ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಕೋರಾ ಗ್ರಾಮದ ಅಂಬರಯ್ಯಅವರ ಕುಟುಂಬದವರಿಗೆ ಆದಿತ್ಯ ಬಿರ್ಲಾ ಅಪಘಾತ ವಿಮಾ ಯೋಜನೆಯಡಿ 15 ಲಕ್ಷ ರು. ಚೆಕ್‌ನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಫಲಾನುಭವಿಗೆ ನೀಡಿದರು.
ಕನ್ನಡಪ್ರಭ ವಾರ್ತೆ, ತುಮಕೂರುಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಕೋರಾ ಗ್ರಾಮದ ಅಂಬರಯ್ಯಅವರ ಕುಟುಂಬದವರಿಗೆ ಆದಿತ್ಯ ಬಿರ್ಲಾ ಅಪಘಾತ ವಿಮಾ ಯೋಜನೆಯಡಿ 15 ಲಕ್ಷ ರು. ಚೆಕ್‌ನ್ನು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಫಲಾನುಭವಿಗೆ ನೀಡಿದರು.ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ವಾರ್ಷಿಕ ಕೇವಲ 759 ರು. ಪ್ರೀಮಿಯಂ ಪಾವತಿಸಿ ಜಿಎಜಿ ಅಪಘಾತ ವಿಮೆ ಯೋಜನೆಯಲ್ಲಿ ನೋಂದಾಯಿಸಿಕೊಂಡಿದ್ದರು. ದುರದೃಷ್ಟವಶಾತ್ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟ ಹಿನ್ನೆಲೆಯಲ್ಲಿ, ಯೋಜನೆಯ ನಿಯಮಾನುಸಾರ ಅವರ ನಾಮಿನಿಯಾಗಿರುವ ಅವರ ಪುತ್ರನಿಗೆ ಅವರಿಗೆ 15 ಲಕ್ಷ ರು. ವಿಮೆ ಕ್ರೈಮ್ ಮಂಜೂರಾಯಿತು. ಈ ವಿಮೆ ಕ್ರೈಮ್ ಚೆಕ್ ಅನ್ನುಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ತುಮಕೂರು ಶಾಖೆಯ ಹಿರಿಯ ವ್ಯವಸ್ಥಾಪಕ ಸಿ.ಎಚ್.ಚೈತನ್ಯ ಕುಮಾರ್ ಅವರು ಫಲಾನುಭವಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ವಿ.ಸೋಮಣ್ಣ, ಈ ವಿಮಾ ಯೋಜನೆಯಲ್ಲಿ ಕೇವಲ 749 ರು. ವಾರ್ಷಿಕ ಪ್ರೀಮಿಯಂ ಪಾವತಿಸುವ ಮೂಲಕ 15 ಲಕ್ಷದವರೆಗೆ ಅಪಘಾತ ವಿಮಾ ರಕ್ಷಣೆ ಪಡೆಯಬಹುದು.ಪ್ರತಿಯೊಬ್ಬ ನಾಗರಿಕರೂ ಇಂತಹ ಸಾಮಾಜಿಕ ಭದ್ರತಾ ವಿಮಾ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು. ಅಂಚೆ ಅಧೀಕ್ಷಕ ಶಂಕರಪ್ಪ ಅವರು, ಭಾರತೀಯ ಅಂಚೆ ಇಲಾಖೆ ಹಾಗೂ ಐಪಿಪಿಬಿ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ವಿಮಾ ಸೇವೆಗಳನ್ನು ತಲುಪಿಸಲಾಗುತ್ತಿದೆ ಎಂದು ತಿಳಿಸಿದರು. ಎಲೆರಾಂಪುರ ಕುಂಚಿಟಿಗ ಸಂಸ್ಥಾನ ಮಠದಡಾ. ಹನುಮಂತನಾಥ ಸ್ವಾಮೀಜಿ, ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಅಂಚೆ ಇಲಾಖೆ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.