ಅಂತರ್‌ ವಿವಿ ಮಹಿಳಾ ಕ್ರಿಕೆಟ್‌: ಮೈಸೂರು ವಿವಿ ಹುಡುಗಿಯರಿಗೆ ಭರ್ಜರಿ ಗೆಲವು

| Published : Feb 28 2024, 02:32 AM IST

ಅಂತರ್‌ ವಿವಿ ಮಹಿಳಾ ಕ್ರಿಕೆಟ್‌: ಮೈಸೂರು ವಿವಿ ಹುಡುಗಿಯರಿಗೆ ಭರ್ಜರಿ ಗೆಲವು
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ವಿವಿ ತಂಡ ಮೊದಲು ಬ್ಯಾಟ್ ಮಾಡಿ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 261 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಇದರೆದುರು ಆಡಿದ ಛತ್ತೀಸ್ ಗಡದ ಅಟಲ್ ಬಿಹಾರಿ ವಾಜಪೇಯಿ ವಿವಿ ತಂಡವು ಕೇವಲ 48 ರನ್‌ಗಳಿಗೆ ಎಲ್ಲ ವಿಕೆಟ್‌ಗಳ‍ನ್ನು ಒಪ್ಪಿಸಿ ಹೀನಾಯವಾಗಿ ಸೋಲೊಪ್ಪಿಕೊಂಡಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಇಲ್ಲಿನ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಆಶ್ರಯದಲ್ಲಿ ಅಖಿಲ ಭಾರತ ವಿವಿಗಳ ಒಕ್ಕೂಟದ ವತಿಯಿಂದ ನಡೆಯುತ್ತಿರುವ ಅಖಿಲ ಭಾರತ ಅಂತರ ವಲಯ ಅಂತರ ವಿವಿ ಮಹಿಳಾ ಕ್ರಿಕೆಟ್ ಪಂದ್ಯಾವಳಿಯ ಮೊದಲ ದಿನ ರಾಜ್ಯದ ಮೈಸೂರ ವಿವಿ ಭರ್ಜರಿಯಾಗಿ 213 ರನ್‌ಗಳಿಂದ ಗೆದ್ದು 2ನೇ ಸುತ್ತು ಪ್ರವೇಶಿಸಿದೆ.ಬಿ ಗ್ರೌಂಡಿನಲ್ಲಿ ನಡೆದ 2ನೇ ಪಂದ್ಯದಲ್ಲಿ ಮೈಸೂರು ವಿವಿ ತಂಡ ಮೊದಲು ಬ್ಯಾಟ್ ಮಾಡಿ ಕೇವಲ 2 ವಿಕೆಟ್‌ಗಳನ್ನು ಕಳೆದುಕೊಂಡು 261 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಇದರೆದುರು ಆಡಿದ ಛತ್ತೀಸ್ ಗಡದ ಅಟಲ್ ಬಿಹಾರಿ ವಾಜಪೇಯಿ ವಿವಿ ತಂಡವು ಕೇವಲ 48 ರನ್‌ಗಳಿಗೆ ಎಲ್ಲ ವಿಕೆಟ್‌ಗಳ‍ನ್ನು ಒಪ್ಪಿಸಿ ಹೀನಾಯವಾಗಿ ಸೋಲೊಪ್ಪಿಕೊಂಡಿತು.

ಇದೇ ಗ್ರೌಂಡ್ 1ನೇ ಪಂದ್ಯದಲ್ಲಿ ವೀರ್ ಬಹದ್ದೂರ್‌ ಸಿಂಗ್ ಪೂರ್ವಾಂಚಲ್ ತಂಡವು 9 ವಿಕೆಟ್ ನಷ್ಟಕ್ಕೆ 112 ರನ್‌ ಮಾಡಿತು. ನಂತರ ಬ್ಯಾಟ್ ಮಾಡಿದ ಕಲ್ಲಿಕೋಟೆ ವಿವಿ ಕೇವಲ 1 ವಿಕೆಟ್ ಕಳೆದುಕೊಂಡು 113 ರನ್ ಮಾಡಿ, 9 ವಿಕೆಟುಗಳ ಜಯ ದಾಖಲಿಸಿತು.ಎ ಗ್ರೌಂಡ್‌ನ 1ನೇ ಪಂದ್ಯದಲ್ಲಿಯೂ ರೋಚಕ ಆಟ ಕಂಡುಬಂತು. ಪಂಜಾಬಿನ ಗುರು ನಾನಕ್ ದೇವ್ ವಿವಿಯ 10 ವಿಕೆಟ್ ಗಳನ್ನು ಕಳೆದುಕೊಂಡರೂ 115 ರನ್ನುಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಯಿತು. ಇದು ಸುಲಭ ಗುರಿ ಎಂದು ಭಾವಿಸಿ ಕಣಕ್ಕಿಳಿದ ಎದುರಾಳಿ ಪುಣೆಯ ಸಾವಿತ್ರಿ ಬಾಯಿ ವಿವಿ 72 ರನ್‌ಗಳನ್ನು ಮಾಡುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ನಾನಕ್ ವಿವಿ 43 ರನ್ನುಗಳ ಜಯ ಕಂಡಿತು.

ಸಿ ಗ್ರೌಂಡಿನಲ್ಲಿ ನಡೆದ 1ನೇ ಪಂದ್ಯದಲ್ಲಿ ಲಲಿತ್ ನಾರಾಯಣ್ ಮಿತಾಲಿ ವಿವಿ ತಂಡವು 94 ರನ್‌ಗಳಿಗೆ 5 ವಿಕೇಟ್ ಒಪ್ಪಿಸಿ ಇನ್ನಿಂಗ್ಸ್ ಮುಗಿಸಿತು. ಉತ್ತರವಾಗಿ ಆಡಿದ ಕೇರಳದ ಮಹಾತ್ಮಾಗಾಂಧಿ ವಿವಿ 69 ರನ್‌ ಗಳಿಸಿ ಪಂದ್ಯವನ್ನು ಸೋತಿತು.ಇದೇ ಗ್ರೌಂಡಿನ 2ನೇ ಪಂದ್ಯದಲ್ಲಿ ಪಟಿಯಾಲದ ಪಂಜಾಬಿ ವಿವಿಯು 65ಕ್ಕೆ ಎಲ್ಲ ವಿಕೆಟ್ ಒಪ್ಪಿಸಿದರೆ, ಕೊಲ್ಹಾಪುರದ ಶಿವಾಜಿ ವಿವಿಯು 3 ವಿಕೆಟ್‌ಗಳಲ್ಲಿ ಗುರಿ ತಲುಪಿ ಮುಂದಿನ ಸುತ್ತಿಗೇರಿತು.