೀ ದೇಶಕ್ಕೆ ಅಪಮಾನ ಮಾಡಿದಂತಾಗಿದೆ. ತಕ್ಷಣ ರಾಹುಲ್ ಗಾಂಧಿ ಮತ್ತು ಇತರ ಸಂಸದರು ದೇಶದ ಜನತೆಯ ಕ್ಷಮೆ ಕೋರಬೇಕೆಂದು ಆಗ್ರಹಿಸಿದರು.ಈ ರೀತಿ ಸಂವಿಧಾನದತ್ತ ಹುದ್ದೆಯಲ್ಲಿ ಇರುವವರನ್ನು ಅಪಮಾನ ಮಾಡುವುದು ಅಕ್ಷಮ್ಯ ಅಪರಾಧ. ಇದು ದೇಶದ ಗೌರವಕ್ಕೆ ಧಕ್ಕೆಯಾದಂತಾಗುತ್ತದೆ. ಈ ವಿಷಯದಲ್ಲಿ ರಾಹುಲ್ ಗಾಂಧಿ ಮಧ್ಯೆ ಪ್ರವೇಶಿಸಿ, ಅವಮಾನ ಮಾಡಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಬೇಕಾಗಿತ್ತು. ಆದರೆ, ಅದನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ವರ್ತಿಸುತ್ತಿರುವುದು ಸರಿಯಲ್ಲ. ಇಡೀ ದೇಶದ ಜನರ ಕ್ಷಮೆ ಕೇಳುವವರೆಗೂ ಹೋರಾಟ ಮುಂದುವರೆಸುವ ಎಚ್ಚರಿಕೆ ನೀಡಿದ್ದಾರೆ.ಬಳ್ಳಾರಿ ವಿಭಾಗ ಸಹ ಪ್ರಭಾರ ಚಂದ್ರಶೇಖರ್ ಪಾಟೀಲ್ ಹಲಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಗರಾವ್ ಕುಲಕರ್ಣಿ, ರಮೇಶ್ ನಾಡಿಗೇರಿ, ಮಂಜುಳಾ ಕರಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಿವುಕುಮಾರ್ ಅರಿಕೇರಿ, ನಗರ ಅಧ್ಯಕ್ಷ ಸುನೀಲ, ಜಿಲ್ಲಾ ವಕ್ತಾರ ಮಹೇಶ್ ಅಂಗಡಿ, ಉಮೇಶ್ ರವಿಚಂದ್ರನ್, ಪುಟ್ಟರಾಜ, ಮಹಾಲಕ್ಷ್ಮಿ ಕಂದಾರಿ, ಅಮಿತ್ ಕಂಪ್ಲೇಕರ್, ಪಂಪಯ್ಯ, ಅವಿನಾಶ್, ರಾಜು ವಸ್ತ್ರದ, ಗವಿರಾಜ, ಕಂಠಯ್ಯ ಹಿರೇಮಠ್, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.