ಸಾರಾಂಶ
ಸಹಕಾರಿ ಕ್ಷೇತ್ರ ವಿಷಯವನ್ನು ಶಾಲಾ ಪಠ್ಯದಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದ್ದಾರೆ.
ಕೊಪ್ಪಳ: ಸಹಕಾರಿ ಕ್ಷೇತ್ರ ಇಂದು ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದು, ಇದು ಸಮಾಜದ ಹಾಸುಹೊಕ್ಕಾಗಿದೆ. ಹೀಗಾಗಿ, ಈ ವಿಷಯವನ್ನು ಶಾಲಾ ಪಠ್ಯದಲ್ಲಿ ಅಳವಡಿಸುವ ಅಗತ್ಯವಿದ್ದು, ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ್ ಹೇಳಿದ್ದಾರೆ.
ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ, ಬಾಲಕಿಯರ ಸರಕಾರಿ ಪಪೂ ಕಾಲೇಜು, ಪ್ರೌಢ ಶಾಲಾ ವಿಭಾಗದ ಸಹಯೋಗದಲ್ಲಿ ನಗರದ ಬಾಲಕಿಯರ ಸರ್ಕಾರಿ ಪಪೂ ಕಾಲೇಜು ಪ್ರೌಢ ಶಾಲೆಯಲ್ಲಿ ಸಹಕಾರ ವಿಷಯದ ಕುರಿತು ಜಿಲ್ಲಾಮಟ್ಟದ ಚರ್ಚೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಮಾತನಾಡಿದರು.ರಾಜ್ಯಮಟ್ಟಕ್ಕೆ ಆಯ್ಕೆ
ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಸಹಕಾರ ವಿಷಯದ ಪರವಾಗಿ ಮಾತನಾಡಿದ ಅಕ್ಷತಾ ಸೋಮಶೇಖರ ಗೊಲ್ಲರ ಅವರು ಪ್ರಥಮ ಸ್ಥಾನ ಪಡೆದರೆ, ವಿರೋಧವಾಗಿ ಮಾತನಾಡಿದ ಶ್ರೀಕಾಂತ ಸಿದ್ದಪ್ಪ ಅಡವಿಭಾವಿ ಪ್ರಥಮ ಸ್ಥಾನ ಪಡೆದರು. ಪ್ರಬಂಧ ಸ್ಪರ್ಧೆಯಲ್ಲಿ ಸುನೀಲಕುಮಾರ ಪ್ರಥಮ, ಸ್ಫೂರ್ತಿ ಹನುಮರಡ್ಡಿ ಪ್ಯಾಟಿ ದ್ವಿತೀಯ, ಕಿರಣ ನಾಯ್ಕ ತೃತೀಯ ಸ್ಥಾನ ಪಡೆದು ಪಾರಿತೋಷಕ ಮತ್ತು ಪ್ರಮಾಣಪತ್ರ ಪಡೆದರು.ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಹಾಲಯ್ಯ ಹುಡೇಜಾಲಿ, ನಿರ್ದೇಶಕರಾದ ಭೀಮರಡ್ಡಿ ಶ್ಯಾಡ್ಲಗೇರಿ, ತೋಟಪ್ಪ ಕಾಮನೂರು, ಮಾಜಿ ನಿರ್ದೇಶಕ ಗವಿಸಿದ್ದೇಶ ಹುಡೇಜಾಲಿಮಠ, ಸಹಕಾರ ಅಭಿವೃದ್ಧಿ ಅಧಿಕಾರಿ ಬಸಪ್ಪ ಗಾಳಿ, ವೀರಯ್ಯ ಜಿ ಸೂಡಿಮಠ, ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢ ಶಾಲಾ ವಿಭಾಗ, ಕೊಪ್ಪಳ, ಕಲಬುರಗಿ ಕೆ.ಐ.ಸಿ.ಎಂ ಉಪನ್ಯಾಶಕರಾದ ರಾಜೇಶ ಯಾವಗಲ್, ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಅಕ್ಷಯ್ ಕುಮಾರ ಉಪಸ್ಥಿತರಿದ್ದರು.ಉಪನ್ಯಾಶಕ ರಾಜೇಶ ಯಾವಗಲ್ಲ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಹಕಾರ ಯೂನಿಯನ್ ಸಿಇಒ ಅಕ್ಷಯ್‌ಕುಮಾರ ಸ್ವಾಗತಿಸಿದರು. ಗವಿಸಿದ್ದೇಶ ಹುಡೇಜಾಲಿಮಠ ನಿರೂಪಿಸಿದರು.