ಒಳಮೀಸಲು: ಕೊರಚ ಸಮುದಾಯಕ್ಕೆ ಅನ್ಯಾಯ: ಆದರ್ಶ ಎಲ್ಲಪ್ಪ

| Published : Aug 29 2025, 01:00 AM IST

ಒಳಮೀಸಲು: ಕೊರಚ ಸಮುದಾಯಕ್ಕೆ ಅನ್ಯಾಯ: ಆದರ್ಶ ಎಲ್ಲಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶೈಕ್ಷಣಿಕ, ರಾಜಕೀಯ, ಆರ್ಥಿಕ ಸಮಾಜಿಕವಾಗಿ ಕೊರಚ ಸಮುದಾಯ ಹಿಂದೆ ಉಳಿದಿದೆ. ಎಸ್‌ಸಿ ಒಳಮೀಸಲಾತಿ ಮೂರನೇ ಪಂಥಕ್ಕೆ ಸೇರಿಸಿ ನಮಗೆ ಅನ್ಯಾಯ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ಕೊರಚ ಮಹಾಸಭಾ

ಕನ್ನಡಪ್ರಭ ವಾರ್ತೆ ಆನವಟ್ಟಿ

ಶೈಕ್ಷಣಿಕ, ರಾಜಕೀಯ, ಆರ್ಥಿಕ ಹಾಗೂ ಸಮಾಜಿಕವಾಗಿ ಕೊರಚ ಸಮುದಾಯ ಹಿಂದೆ ಉಳಿದಿದೆ. ಎಸ್‌ಸಿ ಒಳಮೀಸಲಾತಿ ಮೂರನೇ ಪಂಥಕ್ಕೆ ಸೇರಿಸಿ ನಮಗೆ ಅನ್ಯಾಯ ಮಾಡಲಾಗಿದೆ ಎಂದು ಅಖಿಲ ಕರ್ನಾಟಕ ಕೊರಚ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಆದರ್ಶ ಎಲ್ಲಪ್ಪ ಆರೋಪಿಸಿದರು.

ಪಟ್ಟಣದ ನೆಹರೂ ನಗರದ ಮಾರಿಕಾಂಬ ದೇವಸ್ಥಾನ ಎದುರು ಸೋಮವಾರ ಹಮ್ಮಿಕೊಂಡಿದ್ದ 918ನೇ ಶಿವಶರಣ ನುಲಿಯ ಚಂದಯ್ಯನವರ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮುದಾಯ ಸಂಘಟನೆಗೊಳ್ಳುವುದರ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡಿ ಸಮುದಾಯದ ಅಭಿವೃಧಿಗೆ ಪ್ರತಿಯೊಬ್ಬರು ಶ್ರಮಿಸುವ ಅವಶ್ಯಕತೆ ಇದೆ. ಹಗ್ಗ ನೇಯ್ದು, ಮಾರಾಟ ಮಾಡಿ ಬದುಕು ಕಟ್ಟಿಕೊಂಡಿರುವ ಕೊರಚ ಸಮುದಾಯವನ್ನು ಎಸ್‌ಸಿ ಒಳಮೀಸಲಾತಿ ಎಡ ಅಥವಾ ಬಲ ಪಂಥಕ್ಕೆ ಸೇರಿಸಿ ಇಲ್ಲವೇ ಮೂರನೇ ಪಂಥಕ್ಕೆ ಶೇ.1 ಮೀಸಲಾತಿ ಹೆಚ್ಚಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸಮುದಾಯದವರು ಉನ್ನತ ಹುದ್ದೆಯಲ್ಲಿ ಯಾರು ಇಲ್ಲ. ಪೋಷಕರು ತಮ್ಮ ಮಕ್ಕಳಿಗೆ ಒಳ್ಳೇಯ ಶಿಕ್ಷಣ ಕೂಡಿಸುವುದರ ಮೂಲಕ ಹೆಚ್ಚು-ಹೆಚ್ಚು ಸರ್ಕಾರಿ ನೌಕರಿಗಳನ್ನು ಪಡೆದುಕೊಳ್ಳಬೇಕು. ಶೈಕ್ಷಣಿಕ ಪ್ರಗತಿಯಿಂದ ಸಮುದಾಯದ ಅಭಿವೃಧಿ ಸಾಧ್ಯವಿದೆ ಸಲಹೆ ನೀಡಿದರು.

ತಿಮ್ಮಾಪರ ಬಡಾವಣೆಯ ಕೊರಚರ ಬೀದಿಯಿಂದ, ಹೆದ್ದಾರಿಯ ವಿಠ್ಠಲ ರುಕುಮಾಯಿ ದೇವಸ್ಥಾನ ಮಾರ್ಗವಾಗಿ, ಮಾರಿಕಾಂಬ ದೇವಸ್ಥಾನದವರೆಗೂ ವಚನಕಾರ ನುಲಿಯ ಚಂದಯ್ಯ ಅವರ ಭಾವಚಿತ್ರ ಹಿಡಿದು, ವಿವಿಧ ಸಾಂಸ್ಕೃತಿಕ ಕಲಾಮೇಳಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಸಮುದಾಯದ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ತಾಲೂಕು ಘಟಕದ ಅಧ್ಯಕ್ಷ ಜಿ.ಪುಂಡಲೀಕಪ್ಪ, ರಾಜ್ಯ ಘಟಕ ಕಾರ್ಯಾಧ್ಯಕ್ಷ ಸಿದ್ದೇಶ್‌ ಮಾದಾಪುರ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಶಿವಮೊಗ್ಗ, ಉಪಾಧ್ಯಕ್ಷ ಕೆರಿಯಪ್ಪ ಆನವಟ್ಟಿ, ತಾಲೂಕು ಘಟಕದ ಗೌರವ ಅಧ್ಯಕ್ಷ ಹನುಮಂತಪ್ಪ ಬಾವಿಕಟ್ಟಿ, ಉಪಾಧ್ಯಕ್ಷರಾದ ಸಿ. ಅರುಣಕುಮಾರ್‌, ಸಚಿನ್‌ ಎಸ್‌. ಶಿಕಾರಿ, ಕಾರ್ಯದರ್ಶಿ ಲೋಕೇಶ್‌, ಸಹ ಕಾರ್ಯದರ್ಶಿ ಸಿ. ನಾಘರಾಜ, ಖಜಾಂಚಿ ಮಂಜಪ್ಪ ಬಿಳವಾಣಿ, ಮುಖಂಡರಾದ ಚೌಟಿ ಚಂದ್ರಶೇಖರ್‌ ಪಾಟೀಲ್‌, ಜೆ. ಚಂದ್ರಶೇಖರಪ್ಪ, ಮಧುಕೇಶ್ವರ್‌ ಪಾಟೀಲ್‌, ಸದಾನಂದ ಗೌಡ ಬಿಳಗಲಿ, ಅನೀಶ್‌ ಪಾಟೀಲ್‌, ವಿಜಯಮ್ಮ ಮೈಲಾರಪ್ಪ, ಗೀತಾ ಮಲ್ಲಿಕಾರ್ಜುನ್‌, ಪ್ರೇಮ ಗಂಗಾಧರ್‌, ರಮೇಶ್‌ ಬುಡುಗ, ಲಕ್ಕಪ್ಪ, ಮಲ್ಲಿ ಸುರೇಶ್‌, ಕೆ.ಎಸ್‌ ಮಂಜಪ್ಪ, ಕೆ. ಪ್ರದೀಪ್‌ ಇದ್ದರು.