ಕಡೂರುಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು, ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವನೆ ಬೆಳೆಸಲು ರೋಟರಿ ಸಂಸ್ಥೆ ಈ ಇಂಟರಾಕ್ಟ್ ಕ್ಲಬ್‌ಗಳನ್ನು ಸ್ಥಾಪಿಸುತ್ತಿದೆ ಎಂದು ರೋಟರಿ ವಲಯ7 ರ ಸಹಾಯಕ ಗೌವರ್ನರ್ ರೋ.ಪಿ.ಎಚ್.ಎಫ್. ಕೆ.ಬಿ.ದ್ವಾರಕನಾಥ್ ತಿಳಿಸಿದರು.
ರೋಟರಿ ಕ್ಲಬ್ ಆಯೋಜಿಸಿದ್ದ 2026-27ನೇ ಸಾಲಿನ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ ಕಡೂರುಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳು, ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವನೆ ಬೆಳೆಸಲು ರೋಟರಿ ಸಂಸ್ಥೆ ಈ ಇಂಟರಾಕ್ಟ್ ಕ್ಲಬ್‌ಗಳನ್ನು ಸ್ಥಾಪಿಸುತ್ತಿದೆ ಎಂದು ರೋಟರಿ ವಲಯ7 ರ ಸಹಾಯಕ ಗೌವರ್ನರ್ ರೋ.ಪಿ.ಎಚ್.ಎಫ್. ಕೆ.ಬಿ.ದ್ವಾರಕನಾಥ್ ತಿಳಿಸಿದರು.
ಪಟ್ಟಣದ ವೇದಾವತಿ ಬಾಲಿಕಾ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್ ಆಯೋಜಿಸಿದ್ದ 2026-27ನೇ ಸಾಲಿನ ವಿದ್ಯಾರ್ಥಿನಿ ಯರಿಗೆ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ ಇಂಟರಾಕ್ಟ್ ಕ್ಲಬ್‌ಗಳು ವಿದ್ಯಾರ್ಥಿನಿಯರಲ್ಲಿ ಸಭೆಗಳನ್ನು ನಡೆಸುವುದು ಮತ್ತು ಜವಾಬ್ದಾರಿ ನಿಭಾಯಿಸುವ, ಕೌಶಲ್ಯ ಬೆಳೆಸುವುದು, ಶಾಲೆ ಮತ್ತು ಸ್ಥಳೀಯ ಸಮುದಾಯ ದಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಆರೋಗ್ಯ ಜಾಗೃತಿ ಮೂಡಿಸುವುದು, ಸಾರ್ವಜನಿಕವಾಗಿ ಮಾತನಾಡುವ ಕಲೆ ಹಾಗೂ ಸಂವಹನ ಕೌಶಲ್ಯ ಉತ್ತಮಪಡಿಸಿಕೊಳ್ಳುವುದು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಕಡೂರು ಅಧ್ಯಕ್ಷ ಆರ್.ಜಿ.ಕೃಷ್ಣಸ್ವಾಮಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಉತ್ತಮ ನಾಯಕತ್ವ ಗುಣ ಅತ್ಯಂತ ಮುಖ್ಯ. ಇಂಟರ್ಯಾಕ್ಟ್ ಕ್ಲಬ್ ನಾಯಕತ್ವ ಮನೋಭಾವ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.
12 ರಿಂದ 18 ವರ್ಷದ ವಿದ್ಯಾರ್ಥಿಗಳಿಗಾಗಿ ರೂಪುಗೊಂಡಿರುವ ಇಂಟರಾಕ್ಟ್ ಕ್ಲಬ್ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಯುವ ಸೇವಾ ಸಂಘಟನೆಗಳಲ್ಲಿ ಒಂದಾಗಿದೆ. ಮಧ್ಯಮ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ವಿವಿಧ ಸೇವಾ ಯೋಜನೆ ಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜಕ್ಕೆ ನೆರವಾಗುವ ಅವಕಾಶ ಕ್ಲಬ್ ಒದಗಿಸುತ್ತದೆ ಎಂದು ತಿಳಿಸಿದರು.ಇನ್ನೋರ್ವ ಮುಖ್ಯ ಅತಿಥಿಯಾದ ರೋಟರಿ ಕ್ಲಬ್ ಕಾರ್ಯದರ್ಶಿ ರೋ.ಗೋಪಾಲಕೃಷ್ಣ ಮಾತನಾಡಿ, ಕ್ಲಬ್‌ನ ಅಧ್ಯಕ್ಷರು ಸಂಘಟನೆ ಮುನ್ನಡೆಸುತ್ತಾರೆ. ಉಪಾಧ್ಯಕ್ಷರು ಅಧ್ಯಕ್ಷರಿಗೆ ಸಹಕಾರ ನೀಡುತ್ತಾರೆ. ಕಾರ್ಯದರ್ಶಿ ಸಭೆಗಳ ದಾಖಲೆ ಹಾಗೂ ಅಧಿಕೃತ ಸಂವಹನ ನಿರ್ವಹಿಸುತ್ತಾರೆ. ಖಜಾಂಚಿ ಕ್ಲಬ್ ನ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಕ್ಲಬ್‌ನ ಜವಾಬ್ದಾರಿಗಳ ಕುರಿತು ವಿವರಿಸಿದರು.
ವೇದಾವತಿ ಪ್ರೌಢಶಾಲೆ ನೂತನ ಇಂಟರಾಕ್ಟ್ ಕ್ಲಬ್ ರಚಿಸಲಾಯಿತು. ಶ್ರೀರಕ್ಷಾ ಅಧ್ಯಕ್ಷೆ, ನಫ್ಸಿಯಾತಾಜ್ ಕಾರ್ಯದರ್ಶಿ, ಉಪಾದ್ಯಕ್ಷೆ ಚೈತ್ರಾ, ಖಜಾಂಚಿ ಅಫ್ರೀನ್ ತಾಜ್‌ಸಾರ್ಜಂಟ್ ಅಟ್ ಆರ್ಮ್ ಚಿನ್ಮಯ ಕೆ ಎಸ್. ಸಹಕಾರ್ಯದರ್ಶಿ ಸಾಂಘವಿ,ಆಡಳಿತ ಮಂಡಳಿಗೆ ಮಂಜುಶ್ರಿ, ಖುಷಿ, ಗುಣಶ್ರೀ, ಪ್ರತೀಕ್ಷಾ, ಸಾಧನ, ಕೀರ್ತನ ,ಸಾನ್ವೀಕಾ ಆಯ್ಕೆಯಾಗಿದ್ದಾರೆ.ರೋಟರಿ ಸಾರ್ಜೆಂಟ್ ಅಟ್ ಆರ್ಮ್ ರೊ.ಎಚ್.ಬಿ ಹರೀಶ್ ಖಜಾಂಚಿ ರೊ.ಬಿ.ಆರ್ ನಾಗೇಂದ್ರ, ಚಿಕ್ಕಂಗಳ ರೊ. ಮುಕುಂದರಾವ್ ಹಾಗೂ ಜಿಲ್ಲಾ ಇಂಟರಾಕ್ಟ್ ಕೋ ಆರ್ ಡಿನೇಟರ್ ರೊ. ಪಿ.ಎಚ್ ಎಫ್ ಸುಬ್ರಮಣ್ಯ ರೇವಣಕರ್ ಶಾಲೆ ಶಿಕ್ಷಕರು ಉಪಸ್ಥಿತರಿದ್ದರು.
29ಕೆಕೆಡಿಯು2.ಕಡೂರು ಪಟ್ಟಣದ ವೇದಾವತಿ ಬಾಲಿಕ ಪ್ರೌಢ ಶಾಲೆಯಲ್ಲಿ ರೋಟರಿ ಆಯೋಜಿಸಿದ್ದ 2026-27ನೇ ಸಾಲಿನ ವಿದ್ಯಾರ್ಥಿನಿ ಯರಿಗೆ ಇಂಟರಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭವನ್ನು ವಲಯ7 ರ ಸಹಾಯಕ ಗೌವರ್ನರ್ ರೋ.ಪಿ.ಎಚ್.ಎಫ್. ಕೆ.ಬಿ.ದ್ವಾರಕನಾಥ್ ಉದ್ಘಾಟಿಸಿದರು.